Search
  • Follow NativePlanet
Share
ಮುಖಪುಟ » ಸ್ಥಳಗಳು » ಧರಮಗಡ್ » ಹವಾಮಾನ

ಧರಮಗಡ್ ಹವಾಮಾನ

ಸೆಪ್ಟೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನವರೆಗಿನ ಅವಧಿಯಲ್ಲಿ ಇಲ್ಲಿನ ವಾತಾವರಣವು ತಂಪಾಗಿರುವುದರಿಂದ, ಧರಮಗಡಕ್ಕೆ ಪ್ರವಾಸ ಕೈಗೊಳ್ಳಲು ಈ ಅವಧಿಯು ಅತೀ ಪ್ರಶಸ್ತವಾದ ಕಾಲವಾಗಿದೆ. ಈ ಅವಧಿಯಲ್ಲಿ, ಸೂರ್ಯನ ಎಳೆಬಿಸಿಲು ಮತ್ತು ದಿನವಿಡೀ ಬೀಸುವ ತಂಗಾಳಿಯು ಪ್ರಯಾಣವನ್ನು ಅಪ್ಯಾಯಮಾನವಾಗಿಸುತ್ತದೆ.  ಈ ಅವಧಿಯಲ್ಲಿ ಮೈಮೂಳೆ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು, ಪ್ರವಾಸಿಗರು ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯುವಂತೆ ಶಿಪಾರಸು ಮಾಡಲಾಗಿದೆ.

ಬೇಸಿಗೆಗಾಲ

ಧರಮಗಡದಲ್ಲಿ ಬೇಸಿಗೆಗಳು ಏಪ್ರಿಲ್ ತಿಂಗಳಿನಿಂದ ಆರಂಭಗೊಂಡು ಜೂನ್ ತಿಂಗಳಿನವರೆಗೆ ಮುಂದುವರೆಯುತ್ತದೆ.  ಈ ಅವಧಿಯಲ್ಲಿ ವಾತಾವರಣವು ಅತ್ಯಂತ ಬಿಸಿಯಾಗಿದ್ದು, ಇಲ್ಲಿ ವಾಸ್ತವ್ಯ ಹೂಡುವುದು ದುಸ್ತರವಾಗುತ್ತದೆ.  ಗರಿಷ್ಟತಮ ತಾಪಮಾನವು 45 ಡಿಗ್ರಿ ಸೆಲ್ಷಿಯಸ್ ನವರೆಗೂ ತಲುಪುತ್ತದೆ ಹಾಗೂ 33 ಡಿಗ್ರಿ ಸೆಲ್ಷಿಯಸ್ ಗಿಂತ ಕಡಿಮೆಯಾಗುವುದೇ ಇಲ್ಲ.  ದಿನವಿಡೀ ಬಿಸಿಯಾದ ಮಾರುತಗಳು ನಿರಂತರವಾಗಿ ಬೀಸುತ್ತಲೇ ಇರುತ್ತವೆ.  ಧರಮಗಡಕ್ಕೆ ಪ್ರವಾಸ ಕೈಗೊಳ್ಳಲು ಬೇಸಿಗೆಯು ಅನುಕೂಲಕರವಾದ ಸಮಯವಲ್ಲ.

ಮಳೆಗಾಲ

ಮಳೆಗಾಲವು ಜೂನ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡು ಆಗಸ್ಟ್ ತಿಂಗಳವರೆಗೂ ಮುಂದುವರೆಯುತ್ತದೆ.  ಕೆಲವೊಮ್ಮೆ, ಆಗಾಗ್ಗೆ, ಸೆಪ್ಟೆಂಬರ್ ತಿಂಗಳಿನಲ್ಲಿಯೂ ಮಳೆ ಉಂಟಾಗುತ್ತದೆ.  ಮಳೆಯು ಮುಸಲಧಾರೆಯಾಗಿ ಸುರಿಯುತ್ತದೆ ಮತ್ತು ಈ ಪ್ರದೇಶದ ಕೆಲವೆಡೆ, ಪ್ರವಾಹವೂ ಕೂಡ ಉಂಟಾಗಬಹುದು. ಸೆಪ್ಟೆಂಬರ್ ತಿಂಗಳಿನಲ್ಲಿ ಆಚರಿಸಲ್ಪಡುವ ನುವಾಖೈ ಹಬ್ಬವು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಚಳಿಗಾಲ

ಚಳಿಗಾಲವು ಸೆಪ್ಟೆಂಬರ್ ತಿಂಗಳಿನ ಅಂತ್ಯಭಾಗದಲ್ಲಿ ಅಥವಾ ಅಕ್ಟೋಬರ್ ತಿಂಗಳ ಮೊದಲ ಭಾಗದಲ್ಲಿ ಆರಂಭಗೊಂಡು ಫೆಬ್ರವರಿ ತಿಂಗಳಿನವರೆಗೂ ಮುಂದುವರೆಯುತ್ತದೆ.  ಉಷ್ಣತೆಯು 7 ಡಿಗ್ರಿ ಸೆಲ್ಷಿಯಸ್ ನಷ್ಟರವರೆಗೆ ಕುಸಿತ ಕಾಣುತ್ತದೆ.  ಹಗಲಿನ ವೇಳೆ ತಂಪಾಗಿದ್ದು, ರಾತ್ರಿಗಳು ಮತ್ತಷ್ಟು ತಂಪಾಗಿ ಮೈ ನಡುಗಿಸುತ್ತವೆ.  ಈ ಸಂದರ್ಭದಲ್ಲಿ ಜನರು ಬೆಂಕಿಯ ಎದುರು ಮೈ ಕಾಯಿಸಿಕೊಳ್ಳುತ್ತಾ ತಮ್ಮ ತನುವನ್ನು ಬೆಚ್ಚಗಾಗಿಸಿಕೊಳ್ಳುವುದರಲ್ಲಿ ಆನಂದ ಹೊಂದುತ್ತಾರೆ ಹಾಗೂ ಈ ಸಂದರ್ಭದಲ್ಲಿ ಎಲ್ಲಾ ವಿಹಾರೀ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತವೆ.