ಕಾಮರಾಜ ಸರೋವರ ಮತ್ತು ಕಾಮರಾಜ ಸಾಗರ ಡ್ಯಾಮ್ ಅತ್ಹುರ್ ಎಂಬ ಹಳ್ಳಿಯಲ್ಲಿದೆ. ಇದು 400 ಎಕರೆ ವ್ಯಾಪಿಸಿದೆ ಮತ್ತು ಪಶ್ಚಿಮ ಘಟ್ಟಗಳನ್ನು ಕಾಣಬಹುದು. ಈ ಸರೋವರ ಮತ್ತು ಡ್ಯಾಮ್ ಗೆ ಸಂಬಂಧಪಟ್ಟ ಜಾಗದಲ್ಲಿ ಬಾಳೆ, ತೆಂಗಿನ ಮರಗಳು, ಏಲಕ್ಕಿ ಎಸ್ಟೇಟ್ಗಳನ್ನೂ ಕಾಣಬಹುದು. ಸಾವಿರಾರು ಪಕ್ಷಿ ಪ್ರಭೇದಗಳು ಇಲ್ಲಿ ಬಂದು ವಾಸಿಸುವುದರಿಂದ ಇದು ಪಕ್ಷಿವೀಕ್ಷಣೆಗೆ ಜನಪ್ರಿಯಗೊಂಡಿದೆ.