Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ರುಝಫೆಮ

ರುಝಫೆಮ, ದಿಮಾಪುರ್

2

ದಿಮಾಪುರಕ್ಕೆ ರಜೆಯನ್ನು ಕಳೆಯಲು ಹೋಗಿ ಶಾಪ್ಪಿಂಗ್ ಮಾಡದೆ ಬಂದರೆ ನಿಮ್ಮ ಪ್ರವಾಸ ಅರ್ಥ ಪೂರ್ಣವಾಗಿ ಪೂರ್ಣಗೊಳ್ಳುವುದಿಲ್ಲ. ಈ ವಿಚಾರದಲ್ಲಿ ದಿಮಾಪುರ್ ಯಾರೊಬ್ಬರನ್ನು ಸಹ ನಿರಾಸೆಗೊಳಿಸುವುದಿಲ್ಲ. ರುಝಫೆಮವು ಶಾಪ್ಪಿಂಗ್ ಮಾಡುವವರ ಸ್ವರ್ಗ, ಅದರಲ್ಲಿಯೂ ನಾಗಾಗಳ ಸಾಂಪ್ರದಾಯಿಕ ಕುಶಲ ವಸ್ತುಗಳನ್ನು ಕೊಳ್ಳಲು ಬಯಸುವವರ ಪಾಲಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ. ಕೊಹಿಮಾದಿಂದ 5 ಕಿ.ಮೀ ದೂರದಲ್ಲಿ ದಿಮಾಪುರ್- ಕೊಹಿಮಾ ರಸ್ತೆಯಲ್ಲಿರುವ ರುಝಪೆಮದ ಗಲ್ಲಿ ಗಲ್ಲಿಗಳಲ್ಲಿ ನಿಮ್ಮ ಊಹೆಗು ನಿಲುಕದ ವಸ್ತುಗಳು ಕಂಡು ಬರುತ್ತವೆ.

ಈ ವರ್ಣರಂಜಿತ ಗಲ್ಲಿಗಳು ನಾಗಾ ಸಂಸ್ಕೃತಿಯ ಸೊಗಡನ್ನು ಬಿಂಬಿಸುತ್ತವೆ. ಅಪರೂಪದ ನಾಗಾ ಶಾಲುಗಳು ಮತ್ತು ವಸ್ತ್ರಗಳು ಹಾಗು ಇನ್ನಿತರ ವಸ್ತುಗಳನ್ನು ನೀವು ಈ ಬಜಾರಿನಲ್ಲಿ ಕೊಳ್ಳಬಹುದು. ಕುತೂಹಲಕರ ವಿಚಾರವೇನೆಂದರೆ ಇಲ್ಲಿನ ಬಹಳಷ್ಟು ವಸ್ತುಗಳನ್ನು ಈ ರಾಜ್ಯದ ಗುಡಿ ಮತ್ತು ಕರ ಕುಶಲ ಕೈಗಾರಿಕೆಗಳ ಅಡಿಯಲ್ಲಿ ಮಹಿಳಾ ಉದ್ಯೋಗಿಗಳು ನಿರ್ಮಿಸಿ ನೀಡಿರುತ್ತಾರೆ.

ಈ ವರ್ಣರಂಜಿತ ಬಜಾರುಗಳ ಹೊರತಾಗಿ ರುಝಫೆಮದಲ್ಲಿ ಕಛರಿ ಸಾಮ್ರಾಜ್ಯದ ಅವಶೇಷಗಳು ಕಂಡು ಬರುತ್ತವೆ. ಈ ಅವಶೇಷಗಳು ಶಿಥಿಲಾವಸ್ಥೆಯಲ್ಲಿದ್ದರು ಸಹ ಇತಿಹಾಸವನ್ನು ತಮ್ಮಲ್ಲಿ ಅವಿತಿಟ್ಟು ಕೊಂಡು ನೋಡುಗರಿಗೆ ಅದರ ವೈಭವವನ್ನು ಸಾರಿ ಹೇಳುತ್ತಿವೆ. ರುಝಫೆಮವು ಡಿಮಪುರಕ್ಕೆ ಹತ್ತಿರವಿರುವುದರಿಂದ ಈ ಶಾಪ್ಪಿಂಗ್ ತಾಣಕ್ಕೆ ತಲುಪಲು ಬಹಳ ಸಮಯ ತೆಗೆದುಕೊಳ್ಳುವುದಿಲ್ಲ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat