Search
  • Follow NativePlanet
Share
ಮುಖಪುಟ » ಸ್ಥಳಗಳು» ದಿಬ್ರುಗಡ್

ದಿಬ್ರುಗಡ್ : ಟೀ ಉದ್ಯಾನಗಳ ಸ್ವರ್ಗ

19

ಬ್ರಹ್ಮಪುತ್ರ ನದಿಯ ಕಲರವ ಒಂದೆಡೆ ಮತ್ತೊಂದೆಡೆ ಹಿಮಾಲಯದ ತಪ್ಪಲು ದಿಬ್ರುಗಡ್ನ ಸೌಂದರ್ಯವನ್ನು ಹೆಚ್ಚಿಸಿದೆ. ಅಸ್ಸಾಂನ ಮುಖ್ಯ ನಗರಗಳಲ್ಲಿ ಒಂದಾದ ದಿಬ್ರುಗಡ್ ಪ್ರವಾಸಿಗರಿಗೆ ಹಸಿರು ಸಿರಿ ಮತ್ತು ಸ್ವಲ್ಪ ಮಟ್ಟಿಗಿನ ಇತಿಹಾಸದ ಸವಿಯನ್ನು ಉಣಬಡಿಸುತ್ತದೆ.

ದಿಬ್ರುಗಡ್ನ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು

ದಿಬ್ರುಗಗಡಿನ ಟೀ ಉದ್ಯಾನಗಳಲ್ಲೊಂದು ಸುತ್ತಾಟ

ಅಸ್ಸಾಂನ ಟೀ ವಿಶ್ವಪ್ರಸಿದ್ಧವಾದದ್ದು. ಅಸ್ಸಾಂನ ಟೀಯ ಶೇ 50ರಷ್ಟು ಉತ್ಪಾದಿಸುವುದೇ ದಿಬ್ರುಗಡ್, ತಿನ್ಸುಕಿಯ ಮತ್ತು ಸಿಬಸಾಗರ್ ನಗರಗಳು. ದಿಬ್ರುಗಡ್ ನಗರವನ್ನು ‘ಭಾರತದ ಟೀ ನಗರ’ವೆಂದೇ ಕರೆಯಲಾಗುತ್ತದೆ. ನಗರದ ಸುತ್ತಲೂ ಬ್ರಿಟೀಷರ ಕಾಲಕ್ಕೆ ಸೇರಿದ ಹಲವು ಟೀ ಉದ್ಯಾನಗಳಿವೆ. ದಿಬ್ರುಗಡ್ ಪ್ರವಾಸೋದ್ಯಮವು ಟೀ ಉದ್ಯಾನಗಳಿಲ್ಲದೆ ಅಪೂರ್ಣವೆನಿಸುತ್ತದೆ.

ದಿಬ್ರುಗಡಿನ ಜೀವನದಿ ಬ್ರಹ್ಮಪುತ್ರ

ಭಾರತದ ರುದ್ರರಮಣೀಯ ನದಿಗಳಲ್ಲೊಂದು ಬ್ರಹ್ಮಪುತ್ರ. ಪ್ರತಿವರ್ಷ ಹಿಮಾಲಯದಿಂದ ಅಪಾರ ಜಲರಾಶಿಯೊಂದಿಗೆ ಉಕ್ಕೇರಿ ಹರಿದುಬರುವ ಬ್ರಹ್ಮಪುತ್ರ ನಗರಗಳನ್ನು ಅರಣ್ಯಗಳನ್ನು ಮುಳುಗಿಸುತ್ತಾ ಪ್ರವಾಹವನ್ನು ಸೃಷ್ಟಿಸುತ್ತದೆ. ದಿಬ್ರುಗಡ್ ಸಹ ಬ್ರಹ್ಮಪುತ್ರ ನದಿಯ ಈ ಭೀಕರ ಮುಖವನ್ನು ನೋಡುತ್ತದೆ. ಆದರೂ ಇದು ಈ ನಗರದ ಜೀವನದಿಯಾಗಿದ್ದು ಶಾಂತವಾಗಿ ಹರಿಯುವಾಗ ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ದಿಬ್ರುಗಡಿನ ಸತ್ರಗಳಿಗೆ ಧಾರ್ಮಿಕ ಪ್ರವಾಸ

ದಿಬ್ರುಗಡಿನ ಸತ್ರಗಳು ಇಲ್ಲಿನ ಪ್ರವಾಸೋದ್ಯಮದ ಭಾಗ. ಅಹೋಮ ರಾಜರ ಸಾಮಾಜಿಕ-ಸಾಂಸ್ಕೃತಿಕ- ಧಾರ್ಮಿಕ ಸಂಸ್ಥೆಗಳನ್ನು ಸತ್ರಗಳು ಎಂದು ಕರೆಯಲಾಗುತ್ತದೆ. ಹಾಗಾಗಿ ಇವು ಇಲ್ಲಿನ ಮುಖ್ಯ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳು. ದಿನ್ಜೊಯ್ ಸತ್ರ, ಕೊಲಿ ಆಯಿ ಥಾನ್ ಮತ್ತು ದೆಹಿಂಗ್ ಸತ್ರಗಳು ಪ್ರಮುಖವಾದವು. ಇವುಗಳಲ್ಲಿ ಕೊಲಿ ಆಯಿ ಥಾನ್ ಅಸ್ಸಾಂನ ಪುರಾತನವಾದ ‘ಥಾನ್’ ಎಂದು ಹೇಳಲಾಗುತ್ತದೆ. ದಿನ್ಜೊಯ್ ಸತ್ರ ಮತ್ತು ದೆಹಿಂಗ್ ಸತ್ರಗಳು ಕೂಡ ಐತಿಹಾಸಿಕವಾಗಿ ಮುಖ್ಯವಾದವು.

ತಲುಪುವುದು ಹೇಗೆ?

ದಿಬ್ರುಗಡ್ ದೇಶದ ಉಳಿದ ಭಾಗಗಳೊಂದಿಗೆ ರೈಲು, ವಿಮಾನ ಮತ್ತು ರಸ್ತೆ ಸಾರಿಗೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಭಾರತದ ಪಶ್ಚಿಮ ಭಾಗಕ್ಕೆ ಈ ನಗರದಲ್ಲಿ ಉತ್ತಮ ರೈಲು ಮತ್ತು ವಿಮಾನ ಸೌಲಭ್ಯಗಳಿವೆ.

ಹವಾಮಾನ

ದಿಬ್ರುಗಡ್ನಲ್ಲಿ ವರ್ಷಪೂರ್ತಿ ಆಹ್ಲಾದಕರ ವಾತಾವರಣವಿರುತ್ತದೆ. ಹಾಗಾಗಿ ಪ್ರವಾಸಿಗರು ಯಾವ ಸಮಯದಲ್ಲಿ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು.

ದಿಬ್ರುಗಡ್ ಪ್ರಸಿದ್ಧವಾಗಿದೆ

ದಿಬ್ರುಗಡ್ ಹವಾಮಾನ

ಉತ್ತಮ ಸಮಯ ದಿಬ್ರುಗಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದಿಬ್ರುಗಡ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 37 ದಿಬ್ರುಗಡ್ ನಗರವನ್ನು ದೇಶದ ಉಳಿದ ಭಾಗಗಳೊಂದಿಗೆ ಬೆಸೆಯುತ್ತದೆ. ರಸ್ತೆಯ ಮೂಲಕ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಇಲ್ಲಿಗೆ ಪ್ರಯಾಣಿಸುವುದು ಒಂದು ಅಭೂತಪೂರ್ವ ಅನುಭವ. ಗುವಾಹಟಿಯಿಂದ ಇಲ್ಲಿಗೆ ನಿಯಮಿತ ಬಸ್ ಸೌಲಭ್ಯವಿದೆ. ಕೊಹಿಮಾದಿಂದಲೂ ಇಲ್ಲಿಗೆ ಪ್ರತಿನಿತ್ಯ ಬಸ್ಸುಗಳು ಓಡಾಡುತ್ತವೆ. ದಿಬ್ರುಗಡ್ನ ಮಾರ್ಗ ಅರುಣಾಚಲ ಪ್ರದೇಶಕ್ಕೆ ಹೋಗುವ ಮಾರ್ಗವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದಿಬ್ರುಗಡ್ ದೇಶದ ಪೂರ್ವ ಭಾಗದಲ್ಲಿನ ಮುಖ್ಯ ರೈಲು ನಿಲ್ದಾಣ. ಇದು ನೈಋತ್ಯ ಭಾಗವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ದಿಬ್ರುಗಡ್ನಲ್ಲಿ ಎರಡು ರೈಲು ನಿಲ್ದಾಣಗಳಿವೆ- ದಿಬ್ರುಗಡ್ ಟೌನ್ ಸ್ಟೇಷನ್ ಮೊದಲು ನಿರ್ಮಿಸಲಾದ ನಿಲ್ದಾಣ ಮತ್ತು ದಿಬ್ರುಗಡ್ ನಿಲ್ದಾಣ ಈಗ ಹೊಸದಾಗಿ ನಿರ್ಮಿಸಲಾಗಿರುವ ನಿಲ್ದಾಣ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಿಬ್ರುಗಡ್ನ ವಿಮಾನ ನಿಲ್ದಾಣವು ದೇಶದ ಎಲ್ಲ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ದಿನವೂ ಇಲ್ಲಿಂದ ಕಲ್ಕತ್ತಾ, ದೆಹಲಿ ಮತ್ತು ಗುವಾಹಟಿಗಳಿಗೆ ವಿಮಾನ ಸಂಚಾರವಿದೆ. ಏರ್ ಇಂಡಿಯಾ, ಇಂಡಿಗೋ ಮತ್ತು ಜೆಟ್ಲೈಟ್ ವಿಮಾನಗಳು ದಿಬ್ರುಗಡ್ ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಇದಲ್ಲದೆ ಪವನ್ ಹಂಸ್ ಹೆಲಿಕ್ಯಾಪ್ಟರ್ ಸೇವೆ ಕೂಡ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri