ವಿಜಯ ರಾಜರಾಜೇಶ್ವರ ದೇವಸ್ಥಾನವು ಗೈಬ್ ಸಾಗರ ಕೆರೆಯ ದಡದಲ್ಲಿದೆ. ಈ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಅರ್ಪಿತವಾಗಿದೆ ಮತ್ತು ಇದರ ವಾಸ್ತುಶಿಲ್ಪ ಶೈಲಿಯು ಅತ್ಯಂತ ಜನಪ್ರಿಯವಾಗಿದೆ. ಮಹಾರಾವಲ್ ವಿಜಯ ಸಿಂಗ್ ಇದರ ನಿರ್ಮಾಣವನ್ನು ಆರಂಭಿಸಿದರು ಮತ್ತು ನಂತರದಲ್ಲಿ ಈ ದೇವಸ್ಥಾನವು 1923 ರಲ್ಲಿ ಮಾರಾವಲ್ ಲಕ್ಷ್ಮಣ ಸಿಂಗ್ ಸಂಪೂರ್ಣಗೊಳಿಸಿದರು. ಪ್ರವಾಸಿಗರು ಇಲ್ಲಿ ಸುಂದರವಾದ ಶಿವನ ಮೂರ್ತಿಯನ್ನು ಮತ್ತು ಪಾರ್ವತಿಯ ಮೂರ್ತಿಯನ್ನು ನೋಡಬಹುದು.