ಫರೀದ್ಕೋಟ್ನಿಂದ 7 ಕಿ.ಮೀ ದೂರದಲ್ಲಿ ಚಹಲ್ ರಸ್ತೆಯಲ್ಲಿ ನೆಲೆಗೊಂಡಿರುವ ಫೈರಿ ಕಾಟೇಜ್ ಶತಮಾನದಷ್ಟು ಹಳೆಯದು. ಈ ಕಾಟೇಜನ್ನು ನಿರ್ಮಿಸಿದವರು ಮಹಾರಾಜ ಬ್ರಿಜಿಂದರ್ ಸಿಂಗ್, ಇದು ಸುಮಾರು 1910-1911 ರೊಳಗೆ ನಿರ್ಮಾಣ ಮಾಡಲ್ಪಟ್ಟಿತು. ಫೈರಿ ಎಂದರೆ ಯಕ್ಷಿಣಿ ಅಥವಾ ಗಂಧರ್ವರು ಎಂಬ ಅರ್ಥ ಬರುತ್ತದೆ. ಈ ಕಾಟೇಜಿನ ಪ್ರವೇಶದ್ವಾರದಲ್ಲಿರುವ ಗೋಪುರವು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ. ಈ ಕಾಟೇಜ್ ಮಕ್ಕಳ ಆಟದ ಮೈದಾನವಾಗಿ ಮತ್ತು ಪ್ರಸಿದ್ಧ ವಿಹಾರ ತಾಣವಾಗಿ ಗುರುತಿಸಿಕೊಂಡಿದೆ. ಫರೀದ್ಕೋಟ್ನಲ್ಲಿ ರಜಾದಿನಗಳನ್ನು ಕಳೆಯಲು ಹೋಗುವ ಪ್ರತಿಯೊಬ್ಬರು ಇದನ್ನು ನೋಡದೆ ಬರಬಾರದು.