Search
  • Follow NativePlanet
Share
ಮುಖಪುಟ » ಸ್ಥಳಗಳು» ಡುಂಗಾರಪುರ್

ಡುಂಗಾರಪುರ್ – ದಿಬ್ಬಗಳ ಊರು

10

ರಾಜಸ್ಥಾನದ ದಕ್ಷಿಣ ಭಾಗದಲ್ಲಿ ’ದಿಬ್ಬಗಳ ಊರು’ ಎಂದೇ ಖ್ಯಾತಿಯಾದ ಡುಂಗರಪುರವಿದೆ. ಈ ಪಟ್ಟಣವು ಡುಂಗರಪುರ ಜಿಲ್ಲೆಯ ಆಡಳಿತ ಕೇಂದ್ರವೂ ಹೌದು. ಐತಿಹಾಸಿಕ ದಾಖಲೆಗಳ ಪ್ರಕಾರ ಇದು ಡುಂಗರಪುರ ಎಂಬ ರಾಜ್ಯದ ರಾಜಧಾನಿಯಾಗಿತ್ತು. ಭಿಲ್ಲರು ಈ ಜಿಲ್ಲೆಯಲ್ಲಿ ಪ್ರಮುಖ ಪಂಗಡವಾಗಿದ್ದು, ಹಿಂದಿನ ಕಾಲದಲ್ಲಿ ಇವರು ಆಡಳಿತ ನಡೆಸಿದ್ದರು. ರಾಜ ವೀರ ಸಿಂಗನು ಡುಂಗರಪುರದ ಮುಖ್ಯಸ್ಥನಾಗಿದ್ದು, ಈತ ಭಿಲ್ಲ ಸಮುದಾಯದವನಾಗಿದ್ದ.

ಆಟಿಕೆ ತಯಾರಿಕೆ ಮತ್ತು ಚಿತ್ರ ಚೌಕಟ್ಟು ರಚನೆ – ಸೃಜನಶೀಲತೆಯ ವಿಸ್ತರಣೆ!

ಈ ಪ್ರದೇಶದ ಬಗ್ಗೆ ವಿವರಿಸುವಾಗ ಇಲ್ಲಿನ ಆಟಿಕೆ ಉದ್ಯಮದ ಬಗ್ಗೆ ಹೇಳದೇ ಇರುವ ಹಾಗಿಲ್ಲ. ಇಲ್ಲಿ ಸುಂದರವಾದ ಆಟಿಕೆಗಳನ್ನು ಮರದಿಂದ ಮತ್ತು ಲ್ಯಾಕರಿನಿಂದ ಮಾಡುತ್ತಾರೆ. ಇಲ್ಲಿನ ಬಹುತೇಕ ಆಟಿಕೆಗಳು ಮನುಷ್ಯರ ಮತ್ತು ಪ್ರಾಣಿಗಳ ಪ್ರತಿರೂಪಿಯಾಗಿರುತ್ತದೆ. ಈ ಆಟಿಕೆಗಳನ್ನು ಹಲವು ಮೇಳ ಮತ್ತು ಹಬ್ಬಗಳಲ್ಲಿ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಡುತ್ತಾರೆ. ಡುಂಗರಪುರವು ಚಿತ್ರಕ್ಕೆ ಚೌಕಟ್ಟು ಹಾಕುವುದಕ್ಕೂ ಕೂಡಾ ಜನಪ್ರಿಯವಾಗಿದೆ. ಇಲ್ಲಿ ಚಿನ್ನ ಮತ್ತು ಬೆಳ್ಳಿಯ ಚೌಕಟ್ಟುಗಳನ್ನೂ ಕೂಡಾ ಫೊಟೋಗಳಿಗೆ ಹಾಕಲಾಗುತ್ತದೆ.

ಡುಂಗರಪುರ ಪಟ್ಟಣವು ಭತ್ತ, ತೇಗ, ಮಾವು ಬೆಳೆಗೆ ಜನಪ್ರಿಯವಾಗಿದೆ. ಪ್ರವಾಸಿಗರು ಡುಂಗರಪುರದ ದಟ್ಟಾರಣ್ಯದಲ್ಲಿ ಟ್ರೆಕ್ಕಿಂಗ್‌ಗೆ ಕೂಡಾ ಹೋಗಬಹುದು. ಇಲ್ಲಿ ಅಪರೂಪದ ಪ್ರಾಣಿಗಳನ್ನು ನೋಡಬಹುದು.

ಹಬ್ಬ ಮತ್ತು ಮೇಳಗಳು – ಉಲ್ಲಾಸದ ಸಮಯ!

ಬಾಣೇಶ್ವರ ಹಬ್ಬವು ಡುಂಗರಪುರದ ಬಾಣೇಶ್ವರ ದೇವಸ್ಥಾನದಲ್ಲಿ ಆಚರಿಸುವ ಜನಪ್ರಿಯ ಹಬ್ಬ. ಈ ಹಬ್ಬವು ಫೆಬ್ರುವರಿಯ ಅಥವಾ ಮಾಘ ಶುಕ್ಲ ಪೂರ್ಣಿಮೆಯಂದು ನಡೆಯುತ್ತದೆ. ಅಂದು ಈ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಪ್ರವಾಸಿಗರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಭಿಲ್ಲರು ಗುಜರಾತ್‌, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಭಕ್ತರು ಆಗಮಿಸುತ್ತಾರೆ. ಮಾಹಿ ಮತ್ತು ಸೋಮ ನದಿಯಲ್ಲಿ ಭಕ್ತರು ಮುಳುಗೇಳುತ್ತಾರೆ. ತಾಂತ್ರಿಕ ಗಣೇಶ, ಬ್ರಾಹ್ಮಿ ದೇವತೆಗಳು ಜಿಂಕೆ ಚರ್ಮವನ್ನು ಹೊದ್ದು, ಶಿವ, ವೀಣೆ, ಪದ್ಮಿಡಿ, ಪದ್ಮಪಾಣಿ ಯಕ್ಷ, ವೈಷ್ಣವಿಯು ಗರುಡನ ಮೇಲೆ ಸವಾರಿ ಮಾಡುತ್ತಾರೆ. ಡುಂಗರಪುರದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ವಾಗಲ್‌ ಕೂಡಾ ಒಂದು. ಈ ಹಬ್ಬವು ಜಾನಪದ ನೃತ್ಯ ಪ್ರಕಾರ ಮತ್ತು ಈ ಪ್ರದೇಶದ ಸಂಗೀತವನ್ನು ಪ್ರದರ್ಶಿಸುತ್ತದೆ. ಹೋಳಿಯನ್ನು ಸಾಂಪ್ರದಾಯಿಕ ನೃತ್ಯಗಳಿಂದ ಇಲ್ಲಿ ಆಚರಣೆ ಮಾಡಲಾಗುತ್ತದೆ. ಭಾರತೀಯ ಬೆಳಕಿನ ಹಬ್ಬವಾದ ದೀಪಾವಳಿ, ಬಾರ್ ಬ್ರಿಜ್‌ ಹಬ್ಬವನ್ನೂ ಕೂಡಾ ಈ ಪ್ರದೇಶದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.

ವಾಸ್ತುಶಿಲ್ಪ – ಕಲ್ಲಿನಲ್ಲಿ ಕಲೆ!

ಆಟಿಕೆಗಳು ಮತ್ತು ಹಬ್ಬಗಳ ಹೊರತಾಗಿ ಡುಂಗರಪುರ ಇಲ್ಲಿನ ಅರಮನೆಗಳು, ಪುರಾತನ ದೇವಲಾಯಗಳು, ಮ್ಯೂಸಿಯಂ ಮತ್ತು ಕೆರೆಗಳಿಗೂ ಜನಪ್ರಿಯವಾಗಿದೆ. ಉದಯ ವಿಲಾಸ ಅರಮನೆಯು ಇಲ್ಲಿ ರಜಪೂತ ಶೈಲಿಯ ವಾಸ್ತುಶಿಲ್ಪದಿಂದಾಗಿ ಜನಪ್ರಿಯವಾಗಿದೆ. ಈ ಬೃಹತ್‌ ಅರಮನೆಯು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು ಇವುಗಳನ್ನು, ರಾಣಿವಾಸ, ಉದಯ ವಿಲಾಸ ಮತ್ತು ಕೃಷ್ಣ ಪ್ರಕಾಶ ಅಥವಾ ಎಕ್‌ ಥಂಬಿಯಾ ಮಹಲ್‌ ಎಂದು ಕರೆಯಲಾಗಿದೆ.

ಸುಂದರವಾಗಿ ವಿನ್ಯಾಸಗೊಳಿಸಿದ ಬಾಲ್ಕನಿಗಳು, ಕಮಾನುಗಳು ಮತ್ತು ಕಿಟಕಿಗಳಿಂದಾಗಿ, ಈ ಅರಮನೆಯು ಸದ್ಯ ಹೋಟೆಲ್‌ ಆಗಿ ಮಾರ್ಪಟ್ಟಿದೆ. ಗಾಜಿನ ಮತ್ತು ಗ್ಲಾಸ್‌ ಕೆಲಸಗಳಿಗೆ ಜನಪ್ರಿಯವಾದ ಜುನಾ ಮಹಲ್‌ನ್ನು ಪ್ರವಾಸಿಗರು ನೋಡಬಹುದು. ಬಾದಲ್‌ ಮಹಲ್‌ ಇನ್ನೊಂದು ಸುಂದರವಾದ ಅರಮನೆ. ಈ ಅರಮನೆಯು ಗೈಬ್‌ ಸಾಗರ ಕೆರೆಯ ಸಮೀಪದಲ್ಲಿದೆ. ಇದು ತನ್ನ ಸುಂದರ ವಿನ್ಯಾಸ ಮತ್ತು ರಜಪೂತ ಹಾಗೂ ಮೊಘಲ್‌ ವಾಸ್ತುಶಿಲ್ಪದ ಫ್ಯೂಷನ್‌ ಶೈಲಿಗೆ ಹೆಸರಾಗಿದೆ.

ಡುಂಗರಪುರವು ಹಿಂದು ಮತ್ತು ಜೈನ ದೇವಾಲಯಗಳಿಗೆ ಪ್ರಸಿದ್ಧವಾದದ್ದು. ಪ್ರವಾಸಿಗರು ಬಾಣೇಶ್ವರ ದೇವಸ್ಥಾನ, ಭಬುವನೇಶ್ವರ, ಸುರಪುರ ದೇವಸ್ಥಾನ, ಡಿಯೊ ಸೋಮನಾಥ ದೇವಸ್ಥಾನ, ವಿಜಯ ರಾಜರಾಜೇಶ್ವರ ದೇವಸ್ಥಾನ ಮತ್ತು ಶ್ರೀನಾತ್‌ಜಿ ದೇವಸ್ಥಾನವನ್ನು ಭೇಟಿ ಮಾಡಬಹುದು. ಗೈಬ್‌ ಸಾಗರ ಕೆರೆಯು ಸುಂದರವಾದ ತಾಣವಾಗಿದ್ದು, ಈ ಕೆರೆಯ ದಡದಲ್ಲಿ ಹಲವು ದೇವಸ್ಥಾನಗಳು ಮತ್ತು ಅರಮನೆಗಳಿವೆ. ಪ್ರವಾಸಿಗರು ಡುಂಗರಪುರಕ್ಕೆ ಬರುವ ದಾರಿಯಲ್ಲಿ ರಾಜಮಾತಾ ದೇವೇಂದ್ರ ಕುಂವರ‍್, ಸರ್ಕಾರಿ ಮ್ಯೂಸಿಯಂ, ನಾಗಫಂಜಿ, ಗಾಲಿಯಾಕೋಟ್‌ ಮತ್ತು ಫತೇಹ್‌ಗರಿಯನ್ನು ಭೇಟಿ ಮಾಡಬಹುದು.

ಡುಂಗರಪುರಕ್ಕೆ ಹೋಗುವುದು

ಡುಂಗರಪುರ ಜಿಲ್ಲೆಗೆ ವಿಮಾನ, ರೈಲು ಮತ್ತು ಬಸ್ಸಿನ ಮೂಲಕ ತಲುಪಬಹುದು. ಮಹಾರಾಣ ಪ್ರತಾಪ ವಿಮಾನ ನಿಲ್ದಾಣ ಅಥವಾ ಉದಯಪುರದ ಡಬೋಕ್‌ ವಿಮಾನ ನಿಲ್ದಾಣವು ಡುಂಗರಪುರಕ್ಕೆ ಸಮೀಪದ ವಿಮಾನ ನಿಲ್ದಾಣ. ವಿದೇಶಿ ಪ್ರವಾಸಿಗರು ಡುಂಗರಪುರಕ್ಕೆ, ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರಬಹುದು. ಮಧ್ಯಪ್ರದೇಶ ರಾಜ್ಯದಲ್ಲಿನ ರಾಟ್ಲಮ್‌ನಲ್ಲಿರುವ ರೈಲ್ವೇ ನಿಲ್ದಾಣವು ಡುಂಗರಪುರಕ್ಕೆ ಸಮೀಪದ ರೈಲ್ವೆ ನಿಲ್ದಾಣ. ಕ್ಯಾಬ್‌ಗಳು, ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ ಡುಂಗರಪುರಕ್ಕೆ ಲಭ್ಯವಿದೆ. ಪ್ರವಾಸಿಗರು ಉದಯಪುರ ಮತ್ತು ಸಮೀಪದ ನಗರಗಳಿಂದ ಡುಂಗರಪುರಕ್ಕೆ ಬಸ್‌ ವ್ಯವಸ್ಥೆಯನ್ನು ಪಡೆಯಬಹುದು.

ಡುಂಗರಪುರವು ವರ್ಷಪೂರ್ತಿ ಒಣ ಹವೆಯನ್ನು ಹೊಂದಿದೆ. ಡುಂಗರಪುರಕ್ಕೆ ಪ್ರವಾಸ ಮಾಡುವ ಉತ್ತಮ ಕಾಲವೆಂದರೆ, ಅಕ್ಟೋಬರ‍್ ಮತ್ತು ನವೆಂಬರಿನ ಅವಧಿ. ಈ ಸಮಯದಲ್ಲಿ ಇಲ್ಲಿನ ವಾತಾವರಣವು ಪ್ರಶಾಂತವಾಗಿರುತ್ತದೆ.

ಡುಂಗಾರಪುರ್ ಪ್ರಸಿದ್ಧವಾಗಿದೆ

ಡುಂಗಾರಪುರ್ ಹವಾಮಾನ

ಉತ್ತಮ ಸಮಯ ಡುಂಗಾರಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಡುಂಗಾರಪುರ್

  • ರಸ್ತೆಯ ಮೂಲಕ
    ಸರ್ಕಾರಿ ಬಸ್‌ಗಳ ಮೂಲಕ ಉದಯಪುರದಿಂದ ಡುಂಗರಪುರಕ್ಕೆ ಪ್ರಯಾಣಿಸಬಹುದು. ಸಮೀಪದ ನಗರಗಳಿಂದ ಖಾಸಗಿ ಮತ್ತು ಲಕ್ಷುರಿ ಬಸ್‌ಗಳೂ ಕೂಡಾ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಡುಂಗರಪುರಕ್ಕೆ ಸಮೀಪದ ರೈಲ್ವೇ ನಿಲ್ದಾಣವು ಮಧ್ಯಪ್ರದೇಶದ ರಟ್ಲಮ್‌ನಲ್ಲಿದೆ. ದೆಹಲಿ, ಮುಂಬೈ ಮತ್ತು ಚೆನ್ನೈನಂಥ ಭಾರತದ ಪ್ರಮುಖ ನಗರಗಳಿಗೆ ನಿರಂತರ ರೈಲುಗಳಿಂದ ಸಂಪರ್ಕವನ್ನು ಹೊಂದಿದೆ. ಅನುಕೂಲಕರ ಬೆಲೆಯಲ್ಲಿ ಡುಂಗರಪುರಕ್ಕೆ ಈ ನಿಲ್ದಾಣದಿಂದ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಉದಯಪುರದ ಮಹಾರಾಣ ಪ್ರತಾಪ ವಿಮಾನ ನಿಲ್ದಾಣ ಅಥವಾ ಡಬೋಕ್‌ ವಿಮಾನ ನಿಲ್ದಾಣವು ಡುಂಗರಪುರಕ್ಕೆ ಸಮೀಪದ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಹೈದರಾಬಾದ್‌, ಜೈಪುರ, ಜೋಧ್‌ಪುರ ಮತ್ತು ಅಹ್ಮದಾಬಾದ್‌ಗೆ ನಿರಂತರ ವಿಮಾನಗಳಿಂದ ಸಂಪರ್ಕವನ್ನು ಬೆಳೆಸುತ್ತಿದೆ. ವಿದೇಶಿ ಪ್ರವಾಸಿಗರು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ತಲುಪಬಹುದು. ಪ್ರವಾಸಿಗರು ಡುಂಗರಪುರಕ್ಕೆ ಮಹಾರಾಣ ಪ್ರತಾ‌ಪ ವಿಮಾನ ನಿಲ್ದಾಣದಿಂದ ಕ್ಯಾಬ್‌ ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri