ಈ ದೇವಸ್ಥಾನದಲ್ಲಿ ಅಬಿರಾಮಿ ಅಮ್ಮನ ಪೂಜೆ ನಡೆಯುತ್ತದೆ. ನಗರದ ಮಧ್ಯದಲ್ಲಿರುವ ಈ ದೇವಸ್ಥಾನಕ್ಕೆ ನವರಾತ್ರಿಯಲ್ಲಿ ಭಕ್ತರು ಗುಂಪು ಗುಂಪಾಗಿ ಸೇರುತ್ತಾರೆ. ನವರಾತ್ರಿ ಸಂಧರ್ಭದಲ್ಲಿ ಗೊಂಬೆಗಳನ್ನು ಇಡಲಾಗುತ್ತದೆ. ಈ ದೇವಸ್ಥಾನದಲ್ಲಿ ಪುರೋಹಿತರು 1 ಲಕ್ಷ ಅರ್ಚನೆಯನ್ನು ಅರ್ಪಿಸುತ್ತಾರೆ. ತಮಿಳು ಆದಿ ಮಾಸದಲ್ಲಿ ಪ್ರತಿ ಶುಕ್ರವಾರ ಹೂವಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.