ಜುನಾಗರ್ (Junagarh)ವು ಧರಮಗಡದಿಂದ 15 ಕಿ. ಮೀ. ದೂರದಲ್ಲಿದೆ. ಜುನಾಗರ್(ಡ್) ದಲ್ಲಿರುವ ಪುರಾತನ ದೇವಸ್ಥಾನಗಳಿಂದಾಗಿ ಈ ಸ್ಥಳವು ಕೀರ್ತಿ ಗಳಿಸಿದೆ. ಈ ದೇವಸ್ಥಾನಗಳಲ್ಲಿ ಕಂಡುಬಂದ ಅನೇಕಾನೇಕ ಒರಿಯ ಶಾಸನಗಳು, ಒಂದಾನೊಂದು ಕಾಲದಲ್ಲಿ ಈ ಸ್ಥಳದಲ್ಲಿ ಪ್ರಚಲಿತವಾಗಿದ್ದ, ಬರ್ಬರವಾದ 'ಸತಿ' ಪದ್ಧತಿಯ ಮೇಲೆ ಬೆಳಕು ಚೆಲ್ಲುತ್ತವೆ. ಸಮರದ ದೇವತೆ ಎಂದೇ ನಂಬಲಾಗಿರುವ, ಲಂಕೇಶ್ವರಿ ದೇವತೆಗೆ ಅರ್ಪಿತವಾದ ಸುಪ್ರಸಿದ್ಧ ಲಂಕೇಶ್ವರಿ ದೇವಸ್ಥಾನವು ಈ ಸ್ಥಳದ ಹೆಮ್ಮೆಯ ಕಿರೀಟಕ್ಕೊಂದ ಗರಿಯಿದ್ದಂತಿದೆ.
ಇತರ ದೇವಸ್ಥಾನಗಳಾದ ದಧಿ ಬಮನ್ (Dadhi Baman), ಭೈರವ್ ಗುಡಿ, ಮತ್ತು ಕನಕ್ ದುರ್ಗಾ ದೇವಸ್ಥಾನಗಳು ಜುನಾಗರ್ ನ ಮಹತ್ವದ ದೇವಸ್ಥಾನಗಳಾಗಿವೆ. ದುರ್ಗಾ ಪೂಜೆ ಮತ್ತು ಗಣೇಶ ಚತುರ್ಥಿಗಳು, ಜುನಾಗರ್ ದ ಮೂಲೆ ಮೂಲೆಗಳಿಂದಲೂ ಒಗ್ಗೂಡುವ ಬೃಹತ್ ಜನಸಮುದಾಯದೊಂದಿಗೆ ಆಚರಿಸಲ್ಪಡುತ್ತವೆ. ಜೋಜ್ಞ (Jojna) ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬೃಹತ್ ಜೋಜ್ಞ ಆಣೆಕಟ್ಟು, ಬಂಡೆಗಳಿಂದ ಕೂಡಿದ ಬೆಟ್ಟಗಳ ಹಿಂದೆ ಇದ್ದು ಇದೊಂದು ರೋಮಾಂಚಕಾರೀ ದೃಶ್ಯವಾಗಿದೆ. ಹಸಿರಾದ ಕಾನನದ ನಡುವೆ ಇರುವ ಪಲ್ಮಾಝರಣ್ ಎಂಬ ಪುಟ್ಟ ಜಲಪಾತವು ಇಲ್ಲಿನ ಅನೇಕ ಸ್ಥಳಿಯರಿಗೆ ಹಾಗೂ ಪ್ರವಾಸಿಗರಿಗೆ ಒಂದು ವಿಹಾರದ ತಾಣವಾಗಿದೆ.