Search
  • Follow NativePlanet
Share
ಮುಖಪುಟ » ಸ್ಥಳಗಳು» ದುಧ್ವಾ

ದುಧ್ವಾ : ರಾಯಲ್ ಹುಲಿ ಭೂಮಿ

8

ದುಧ್ವಾ ಉತ್ತರಪ್ರದೇಶದ ಉಪಹಿಮಾಲಯದ ಭಾಗವಾದ ಟೆರೈ ಪ್ರದೇಶದಲ್ಲಿ ನೆಲೆಸಿದೆ. ದುಧ್ವಾ ಎಂದರೆ ಸಾಕು ದುಧ್ವಾ ಟೈಗರ್ ರಿಸರ್ವ್ ಪ್ರದೇಶವೇ ನೆನಪಿಗೆ ಬರುತ್ತದೆ. ಈ ಉದ್ಯಾನವನವು ಭಾರತ ಮತ್ತು ನೇಪಾಳದ ಗಡಿ ಪ್ರದೇಶವಾದ ಲಕ್ಷ್ಮೀಪುರ -ಖೇರಿ ಜಿಲ್ಲೆಯಲ್ಲಿದೆ. ಟೆರೈ ಪ್ರದೇಶದ ಕೊನೆಯ ಅವಶೇಷವಾದ ದುಧ್ವಾವನ್ನು ಹೆಚ್ಚು ಅಳಿವಿನಂಚಿನಲ್ಲಿರುವ ಪರಿಸರ ಹೊಂದಿದ ಭೂಮಿ ಎಂದು ಪರಿಗಣಿಸಲಾಗಿದೆ.

ದುಧ್ವಾ ರಾಷ್ಟ್ರೀಯ ಉದ್ಯಾನವನ

1958 ರಲ್ಲಿ ಪ್ರಾರಂಭವಾದ ಈ  ಉದ್ಯಾನವನ ಜಿಂಕೆ ವನ್ಯಜೀವಿ ಅಭಯಾರಣ್ಯವಾಗಿತ್ತು. ಅರ್ಜನ್ ಸಿಂಗ್ ಅವರ ಪರಿಶ್ರಮದ ಮೂಲಕ 1977 ಜನವರಿಯಲ್ಲಿ ಈ ಉದ್ಯಾನವನ ಹೆಚ್ಚಿನ ಗಮನ ಸೆಳೆಯಿತು. ಹತ್ತು ವರ್ಷದ ನಂತರ 1988 ರಲ್ಲಿ ಕಿಶನ್ಪುರ ವನ್ಯಜೀವಿ ಅಭಯಾರಣ್ಯ ಮತ್ತು ಕಟರ್ನಾಯ್ ಘಾಟ್ ಅಭಾಯಾರಣ್ಯದೊಂದಿಗೆ ಹುಲಿ ಮೀಸಲು ಪ್ರದೇಶವಾಗಿ ಇದನ್ನು ಘೋಷಿಸಲಾಯಿತು.

ಈ ಟೈಗರ್ ರೆಸರ್ವ್ ಅನ್ನು 2 ಭಾಗಗಳಾಗಿ ವಿಭಾಗಿಸಲಾಗಿದೆ. ದುಧ್ವ ರಾಷ್ಟ್ರೀಯ ಉದ್ಯಾನವನ ಮತ್ತು ಕಿಶನ್ ಪುರ ಅಭಯಾರಣ್ಯ. ಇವೆರಡು ಸುಮಾರು 15 ಕಿ.ಮೀ ಅಂತರದಲ್ಲಿವೆ. ಭಾರತ ಮತ್ತು ನೇಪಾಳದ ಗಾಡಿಯಲ್ಲಿ ಹರಿಯುವ ಮೋಹನ ನದಿಯು ಈ ಅಭಯಾರಣ್ಯದ ಉತ್ತರ ಭಾಗದಲ್ಲಿ ಮತ್ತು ಸುಹೇಲಿ ನದಿಯು ದಕ್ಷಿಣ ಭಾಗದಲ್ಲಿ ಹರಿಯುತ್ತದೆ.

ಈ ಪ್ರದೇಶವು ಹೆಚ್ಚಾಗಿ ಸರೋವರಗಳು, ಕೆರೆ ಮತ್ತು ಹಲವಾರು ನದಿಗಳು, ಮೆಕ್ಕಲು ಮಣ್ಣಿನ ಮೈದಾನಗಳನ್ನು ಹೊಂದಿದೆ. ಅತ್ಯಂತ ಶ್ರೀಮಂತ ಮತ್ತು ಫಲವತ್ತಾದ ಇಂಡೋ-ಗಂಗಾ ಬಯಲು, ವಿಭಿನ್ನ ಸಸ್ಯ ಮತ್ತು ಸಾಲ್ ಮರ ಮತ್ತು ಪಾರ್ಕ್ ಮತ್ತು ಇತರ ಕಾಡುಗಳನ್ನು ಒಳಗೊಂಡಿವೆ.

ದುಧ್ವಾ ರಾಷ್ಟ್ರೀಯ ಉದ್ಯಾನವನದ ವನ್ಯ ಜೀವನ

ರಾಷ್ಟ್ರೀಯ ಪಾರ್ಕ್ ಆಕರ್ಷಕ ವನ್ಯಜೀವಿಗಳ ವ್ಯಾಪಕ ನೆಲೆಯಾಗಿದೆ. ಇಲ್ಲಿ ಪ್ರಧಾನವಾಗಿ ಕಂಡುಬರುವ ಪ್ರಾಣಿಗಳೆಂದರೆ ಚಿರತೆ ಬೆಕ್ಕು, ಮೀನು ತಿನ್ನುವ ಬೆಕ್ಕು, ರಾಟೆಲ್, ಸಿವೆಟ್, ಗುಳ್ಳೆನರಿ, ಹಾಗ್ ಜಿಂಕೆಗಳು ಮತ್ತು ಬಾರ್ಕಿಂಗ್ ಜಿಂಕೆಗಳು. ಇದು 1951 ರಲ್ಲಿ ನಶಿಸುವ ಹಂತದಲ್ಲಿತ್ತು ತದನಂತರ ಸಂರಕ್ಷಣಾಕಾರರು 1984 ರಲ್ಲಿ ಇದನ್ನು ಮರು ಸೃಷ್ಟಿಸಿದರು. ಇತರ ಪ್ರಮುಖ ಆಕರ್ಷಣೆಗಳಾದ  ಸಣ್ಣ ಮೂಗಿನ ಮೊಸಳೆ ಹೆಬ್ಬಾವುಗಳು ಮತ್ತು ಮಾನಿಟರ್ ಹಲ್ಲಿಗಳನ್ನು ನದಿ ತೀರದಲ್ಲಿ ನೋಡಬಹುದು.

ಧುದ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಪಕ್ಷಿಗಳು

ದುಧ್ವಾ ಹಕ್ಕಿಗಳಿಗೆ ಉತ್ಸಾಹದ ತಾಣ ಆಗಿದೆ. ಈ ರಾಷ್ಟ್ರೀಯ ಉದ್ಯಾನವು ಸುಮಾರು 400 ಬಗೆಯ ಸ್ಥಳೀಯ ಹಾಗು ವಲಸಿಗ ಹಕ್ಕಿಗಳಿಗೆ ನೆಲೆಯಾಗಿದೆ. ಪಾರ್ಕ್ ಒಳಗಿರುವ ಕೊಳ ಹಾಗು ಕೆರೆಗಳು ನೀರಿನ ಕೋಳಿಗಳು ಮತ್ತು ಇತರೆ ವಲಸೆ ಬರುವ ನೀರಿನ ಪಕ್ಷಿಗಳನ್ನು ಆಕರ್ಷಿಸುತ್ತವೆ. ಪಾರ್ಕ್ ಒಳಗೆ ಉತ್ತಮ ವೀಕ್ಷಣಾ ಪಕ್ಷಿಗಳೆಂದರೆ  ಬೆಳ್ಳಕ್ಕಿಗಳು, ಹೆಬ್ಬಾತು, ನೀರು ಕಾಗೆಗಳು, ಕೊಕ್ಕರೆ, ಮತ್ತು ಹಂಸ. ಇವುಗಳ ಹಲವಾರು ಜಾತಿಗಳನ್ನೂ  ನೋಡಬಹುದು. ಉದಾಹರಣೆಗೆ ಕೊಕ್ಕರೆಗಳು, ಬಿಳಿ ಕತ್ತಿನ ಕೊಕ್ಕರೆಗಳು, ಬಣ್ಣದ ಕೊಕ್ಕರೆಗಳು ಮತ್ತು ತೆರೆದ ಕೊಕ್ಕಿನ ಕೊಕ್ಕರೆಗಳು ಹೀಗೆ ವಿವಿಧ ಉದ್ದ ಕೊಕ್ಕನ್ನು ಹೊಂದಿರುವ ನೀರಿನಲ್ಲಿ ಕಂಡುಬರುವ ಪಕ್ಷಿಗಳನ್ನು ನೋಡಬಹುದು.  ಜೊತೆಗೆ ಪರಿಸರದ ಸ್ಪಂದನಕ್ಕೆ ಸೇರುವ ಮರಕುಟಿಗಗಳು, ಕುಟ್ರಹಕ್ಕಿಗಳು, ಚಿತ್ರಪಕ್ಷಿಗಳು, ಬುಲ್‍ಬುಲ್‍ಗಳು ಮತ್ತು ಮಿಂಚುಳ್ಳಿಗಳು ನೋಡುಗರ ಗಮನ ಸೆಳೆಯುತ್ತದೆ.

ದುಧ್ವಾ ಪ್ರಸಿದ್ಧವಾಗಿದೆ

ದುಧ್ವಾ ಹವಾಮಾನ

ಉತ್ತಮ ಸಮಯ ದುಧ್ವಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದುಧ್ವಾ

  • ರಸ್ತೆಯ ಮೂಲಕ
    ದುಧ್ವಾ ಉತ್ತರ ಪ್ರದೇಶದ ಇತರ ಮುಖ್ಯ ನಗರಗಳಾದ ಲಖನೌ, ಬರೇಲಿ, ಪಿಲೈ ಮತ್ತು ದೆಹಲಿಗೆ ಕೂಡ ಸಂಪರ್ಕ ಹೊಂದಿದೆ. ಖಾಸಗಿ ಬಸ್ಸಿನ ಜೊತೆಯಲ್ಲಿ ಬೇಕಿದ್ದರೆ ಖಾಸಗಿ ಟ್ಯಾಕ್ಸಿ ಮೂಲಕವೂ ದುಧ್ವಾ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದುಧ್ವಾ ಈಶಾನ್ಯ ರೈಲ್ವೆ ಮಾರ್ಗದಲ್ಲಿ ಸಂಪರ್ಕ ಹೊಂದಿದೆ. ಇದು ಮುಂಬೈ, ನೈನಿತಾಲ್ ಮತ್ತು ಲಖನೌ ಗೆ ಸಂಪರ್ಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದುಧ್ವಾದಲ್ಲಿ ವಿಮಾನ ನಿಲ್ದಾಣವಿಲ್ಲ. ಆದಾಗ್ಯೂ ನೀವು ದೆಹಲಿ ಅಥವಾ ಲಖನೌಗೆ ಬಂದು ಅಲ್ಲಿಂದ ರೈಲು ಅಥವಾ ರಸ್ತೆ ಮಾರ್ಗವಾಗಿ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City