ಝೊಂಗು ಏಲಕ್ಕಿ ತೋಟಗಳಿಗೆ ಪ್ರಸಿದ್ಧವಾದದ್ದು. ಇದು ಅಷ್ಟಾಗಿ ಬೆಳಕಿಗೆ ಬರದೇ ಇರುವ ಪ್ರದೇಶವಾಗಿದ್ದು ನೋಡಲು ತುಂಬ ಸುಂದರವಾಗಿದೆ. ಇಲ್ಲಿ ಕಣ್ಣು ಹಾಯಿಸುವಷ್ಟು ದೂರದವರೆಗೆ ಭತ್ತದ ಗದ್ದೆಗಳು ಮತ್ತು ಏಲಕ್ಕಿ ತೋಟಗಳನ್ನು ಕಾಣಬಹುದು. ಇಲ್ಲಿನ ಹವಾಮಾನ ಏಲಕ್ಕಿ ಬೆಳೆಯಲು ಸೂಕ್ತವಾಗಿದೆ ಮತ್ತು ಇವುಗಳನ್ನು ಯಾವುದೇ ರೀತಿಯ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಬಳಸದೆ ಬೆಳೆಯಲಾಗುತ್ತದೆ. ಈ ತೋಟಗಳಲ್ಲಿ ಅಡ್ಡಾಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.