Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಗ್ಬೋಯ್ » ಆಕರ್ಷಣೆಗಳು » ಮಾರ್ಗೇರಿಟಾ

ಮಾರ್ಗೇರಿಟಾ, ದಿಗ್ಬೋಯ್

1

ಮಾರ್ಗೇರಿಟಾ ತಿನ್ಸುಕಿಯಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ. ಇದನ್ನು ಅಸ್ಸಾಂನ ಕಲ್ಲಿದ್ದಲ ರಾಣಿ ಎಂದು ಕರೆಯುತ್ತಾರೆ.  ಈ ಉಪ ವಿಭಾಗೀಯ ಜಿಲ್ಲಾ ಕೇಂದ್ರವು ಕಲ್ಲಿದ್ದಲ ಗಣಿಗಳು ಮತ್ತು ಟೀ ಉದ್ಯಾನಗಳಿಂದ ಸುತ್ತುವರೆದಿದೆ. ಇದರ ಹೆಸರಿನ ಹಿಂದೆ ಒಂದು ಆಸಕ್ತಿದಾಯಕ ಇತಿಹಾಸವಿದೆ. ಅಸ್ಸಾಂ ರೈಲ್ವೇ ಮತ್ತು ಟ್ರೇಡಿಂಗ್ ಕಂಪೆನಿಯು ದೇಶದ ಈ ಭಾಗಕ್ಕೆ ರೈಲು ಸಂಪರ್ಕ ಒದಗಿಸಲು ಇಟಾಲಿಯನ್ ಇಂಜಿನಿಯರ್ ರೊಬೊರ್ಟೋ ಪಗನಿನಿಯನ್ನು ಈ ಕೆಲಸಕ್ಕಾಗಿ ನೇಮಿಸಿತು. ಈತ ಇಲ್ಲಿನ ಕಲ್ಲಿದ್ದಲು ತುಂಬಿದ ಪ್ರದೇಶಗಳಿಗೆ ರೈಲ್ವೇ ಓಡಾಟಕ್ಕಾಗಿ ಸೇತುವೆಗಳನ್ನು ರೂಪಿಸಿದ. ಈತನಿಗೆ ಗೌರವ ಸೂಚಿಸುವ ಸಲುವಾಗಿ ಈ ಸ್ಥಳಕ್ಕೆ ಇಟಾಲಿಯನ್ ರಾಣಿ ಮಾರ್ಗೇರಿಟಾಳ ಹೆಸರನ್ನು ಇಡಲಾಯಿತು.

ಮಾರ್ಗೇರಿಟಾ ಪ್ರದೇಶವು ಪಟಕೈ ಶ್ರೇಣಿಗಳು ಮತ್ತು ಬುರ್ಹಿದೆಹಿಂಗ್ ನದಿಯಿಂದ ಸುತ್ತುವರೆದಿದ್ದು ಹಲವು ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಮಾರ್ಗೆರಿಟಾ ಗಾಲ್ಫ್ಕೋರ್ಸ್ ಇಲ್ಲಿ ಪ್ರಮುಖ ಆಕರ್ಷಣೆ. ಇಲ್ಲಿನ ಟೀ ಉದ್ಯಾನಗಳು ಕೂಡ ಭೇಟಿ ನೀಡಬೇಕಾದ ಸ್ಥಳಗಳು. ಈ ನಗರವು ಪ್ಲೇವುಡ್ ಪದಾರ್ಥಗಳನ್ನು ಕೂಡ ಗಣನೀಯ ಮಟ್ಟದಲ್ಲಿ ತಯಾರಿಸುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun