ಗಂಧಕ್ ನದಿಯ ಪೂರ್ವ ದಡದಲ್ಲಿ ಇರುವ ಸ್ಥಳ ಇದಾಗಿದೆ. ಎತ್ತರವಾದ 104 ಅಡಿ ಎತ್ತರವಾದ ಈ ಸ್ತೂಪ ಬೌದ್ಧ ಸ್ತೂಪಗಳಲ್ಲೇ ಅತ್ಯಂತ ಎತ್ತರವಾದ ಸ್ತೂಪವಾಗಿದೆ. ಇದು ಪೂರ್ವ ಚಂಪಾರಣ್ ನ ಪ್ರವಾಸೋದ್ಯಮದಲ್ಲಿ ಹಾಗೂ ಬೌದ್ಧ ಧರ್ಮದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಸ್ಥಳವಾಗಿದೆ.
ಈ ಸ್ತೂಪವನ್ನು 1998 ರಲ್ಲಿ ಪತ್ತೆಹಚ್ಚಲಾಯಿತು. ಹಾಗೂ ಇದು ಪ್ರಸಿದ್ಧವಾದ ಹಾಗೂ ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಸ್ಥಾನ ಪಡೆದ ಜಾವಾದಲ್ಲಿರುವ ಬೋರೊಬೊದೂರ್ ಸ್ತೂಪಕ್ಕಿಂತ ಒಂದು ಅಡಿ ಎತ್ತರವಾಗಿದೆ. ಪ್ರಸಿದ್ಧ ಕತೆಗಳಾದ ಬೆಗ್ಗಿಂಗ್ ಬೌಲ್ ಮತ್ತು ಜಟಕ್ ಕಥಾದಲ್ಲಿರುವ ಇನ್ನಿತರ ಪ್ರಸಿದ್ಧ ಕತೆಗಳು ಇಲ್ಲಿ ನಡೆದಿತ್ತು ಎಂದ ಹೇಳಲಾಗಿದೆ.