ಷೇಕ್ ಫರಿದ್ ಖಾನ್ ಅಥವಾ ಬಾಬಾ ಫರಿದ್ ಅವರ ಎರಡು ದೊಡ್ಡ ಅಮೃತ ಶಿಲೆಯಿಂದ ಮಾಡಿದ ದ್ವಾರಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿ ಕಟ್ಟಲಾದ ದ್ವಾರವನ್ನು ನೂರಿ ದರ್ವಾಜ಼ಾ ಅಥವಾ ಬೆಳಕಿನ ದ್ವಾರ ಎಂದು ಕರೆಯುತ್ತಾರೆ ಹಾಗೂ ಉತ್ತರಾಭಿಮುಖವಾದ ಬಾಗಿಲನ್ನು ಭೈಷ್ಟಿ ದರ್ವಾಜ಼ಾ ಅಥವಾ ಸ್ವರ್ಗದ ಬಾಗಿಲು ಎಂದು ಕರೆಯುತ್ತಾರೆ.
ಸಮಾಧಿಯ ಒಳಗೆ ಎರಡು ಅಮೃತ ಶಿಲೆಯ ಗುಹೆಗಳಿವೆ ಇವುಗಳನ್ನು ಚಾದರ್ಸ್ ಎಂದು ಕರೆಯುವ ಬಟ್ಟೆಗಳಿಂದ ಆವರಿಸಿ ಇಡಲಾಗಿದೆ. ಇವುಗಳು ಬಾಬಾ ಫರಿದ್ ಮತ್ತು ಆತನ ಹಿರಿಯ ಮಗನ ಸಮಾಧಿಗಳಾಗಿವೆ. ಜನರು ಇಲ್ಲಿ ಬಂದು ಈ ಸಮಾಧಿಗಳಿಗೆ ಹೂವುಗಳನ್ನು ಅರ್ಪಿಸುತ್ತಾರೆ. ಆದರೂ ಇಲ್ಲಿ ಮಹಿಳೆಯರಿಗೆ ಓಳಬರುವಂತಿಲ್ಲ.