400 ಸಾವಿರ ಎಕರೆ ಅಡಿಯಷ್ಟು ಜಾಗವನ್ನು ಹೊಂದಿರುವ ಈ ಮಾಲ್ ಭಾರತದ ಅತಿ ದೊಡ್ಡ ಮಾಲ್ ಗಳಲ್ಲಿ ಒಂದಾಗಿದೆ. ದುರ್ಗಾಪುರದ ಜನರ ಹೆಮ್ಮೆಗೆ ಇದು ಕೂಡ ಒಂದು ಕಾರಣ. ಈ ಮಾಲ್ ಗಳಲ್ಲಿ ಶ್ರೇಷ್ಠ ಬ್ರಾಂಡ್ ಗಳ ಜೊತೆಗೆ ಹೊಸ ಚಲನಚಿತ್ರಗಳನ್ನು ತೋರಿಸುವ ಮಲ್ಟಿ ಪ್ಲೆಕ್ಸ್ ಗಳನ್ನೂ ಕಾಣಬಹುದು. ಇದು ನಗರದ ಕೇಂದ್ರ ಭಾಗದಲ್ಲಿದ್ದು ಅಲ್ಲಿನ ಸ್ಥಳೀಯ ಸಾರಿಗೆ ಮೂಲಕ ತಲುಪಬಹುದು. ಯುವ ಪೀಳಿಗೆಯ ಅನೇಕ ಜನರು ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಾರೆ ಮತ್ತು ಕೆಲಸದ ನಂತರ ಸಮಯ ಕಳೆಯಲು ಕೂಡ ಇದು ಸೂಕ್ತ ಸ್ಥಳವಾಗಿದೆ.