Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಹವಾಮಾನ

ದಿಮಾಪುರ್ ಹವಾಮಾನ

ದಿಮಾಪುರಕ್ಕೆ ಭೇಟಿ ನೀಡಲು ಅಕ್ಟೋಬರ್ ನಿಂದ ಮೇ ನಡುವಿನ ಅವಧಿ ಪ್ರಶಸ್ತವಾಗಿರುತ್ತದೆ. ಒಂದು ವೇಳೆ ಇಲ್ಲಿನ ಮಳೆಯನ್ನು ನೋಡುವ ತವಕವಿದ್ದರೆ ನೀವು ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡಬಹುದು. ಆದರೆ ಈ ಕಾಲದಲ್ಲಿ ಆಗಮಿಸುವಾಗ ಅದಕ್ಕೆ ಸೂಕ್ತವಾದ ಉಡುಪುಗಳನ್ನು ತರುವುದನ್ನು ಮರೆಯಬೇಡಿ.

ಬೇಸಿಗೆಗಾಲ

ಬೇಸಿಗೆಯು ಇಲ್ಲಿ ಮೇ ತಿಂಗಳಿನಲ್ಲಿ ಆಗಮಿಸುತ್ತದೆ. ಮೇ ತಿಂಗಳು ಇಲ್ಲಿನ ಅತ್ಯಂತ ಬಿಸಿಲಿನ ತಿಂಗಳಾಗಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್‍ವರೆಗು ತಲುಪುತ್ತದೆ. ಅದರ ಜೊತೆಗೆ ಈ ವೇಳೆಯಲ್ಲಿ ಆರ್ದ್ರತೆಯು ಅಧಿಕವಾಗುತ್ತದೆ. ಈ ಸಮಯದಲ್ಲಿ ಇಲ್ಲಿನ ಆರ್ದ್ರತೆಯು 93% ತಲುಪುತ್ತದೆ. ಈ ಕಾರಣಗಳಿಂದಾಗಿ ಮೇ ತಿಂಗಳಿನಲ್ಲಿ ಇಲ್ಲಿಗೆ ಪ್ರಯಾಣ ಮಾಡುವುದು ಒಳ್ಳೆಯದಲ್ಲ.

ಮಳೆಗಾಲ

" ಮಳೆಯಿಂದ ಒದ್ದೆಯಾಗುವ ಕಾಲ" ವಿದು. ದಿಮಾಪುರದಲ್ಲಿ ಈ ಸಮಯದಲ್ಲಿ ಮಳೆಯಿಂದಾಗಿ ಉಷ್ಣಾಂಶದಲ್ಲಿ ಇಳಿ ಮುಖವಾಗುತ್ತದೆ. ಜೂನ್ ತಿಂಗಳಿನಲ್ಲಿ ಇಲ್ಲಿಗೆ ಆಗಮಿಸುವ ಮಳೆಯು ಸೆಪ್ಟೆಂಬರ್ ತನಕವಿರುತ್ತದೆ. ಜೂನ್ ಎರಡನೆ ವಾರದಲ್ಲಿ ಡಿಮಪುರಕ್ಕೆ ನೈಋತ್ಯ ಮಾನ್ಸೂನ್ ಮಾರುತಗಳು ಆಗಮಿಸುತ್ತವೆ. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಇಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಇಲ್ಲಿನ ವಾರ್ಷಿಕ ಮಳೆಯು 1500 ಮಿ.ಮೀ.ಆಗಿರುತ್ತದೆ.

ಚಳಿಗಾಲ

ಚಳಿಗಾಲವು ದಿಮಾಪುರದಲ್ಲಿ ಅಷ್ಟೇನು ಕೆಟ್ಟದಾಗಿರುವುದಿಲ್ಲ. ಬದಲಿಗೆ ಅತ್ಯಂತ ಆಹ್ಲಾದಕರವಾದ ವಾತಾವರಣ ಈ ಸಂದರ್ಭದಲ್ಲಿ ಕಂಡು ಬರುತ್ತದೆ. ಜನವರಿ ಇಲ್ಲಿ ಅತಿ ಹೆಚ್ಚು ಚಳಿಯಿಂದ ಕೂಡಿರುವ ತಿಂಗಳಾಗಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 9-10 ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ. ಚಳಿಗಾಲವು ಇಲ್ಲಿ ನವೆಂಬರ್ ಕೊನೆಯ ಭಾಗದಿಂದ ಹಿಡಿದು ಫೆಬ್ರವರಿಯವರೆಗು ಇರುತ್ತದೆ. ಕೆಲವೊಮ್ಮೆ ಇಲ್ಲಿನ ಉಷ್ಣಾಂಶವು 4 ಡಿಗ್ರಿಯವರೆಗು ಕುಸಿಯುವ ಸಂಭವವಿರುತ್ತದೆ.