Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ಶಿವ್ ಮಂದಿರ

ಶಿವ್ ಮಂದಿರ, ದಿಮಾಪುರ್

1

ದಿಮಾಪುರದಲ್ಲಿರುವ ಶಿವ ಮಂದಿರದ ಹಿಂದೆ ಒಂದು ಕುತೂಹಲಕಾರಿ ಕತೆಯಿದೆ. 1961ರಲ್ಲಿ ಸಿಂಗ್ರಿಜನ್ ಹಳ್ಳಿಯಿಂದ ಒಬ್ಬನು ರಂಗಪಹರ್ ವನ್ಯಧಾಮದಲ್ಲಿರುವ ಬೃಹತ್ ಕಲ್ಲಿನ ಬಳಿ ತನ್ನ ಚಾಕು ( ಡವೊ)ವನ್ನು ಅರಿತಗೊಳಿಸುವ ಸಲುವಾಗಿ ಹೋದನಂತೆ. ಅವನು ಆ ಕಲ್ಲಿನ ಮೇಲೆ ತನ್ನ ಚಾಕುವನ್ನು ಸಾಣೆಯಂತೆ ಉಜ್ಜಲು ಆರಂಭಿಸಿದಾಗ, ಆ ಕಲ್ಲಿನಿಂದ ದ್ರವರೂಪದ ಅದೆಂತಹುದೊ ಒಸರಲು ಪ್ರಾರಂಭವಾಯಿತಂತೆ. ಆತ ಅದನ್ನು ಉಪೇಕ್ಷಿಸಿ ಮನೆಗೆ ಹೋದನಂತೆ. ಆದರೆ ಅದೇ ದಿನ ರಾತ್ರಿ ಆತನ ಕನಸಿನಲ್ಲಿ ಈಶ್ವರನು ಸಂತನ ರೂಪದಲ್ಲಿ ಬಂದು, ಆ ಕಲ್ಲು ಶಿವನೆಂದು ತಿಳಿಸಿದನಂತೆ. ಆದರೆ ಅದನ್ನು ಆತ ನಂಬಲಿಲ್ಲ. ಆದರೆ ಇದು ಪ್ರತಿದಿನ ಪುನರಾವರ್ತೆನೆಯಾಗಲು ಆರಂಭಿಸಿದಾಗ, ವಿಧಿಯಿಲ್ಲದೆ ಹಳ್ಳಿಗರಿಗೆ ಈ ವಿಷಯವನ್ನು ತಿಳಿಸಿದನಂತೆ.

ನಂತರ ಹಳ್ಳಿಯವರು ಈತನನ್ನು ಮತ್ತು ಪುರೋಹಿತರನ್ನು ಕರೆದುಕೊಂಡು ಹೋಗಿ ಪರೀಕ್ಷಿಸಲು ಆ ಕಲ್ಲು ಒಂದು ಶಿವಲಿಂಗವೆಂದು ದೃಢಪಟ್ಟಿತಂತೆ. ಅವರೆಲ್ಲರಿಗು ಅಲ್ಲಿ ಒಂದು ಕಲ್ಲು ಬಿದ್ದಿರುವುದು ಗೊತ್ತಿತ್ತಾದರು, ಅದು ಶಿವಲಿಂಗವೆಂದು ತಿಳಿದಿರಲಿಲ್ಲ. ಅಲ್ಲದೆ ಅದನ್ನು ಎತ್ತಿ ಸರಿಯಾಗಿ ನಿಲ್ಲಿಸಲು ಸಹ ಇವರಿಂದ ಸಾಧ್ಯವಾಗಲಿಲ್ಲ. ನಂತರ ಹಲವಾರು ಪೂಜೆ, ಪುನಸ್ಕಾರಗಳನ್ನು ಮಾಡಿದ ಮೇಲೆ ಈ ಲಿಂಗವನ್ನು ಎತ್ತಿ ನಿಲ್ಲಿಸಲು ಸಾಧ್ಯವಾಯಿತಂತೆ. ಆನಂತರ ಈ ಸ್ಥಳವು ಸಿಂಗ್ರಿಜನ್‍ನ ಪ್ರಮುಖ ಪೂಜಾ ಕೇಂದ್ರವಾಗಿ ಮಾರ್ಪಟ್ಟಿತಂತೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat