ನಗರಕ್ಕೆ ಪ್ರವೇಶ ಮಾಡುವಾಗಲೇ ಇಸ್ಕಾನ್ ಗೇಟನ್ನು ಕಾಣಬಹುದು. ಇಲ್ಲಿಂದ ಸ್ವಲ್ಪ ಮುಂದಕ್ಕೆ ಇಸ್ಕಾನ್ ದೇವಾಲಯವಿದೆ. ಇದು ಕಲ್ಲಿನ ದೇಗುಲವಾಗಿದ್ದು ನಗರದ ದೇವಿ ಭವನ ರಸ್ತೆಯಲ್ಲಿದೆ. ಇದನ್ನು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್(ಇಸ್ಕಾನ್) ನಡೆಸುತ್ತಿದೆ. ಈ ದೇವಾಲಯದಲ್ಲಿ ಕೃಷ್ಣ-ರಾಧೆಯರ ವಿಗ್ರಹವಿದೆ. ಈ ದೇಗುಲದ ಮೇಲ್ಛಾವಣಿಯಲ್ಲಿ ನಿಂತು ದ್ವಾರಕಾಧೀಶ ದೇಗುಲವನ್ನು ನೋಡಬಹುದು.