ತೇಲುತ್ತಿರುವ ಉಪಹಾರ ಗೃಹವು ಒಂದು ಪ್ರಭಾವ ಶಾಲಿ ಮತ್ತು ಕೌಶಲ್ಯಪೂರ್ಣ ನಿರ್ಮಾಣವಾಗಿದ್ದು, ಅದು ನೀರಿನ ಮೇಲೆ ತೇಲುತ್ತಿರುವಂತೆ ಭಾಸವಾಗುತ್ತದೆ. ಇದು ಜಿ.ಟಿ ದಾರಿಯಲ್ಲಿ ಕಾಣ ಸಿಗುವ ಸಿರಹಿಂದ ಕಾಲುವೆಯ ಮೇಲೆ ಈ ಉಪಹಾರ ಗೃಹವು ಕಂಡು ಬರುತ್ತದೆ. ಇದು ತನ್ನ ಪ್ರತ್ಯೇಕತೆಯ ಕಾರಣದಿಂದಾಗಿ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತದೆ. ಈ ತೇಲುವ ಉಪಹಾರ ಗೃಹವು ಒಟ್ಟು ಎಂಟು ಕೋಣೆಗಳು ಮತ್ತು ಒಂದು ಉಪಹಾರ ಮಂದಿರವನ್ನು ಒಳಗೊಂಡಿದೆ. ವಿಶೇಷವಾಗಿ ಈ ತೇಲುವ ಉಪಹಾರ ಗೃಹವು ಒಟ್ಟು 8000 ಕುಸೆಕ್ಸ ನೀರಿನ ಒತ್ತಡವನ್ನು ಸಹಿಸಿಕೊಳ್ಳುತ್ತದೆ. ಇದು ಒಂದು ಆಕರ್ಷಕ ಸ್ಥಳದಲ್ಲಿ ಸ್ಥಾಪನೆಯಾಗಿದ್ದು, ಪ್ರಯಾಣಿಕರರಿಗೆ ತಂಗುವ ವ್ಯವಸ್ಥೆಯ ಸೌಲಭ್ಯವನ್ನು ಸಹ ಕಲ್ಪಿಸುತ್ತದೆ. ಇದೊಂದು ಜನಪ್ರಿಯ ಆಕರ್ಷಕ ಪ್ರವಾಸಿ ಕೇಂದ್ರವಾಗಿದ್ದು, ಇದನ್ನು ಪಂಜಾಬ ಪ್ರವಾಸೋದ್ಯಮ ಆಭಿವೃದ್ದಿ ನಿಗಮವು ಇದನ್ನು ನಿಭಾಯಿಸಿಕೊಂಡು ಬರುತ್ತಿದೆ. ಬೇಸಿಗೆ ಕಾಲದಲ್ಲಂತೂ ಈ ಸ್ಥಳವು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.