ದ್ರಾಸ್ ಗೆ ಭೇಟಿ ನೀಡುವ ಪ್ರವಾಸಿಗರು ಹತ್ತಿರದಲ್ಲಿರುವ ಸುರು ಕಣಿವೆಗೆ ಚಾರಣವನ್ನು ಕೈಗೊಳ್ಳಬಹುದು. ಸುರು ಕಣಿವೆಯ ಚಾರಣವು, ಒಂದು ಬದಿಯಲ್ಲಿ ಮೇಲಿನ ಸ್ತರದಲ್ಲಿ ನೆಲೆಗೊಂಡಿರುವ ಸುಂದರವಾದ ಹಳ್ಳಿಗಳು ಮತ್ತು ಇನ್ನೊಂದು ಬದಿಯಲ್ಲಿ ಅಂಬಾಲಾ ಪಾಸ್ ನ ಮನಮೋಹಕ ಹುಲ್ಲುಗಾವಲಿನ ದೃಶ್ಯಾವಳಿಗಳನ್ನು ಒದಗಿಸುತ್ತದೆ. ಈ ಪಾಸ್ 4500 ಮೀ. ಎತ್ತರದಲ್ಲಿದೆ. ಅಮರ್ನಾಥ್ ಗುಹೆಯ ಚಾರಣವನ್ನೂ ಇಲ್ಲಿಂದ ಕೈಗೊಳ್ಳಬಹುದಾಗಿದೆ. ಜೋಜಿಲಾದ ಕೆಳಗಿರುವ ಮೀನಾಮಾರ್ಗದಿಂದ ಪ್ರಾರಂಭವಾಗುವ ಈ ಟ್ರೆಕ್ ಮೂರು ದಿನಗಳ ಅವಧಿಯದ್ದಾಗಿದ್ದು, 5200ಮೀ ಎತ್ತರದ ಪ್ರದೇಶವನ್ನು ದಾಟಿ ಹೋಗಬೇಕಾಗುತ್ತದೆ. ಹಲವಾರು ಚಿಕ್ಕಪುಟ್ಟ ಚಾರಣ ಮಾರ್ಗಗಳನ್ನೂ ದ್ರಾಸ್ ನಲ್ಲಿ ಕಾಣಬಹುದು.