Search
  • Follow NativePlanet
Share
ಮುಖಪುಟ » ಸ್ಥಳಗಳು» ದುಮ್ಕಾ

ದುಮ್ಕಾ- ಯಾತ್ರಾಸ್ಥಳ ಮತ್ತು ಅಣೆಕಟ್ಟಿಗೆ ಪ್ರಸಿದ್ಧವಾದದ್ದು

20

ದುಮ್ಕಾ ಬುಡಕಟ್ಟು ಜನಾಂಗಗಳಿಗೆ ಹೆಸರುವಾಸಿಯಾದದ್ದು. ಜಾರ್ಖಂಡಿನ ಶಾಂತಲ ಪ್ರಜ್ಞಾ ವಿಭಾಗದ ಮುಖ್ಯಕೇಂದ್ರ ಮತ್ತು ರಾಜ್ಯದ ಪುರಾತನ ಜಿಲ್ಲೆಗಳಲ್ಲಿ ಒಂದು. ಇದೊಂದು ಸುಂದರ ಪ್ರಾಕೃತಿಕ ತಾಣ. ಎತ್ತರದ ಪರ್ವತಗಳು, ಅದ್ಭುತ ಭೂಮೇಲ್ಮೈ, ನದಿಗಳು ಮತ್ತು ಹಸಿರು ಕಣಿವೆಗಳು ನೋಡುಗರ ಕಣ್ಣಿಗೆ ರಸದೌತಣ ನೀಡುತ್ತದೆ. ಇದು ಜಾರ್ಖಂಡಿನ 24 ಜಿಲ್ಲೆಗಳಲ್ಲಿ ಒಂದು. ಭಾರತದ ಹಿಂದುಳಿದ ಜಿಲ್ಲೆಗಳಲ್ಲಿ ಇದು ಕೂಡ ಒಂದಾಗಿತ್ತು. ದುಮ್ಕಾ ಬ್ರಿಟೀಷರಿಂದ ಆಡಳಿತ ಜಿಲ್ಲೆಯಾಗಿ ರೂಪುಗೊಂಡಿದ್ದು ‘ದಾಮಿನ್-ಈ-ಕೋ’ ಎಂದು ಪ್ರಸಿದ್ಧವಾಗಿತ್ತು. ಈಗ ಇದು ಜಾರ್ಖಂಡಿನ ಉಪ ರಾಜಧಾನಿಯಾಗಿ ಹೆಸರುವಾಸಿಯಾಗಿದೆ. ಇಲ್ಲಿ ಮಣ್ಣಿನ ಸವಕಳಿ ಹೆಚ್ಚಾದ್ದರಿಂದ ಫಲವತ್ತಾದ ಭೂಮಿ ಕಡಿಮೆ.

ದುಮ್ಕಾದ ಸುತ್ತಮುತ್ತಲ ಪ್ರವಾಸಿ ತಾಣಗಳು

ಬೆಟ್ಟಗಳು, ಅರಣ್ಯಗಳು ಮತ್ತು ನದಿಗಳಿಂದ ಈ ಪ್ರದೇಶವು ಆವೃತವಾಗಿದೆ. ಇದು ಬೆಟ್ಟದ ಮೇಲಿದ್ದು ಇಲ್ಲಿ ಉತ್ತರದಿಂದ ದಕ್ಷಿಣದವರೆಗೆ ಬೆಟ್ಟಸಾಲುಗಳು ಹಬ್ಬಿವೆ.  ನೊನಿಹತ್ನ ಸಮೀಪ ಲಾಗ್ವಾ ಬೆಟ್ಟಗಳಿದ್ದು ನೋಡಲು ಸುಂದರವಾಗಿದೆ. ಚಾರಣಪ್ರಿಯರಿಗೆ ಈ ಜಾಗ ಇಷ್ಟವಾಗುತ್ತದೆ. ಬೆಟ್ಟದ ಮೇಲಿನ ನೋಟ ಅದ್ಭುತವಾಗಿದೆ. ದಕ್ಷಿಣದಿಂದ ಪೂರ್ವಕ್ಕೆ ರಾಮಗರ್ ಬೆಟ್ಟ ಸಾಲಿದೆ. ಇದೊಂದು ಯಾತ್ರಾಸ್ಥಳ. ಇಲ್ಲಿ ಬಾಬಾ ಬಸುಕಿನಾಥ ಧಾಮ, ಮಲೋಟಿ, ಬಾಬಾ ಸುಮೇಶ್ವರ ನಾಥ ಮತ್ತು ಚೌತೋನಾಥ್ಗಳಿವೆ. ಮಸಂಜೊರೆ ಅಣೆಕಟ್ಟು, ಕುಮ್ರಾಬಾದ್, ಕುರ್ವಾ ಅಥವ ಶೃಷ್ಟಿ ಪಾರ್ಕ್ ಮೊದಲಾದ ಪ್ರವಾಸಿ ತಾಣಗಳಿವೆ. ಮಯೂರಾಕ್ಷಿ ಇಲ್ಲಿ ಹರಿಯುವ ಪ್ರಮುಖ ನದಿ.

ಭೇಟಿಗೆ ಸೂಕ್ತ ಸಮಯ

ದುಮ್ಕಾದಲ್ಲಿ ಹವೆಯಲ್ಲಿ ಆರ್ದ್ರತೆ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಧಗೆ ಮತ್ತು ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ.

ಹೋಗುವುದು ಹೇಗೆ?

ದುಮ್ಕಾ ಉತ್ತಮ ರಸ್ತೆ ಸೌಲಭ್ಯವನ್ನು ಹೊಂದಿದೆ. ಜಸಿದ್ಹನಲ್ಲಿ ರೈಲ್ವೇ ಸಂಪರ್ಕವಿದೆ. ಬರಲಿರುವ ಹೊಸ ರೈಲು ಮಾರ್ಗಗಳು ಇಲ್ಲಿಗೆ ತಲುಪುವುದನ್ನು ಇನ್ನಷ್ಟು ಸರಾಗಗೊಳಿಸುತ್ತವೆ.

ಹವಾಮಾನ:

ದುಮ್ಕಾದಲ್ಲಿ ಆರ್ದ್ರತೆ ಹೆಚ್ಚಿರುತ್ತದೆ. ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ ಫೆಬ್ರವರಿ-ಏಪ್ರಿಲ್.

ದುಮ್ಕಾ ಪ್ರಸಿದ್ಧವಾಗಿದೆ

ದುಮ್ಕಾ ಹವಾಮಾನ

ಉತ್ತಮ ಸಮಯ ದುಮ್ಕಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದುಮ್ಕಾ

  • ರಸ್ತೆಯ ಮೂಲಕ
    ಜಾರ್ಖಂಡಿನ ಎಲ್ಲ ಪ್ರಮುಖ ನಗರಗಳೊಂದಿಗೆ ದುಮ್ಕಾ ಉತ್ತಮ ರಸ್ತೆಸಂಪರ್ಕ ಹೊಂದಿದೆ. ದುಮ್ಕಾದಲ್ಲಿ ಮೂರು ಚಕ್ರದ ಗಾಡಿಗಳನ್ನು ಹೆಚ್ಚಾಗಿ ಕಾಣಬಹುದು. ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ. ಕೊಲ್ಕತ್ತ ಮತ್ತು ರಾಂಚಿಗಳಿಂದ ಲಕ್ಷುರಿ ಬಸ್ಗಳು ರಾತ್ರಿ ವೇಳೆ ಓಡಾಡುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರೈಲುಗಳು ರಾಂಚಿ ಮತ್ತು ಜಸಿದ್ಹಿಗಳ ಮೂಲಕ ದುಮ್ಕಾವನ್ನು ಸಂಪರ್ಕಿಸುತ್ತದೆ. ಅನೇಕ ರೈಲ್ವೇ ಯೋಜನೆಗಳು ಅನುಷ್ಟಾನಗೊಳ್ಳಲಿದ್ದು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಬಿಹಾರದ ಬಗಲ್ಪುರ್ ಮತ್ತು ಪಶ್ಚಿಮ ಬಂಗಾಳದ ರಾಂಪುರ್ಹತ್ ಶೀಘ್ರದಲ್ಲಿ ದುಮ್ಕಾದೊಂದಿಗೆ ರೈಲು ಸಂಪರ್ಕ ಹೊಂದಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    There is no air port available in ದುಮ್ಕಾ
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat