ಎಲಾ ಧಾರ್ಮಿಕ ಕ್ಷೇತ್ರಗಳಿಗೂ ಐತಿಹಾಸಿಕ ಮಹತ್ವ ಇರುತ್ತದೆ ಹಾಗೂ ಈ ಪ್ರಾಶಸ್ಥ್ಯವೇ ಅದನ್ನು ಲೋಕ ಪ್ರಸಿದ್ಧಗೊಳಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಇದಕ್ಕೆ ಒಂದು ಅಪವಾದವೆಂಬಂತೆ ಇರುವುದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಸಿ.ಎಸ್.ಐ ಜ್ಹಿಯಾನ್ ಇಗರ್ಜಿ. ಈ ಇಗರ್ಜಿಯು ತುಂಬಾ ಪವಿತ್ರ ಕ್ಷೇತ್ರ ಮತ್ತು ಇಲ್ಲಿಗೆ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಆದರೆ ಇದು ಒಂದು ತೀರ್ಥಕ್ಷೇತ್ರ ಮಾತ್ರವಲ್ಲದೆ ಇಲ್ಲಿ ನಡೆಯುವ ಸಾಮಾಜಿಕ ಕಾರ್ಯಗಳಿಗೂ ಪ್ರಸಿದ್ಧವಾಗಿದೆ. ಈ ಇಗರ್ಜಿಯ ಅಧಿಕಾರಿಗಳು ತುಂಬಾ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುಮಾರು ಬಡ ಕುಟುಂಬಗಳು ಇಲ್ಲಿನ ಸೇವೆಯಿಂದ ಪ್ರಯೋಜನ ಪಡೆದುಕೊಂಡಿದೆ.