Search
  • Follow NativePlanet
Share
ಮುಖಪುಟ » ಸ್ಥಳಗಳು » ಎಲಿಫಂಟಾ » ಹವಾಮಾನ

ಎಲಿಫಂಟಾ ಹವಾಮಾನ

ಅಕ್ಟೋಬರ್ ತಿಂಗಳಿಂದ ನವೆಂಬರ್ ವರೆಗಿನ ಸಮಯವು ಎಲಿಫೆಂಟಾ ಕೇವ್ಸ್ ಗಳಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಬೇಸಿಗೆಗಾಲ

ಎಲಿಫೆಂಟಾ ಸಮುದ್ರ ತೀರದಲ್ಲಿರುವುದರಿಂದ ಇಲ್ಲಿ ಬೇಸಿಗೆಯ ಬೇಗೆಯು ಹೆಚ್ಚಾಗಿಯೆ ಇರುತ್ತದೆ. ವರ್ಷದ ಯಾವ ಕಾಲದಲ್ಲಿ ಶೆಕೆ ಹೆಚ್ಚುತ್ತದೆ ಹಾಗೂ ತಂಪಾದ ವಾತಾವರಣ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬೆಳಗಿನ ಸಮಯದಲ್ಲಿ ತಾಪಮಾನ 30 ರಿಂದ 36 ಡಿಗ್ರಿ ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

ಮಳೆಗಾಲ ಆರಂಭವಾಯಿತೆಂದರೆ ಎಲಿಫೆಂಟಾದಲ್ಲಿ ಧೊ.. ಧೊ..ಎಂದು ಮಳೆ ಸುರಿಯುತ್ತಲೆ ಇರುತ್ತದೆ. ನೀವು ಮಳೆಗಾಲದಲ್ಲೆ ಇಲ್ಲಿಗೆ ಭೇಟಿ ನೀಡುವ ಅನಿವಾರ್ಯತೆ ಒದಗಿ ಬಂದರೆ ಕೋಟು ಹಾಕಿಕೊಂಡು ಅದರ ಮೇಲೆ ರೈನ್ ಕೋಟು ಧರಿಸಿ ನೀರು ಬಿದ್ದರೂ ಹಾಳಾಗದಂತಹ ಶೂಗಳನ್ನೇ ಬಳಸಿ. ಮಳೆಯಲ್ಲೂ ಎಲಿಫೆಂಟಾ ಕೇವಿನಲ್ಲಿ ನೀವು ಖಂಡಿತ ಎಂಜಾಯ್ ಮಾಡಬಹುದು.

ಚಳಿಗಾಲ

ಮುಂಬೈ ನಗರದಂತೆ ಇಲ್ಲಯೂ ಸಾಧಾರಣ ಚಳಿ ಇದ್ದು ಸಮಾನ್ಯವಾಗಿ 16 ಡಿಗ್ರಿ ಸೆಲ್ಶಿಯಸ್ ತಾಪಮಾನ ಇರುತ್ತದೆ.ಭೂಪ್ರದೇಶ ಹಾಗೂ ಸಮುದ್ರದ ಉಷ್ಣಾಂಶದಿಂದಾಗಿ ವಾತಾವರಣ ಆಗಿಂದಾಗೆ ಬದಾಲಾಗುತ್ತಲೆ ಇರುತ್ತದೆ.