Search
  • Follow NativePlanet
Share

ಧಾರ್ - ಐತಿಹಾಸಿಕ,ಸಾಂಸೃತಿಕ ನಗರಿ.

14

ಮಧ್ಯಕಾಲೀನ ಇತಿಹಾಸದ ಧಾರಾನಗರಿಯೇ ಇಂದಿನ ಧಾರ್. ತೆಂಕಣ ಮಧ್ಯಪ್ರದೇಶದ ಮಾಳ್ವಾ ಪ್ರದೇಶದಲ್ಲಿದೆ. ಜಿಲ್ಲಾ ಮುಖ್ಯ ಕಚೇರಿಯಾಗಿರುವ ಧಾರ್, ಮಧ್ಯಪ್ರದೇಶದಲ್ಲೇ ಅತ್ಯುನ್ನತ ಸಾಂಸೃತಿಕ ಹಿನ್ನೆಲೆಯುಳ್ಳ ನಗರಿ. ಮರಾಠರ ರಾಜಾ ಸ್ಥಾನವಾಗಿದ್ದ ಈ ಪ್ರದೇಶವು ಪೌರರ(ಪವಾರ) ಆಳ್ವಿಕೆಯಲ್ಲಿತ್ತು. ಅಂದಿನ ರಾಜಾಡಳಿತದ ಕಾಲದಲ್ಲಿ " ಗೌರವಾನ್ವಿತ ರಾಜ್ಯ" ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಸಾಟಿಯಿಲ್ಲದ ಸೌಂದರ್ಯ

ಸಮುದ್ರ ಮಟ್ಟದಿಂದ 559 ಮೀ ಎತ್ತರದಲ್ಲಿರುವ ಧಾರ್ ನ ಸುತ್ತಲೂ ಹಳ್ಳ-ಕೊಳ್ಳಗಳು, ಬೆಟ್ಟಗಳು ಹಾಗೂ ಪ್ರಾಚೀನ ಕೋಟೆಗಳು ಹಾಗು ಐತಿಹಾಸಿಕ, ಸಾಂಸೃತಿಕ ಮತ್ತು ರಾಷ್ಟ್ರೀಯ ಮಹತ್ವವುಳ್ಳ ಕಟ್ಟಡಗಳನ್ನು ಕಾಣಬಹುದು. ಧಾರ್ ನ ಇಂತಹ ಚಿತ್ರಸದೃಶ ನೋಟವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಮಧ್ಯಪ್ರದೇಶದ ಸಾಂಸೃತಿಕ ನಗರಿ ಧಾರ್

ಲಲಿತಕಲೆ, ಚಿತ್ರಕಲೆ, ಶಿಲ್ಪಕಲೆ, ಸಂಗೀತ ಹಾಗೂ ನೃತ್ಯಗಳು ಧಾರ್ ನ ಅವಿಭಾಜ್ಯ ಅಂಗವಾಗಿವೆ. ಧಾರಾನಗರಿಯ ನಿವಾಸಿಗಳು ಕಲಾರಸಿಕರಾಗಿದ್ದು, ಶತಮಾನಗಳಷ್ಟು ಹಿಂದಿನಿಂದಲೂ ಪ್ರಪಂಚಕ್ಕೆ ತಮ್ಮ ಕಲೆಯ ಕೈಚಳಕವನ್ನು ತೋರಿಸುತ್ತಾ ಬಂದಿದ್ದಾರೆ. ಬಾಘ್ ಗುಹೆಯಲ್ಲಿನ ಚಿತ್ರಣಗಳು ಗುಪ್ತರ ಕಾಲದಲ್ಲಿ ಇಲ್ಲಿನ ಜನರಿಗಿದ್ದ ಕಲಾ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿವೆ.

ಬಾಜ್ ಬಹಾದ್ದೂರ್ ಮತ್ತು ರೂಪಮತಿಯರ ನಾಡು

ಬಾಜ್ ಬಹಾದ್ದೂರ್ ಮತ್ತು ರೂಪಮತಿಯರ ಪ್ರಸಿದ್ದ ಪ್ರೇಮಕಥೆ ಹಿಂದಿನಿಂದಲೂ ನೂರಾರು ಯುವಪೀಳಿಗೆಗಳಿಗೆ ಆದರ್ಶಮಾನವಾಗಿದೆ. ಧಾರಾನಗರಿಯ ಮೂಲೆ ಮೂಲೆಯೂ ಈ ಪ್ರೇಮಿಗಳ ಕಥೆ ಹೇಳುತ್ತವೆ. ಸಾಹಿತ್ಯ, ನೃತ್ಯ ಅಥವಾ ಸಂಗೀತ ಹೀಗೆ ಅದು ಕಲೆಯ ಯಾವುದೇ ಪ್ರಕಾರವಾಗಿದ್ದರೂ ಬಾಜ್ ಬಹದ್ದೂರ್ ಸ್ವಪ್ರೇರಣೆಯಿಂದ ಆ ಕಲೆಯನ್ನು ಅಭಿವೃದ್ಧಿ ಪಡಿಸಿ ಸಾದರ ಪಡಿಸುವುದರ ಮೂಲಕ ಧಾರ್ ಪಟ್ಟಣಕ್ಕೆ ಭಾರತದ ನಕಾಶೆಯಲ್ಲಿ ಉನ್ನತ ಸ್ಥಾನ ಕಲ್ಪಿಸಿಕೊಟ್ಟಿರುವನು. 

ಧಾರ್ ನ ಪ್ರವಾಸೋದ್ಯಮ

ಧಾರ್ ಪಟ್ಟಣದ ಒಳ ಹಾಗು ಹೊರವಲಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಗುಪ್ತರ ಕಾಲದ ಬಾಘ್ ಗುಹೆಗಳು, ಔದ್ಯಮಿಕ ನಗರಿಯಾದ ಪಿಥಂಪುರ್, ಶೆಖ್ ಚಂಗಾಲ್ ನ ಸ್ಮಾರಕ, ಲತ್ ಮಸೀದಿ,  ಮುಂತಾದವು ಇಲ್ಲಿ ನೋಡತಕ್ಕ ಸ್ಥಳಗಳು. ಅಕ್ಟೋಬರ ಮತ್ತು ನವೆಂಬರ ತಿಂಗಳುಗಳಲ್ಲಿ ಧಾರ್ ಗೆ ಭೇಟಿ ನೀಡುವುದು ಸೂಕ್ತ. ಇಂದೋರ್ ನಲ್ಲಿರುವ ವಾಯುನೆಲೆ ಹಾಗು ರೈಲ್ವೆನಿಲ್ದಾಣಗಳ ಮೂಲಕ ಧಾರ್ ಪಟ್ಟಣವನ್ನು ತಲುಪಬಹುದು.

ಧಾರ್ ಪ್ರಸಿದ್ಧವಾಗಿದೆ

ಧಾರ್ ಹವಾಮಾನ

ಉತ್ತಮ ಸಮಯ ಧಾರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಧಾರ್

  • ರಸ್ತೆಯ ಮೂಲಕ
    ಧಾರ್ ಪಟ್ಟಣದಿಂದ ಮಧ್ಯಪ್ರದೇಶದ ಎಲ್ಲಾ ಪ್ರಮುಖ ನಗರಗಳಿಗೆ ರಸ್ತೆ ಸಂಪರ್ಕ ಇದೆ. ಮಧ್ಯ ಪ್ರದೇಶದ ರಾಜ್ಯ ಸರಕಾರಿ ಬಸ್ಸುಗಳು (MPSRTC) ರಾಜ್ಯದ ಇತರ ಪ್ರಮುಖ ಪಟ್ಟಣಗಳನ್ನು ಧಾರ್ ಪಟ್ಟಣದೊಂದಿಗೆ ಸಂಪರ್ಕಿಸುತ್ತವೆ. ಪ್ರವಾಸಿಗರು ಧಾರ್ ತಲುಪಲು ಇಂದೋರ್, ಮೊವ್, ರತ್ಲಾಂ, ಉಜ್ಜಯಿನಿ ಮತ್ತು ಭೋಪಾಲ್ ಗಳಿಂದ ಟ್ಯಾಕ್ಸಿಗಳನ್ನೂ ಬಳಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಧಾರ್ ಪಟ್ಟಣವು ರೈಲು ನಿಲ್ದಾಣವನ್ನು ಹೊಂದಿಲ್ಲ. 62 ಕಿ.ಮೀ ದೂರದಲ್ಲಿರುವ ಇಂದೋರ್ ನಲ್ಲಿ ಪ್ರಮುಖ ರೈಲ್ವೆ ಜಂಕ್ಷನ್ ಇದೆ. ಇಲ್ಲಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಉತ್ತಮವಾದ ಸಂಪರ್ಕವಿದೆ. ಇಂದೋರ ಜಂಕ್ಷನ್ ನಿಂದ ಟ್ಯಾಕ್ಸಿ ಅಥವಾ ಬಸ್ ಗಳ ಮೂಲಕ ಧಾರ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಂದೋರ್ ದಲ್ಲಿರುವ ದೇವಿ ಅಹಲ್ಯಾಬಾಯಿ ಹೋಳ್ಕರ್ ರಾಷ್ರ್ಟೀಯ ವಾಯುನೆಲೆಯು ಧಾರ್ ನಗರದ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇಂದೋರ್ ನಗರವು ಧಾರ್ ನಗರದಿಂದ 62 ಕಿ.ಮೀ ದೂರದಲ್ಲಿದೆ. ಇಂದೋರ್ ವಿಮಾನ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದ್ದು, ವಿಮಾನ ನಿಲ್ದಾಣದಿಂದ ಧಾರ್ ಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳ ಮೂಲಕ ಪ್ರವೇಶಿಸಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City