Search
  • Follow NativePlanet
Share

ಧಮತರಿ : ಮನಮೋಹಕ ಪ್ರಕೃತಿ ಸೌಂದರ್ಯ ಅನುಗ್ರಹೀತ ನಾಡು

9

ಧಮತರಿಯು  ಭಾರತದಲ್ಲಿನ ಹಳೆಯ ಪುರಸಭಾ ಕ್ಷೇತ್ರಗಳಲ್ಲಿ ಒಂದು. 1998 ಜುಲೈ 6 ರಂದು ಈ ಜಿಲ್ಲೆಯು ಅಧೀಕೃತವಾಗಿ ನಿರ್ಮಾಣಗೊಂಡಿತು. ಈ ಜಿಲ್ಲೆಯು ಛತ್ತೀಸಗಡ್ ರಾಜ್ಯದ ಒಂದು ಫಲವತ್ತಾದ ಬಯಲು ಪ್ರದೇಶವಾಗಿದೆ. ಇದು, ಉತ್ತರದಲ್ಲಿ ರಾಯ್ಪುರ್ ಜಿಲ್ಲೆ, ದಕ್ಷಿಣದಲ್ಲಿ ಕಂಕೆರ್ ಹಾಗೂ ಬಸ್ತರ್ ಜಿಲ್ಲೆಗಳು, ಪೂರ್ವದಲ್ಲಿ ಒರಿಸ್ಸಾ ರಾಜ್ಯ ಹಾಗೂ ಪಶ್ಚಿಮದಲ್ಲಿ ದುರ್ಗ್ ಜಿಲ್ಲೆಗಳಿಂದ ಸುತ್ತುವರೆಯಲ್ಪಟ್ಟಿದೆ. ಸೇನ್ದುರ್, ಜೋಯನ್ ಹಾಗೂ ಖರುನ್ ಎಂಬ ಉಪನದಿಗಳನ್ನು ಹೊಂದಿದ ಮಹಾನದಿಯು ಈ ಜಿಲ್ಲೆಯಲ್ಲಿ ಹರಿಯುವ ಮುಖ್ಯ ನದಿಯಾಗಿದೆ.

ಧಮತರಿಯ ಸುತ್ತಲಿನ ಆಕರ್ಷಣೆಗಳು

ಮನಮೋಹಕ ಪ್ರಕೃತಿ ಸೌಂದರ್ಯದಿಂದ ಅನುಗ್ರಹೀತವಾದ ಹಾಗೂ ವನ್ಯಜೀವಿಗಳ ವಿಶಾಲವಾದ ಆಶ್ರಯಧಾಮ ಹೊಂದಿರುವ ಧಮತರಿ ಜಿಲ್ಲೆಯು, ಇಲ್ಲಿನ ಪರಂಪರಾಗತ ಜಾನಪದ ಸಂಸ್ಕೃತಿಗೆ ಪ್ರಖ್ಯಾತವಾಗಿದ್ದು, ಇದು ಈ ಸ್ಥಳದ ಮಹಿಮೆಗೆ ಇನ್ನಷ್ಟು ಮೆರಗು ನೀಡುತ್ತದೆ. ಧಮತರಿ ಹಲವು ಪ್ರವಾಸಿ ತಾಣಗಳನ್ನು ಹೊಂದಿದೆ.

ಗ್ಯಾಂಗ್ರೆಲ್ ಆಣೆಕಟ್ಟು ಎಂದು ಅರಿಯಲ್ಪಡುವ ಖ್ಯಾತ ರವಿಶಂಕರ್ ನೀರಿನ ಆಣೆಕಟ್ಟು ಸೂರ್ಯಾಸ್ತಕ್ಕೆ ಪ್ರಖ್ಯಾತವಾಗಿದ್ದು ವರ್ಷಂಪ್ರತಿ ಹಲವಾರು ಪಿಕ್ನಿಕ್ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಇದು ಛತ್ತೀಸಗಡ್ ನ ಹಾಗೂ ಇತರ ನೆರೆ ರಾಜ್ಯಗಳಿಂದ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಮಳೆಗಾಲದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಆಣೆಕಟ್ಟು ತುಂಬಿ, ನೀರು ಅಣೆಕಟ್ಟಿನ ಮೇಲಿನಿಂದ ಕೆಳಕ್ಕೆ ಹರಿಯುವ ದೃಶ್ಯ ಸುಂದರವಾಗಿರುತ್ತದೆ.

ಸೀತಾನದಿ ವನ್ಯ ಜೀವಿ ಅಭಯಧಾಮ ಒಂದು ಹುಲಿ ಆಶ್ರಯಧಾಮವೂ ಆಗಿದ್ದು ಒಂದು ಮುಖ್ಯ ಪ್ರವಾಸಿ ಆಕರ್ಷಣೆಯಾಗಿದೆ. ಸಿಹಾವ ಪಹಾಡ್ ಎಂದು ಕರೆಯಲ್ಪಡುವ ಸತ್ಪುರ ಪರ್ವತ ಶ್ರೇಣಿಗಳು ಇಲ್ಲಿನ ಇನ್ನೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ದುರ್ಗಾ ಮಾತೆಯ ಪವಿತ್ರ ಕ್ಷೇತ್ರವಾದ ಬಿಲೈ ಮಾತಾ ಮಂದಿರ, ಯಾತ್ರಿಗಳು ನೋಡಬಹುದಾದ ಸ್ಥಳವಾಗಿದೆ

ಧಮತರಿ - ಕಲೆ ಮತ್ತು ಸಂಸ್ಕೃತಿ

ಧಮತರಿ ನಗರವು ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ. ಧಮತರಿಯ ಬಹಳಷ್ಟು ಮಂದಿ ನಂಬುವ ಹಾಗೂ ಪೂಜಿಸುವ ವಿಂಧ್ಯವಾಸಿನಿ ಹಾಗೂ ಅಂಗರ್ಮೊತಿ ದೇವಸ್ಥಾನಗಳು ಇಲ್ಲಿನ ಕಲೆ ಹಾಗೂ ಸಾಂಸ್ಕೃತಿಕ ನಂಬುಗೆಗಳಿಗೆ ವಿಖ್ಯಾತವಾಗಿವೆ.

ಚಿತ್ರಸದೃಶ ಭೂ ದೃಶ್ಯಗಳ ಮಧ್ಯವೂ ಧಮತರಿಯಲ್ಲಿ ವೈಭವಯುತವಾದಂತಹ ಸ್ಮಾರಕಗಳು ತಲೆಯೆತ್ತಿ ನಿಂತಿವೆ. ಈ ಬೃಹದಾಕಾರದ ಕಟ್ಟಡಗಳು ಇಲ್ಲಿನ ಜನರ ಕಲಾತ್ಮಕತೆ, ಶಿಲ್ಪವಿಜ್ಞಾನ ಹಾಗೂ ಸೃಜನಶೀಲ ಚಿಂತನೆಗಳನ್ನು ಪ್ರತಿಬಿಂಬಿಸುತ್ತವೆ.

ಧಮತರಿಗೆ ಭೇಟಿ ನೀಡಲು ಸೂಕ್ತ ಸಮಯ

ಧಮತರಿಯಲ್ಲಿ ಉಷ್ಣವಲಯದ ವಾತಾವರಣವಿದ್ದು, ಬೇಸಿಗೆ ಕಾಲ, ಮಳೆಗಾಲ ಮತ್ತು ಚಳಿಗಾಲ ಇಲ್ಲಿನ ಮುಖ್ಯ ಋತುಗಳಾಗಿವೆ. ಧಮತರಿಗೆ ಭೇಟಿ ನೀಡಲು ಸೂಕ್ತ ಸಮಯ ಚಳಿಗಾಲವಾಗಿದೆ.

ಧಮತರಿಯನ್ನು ತಲುಪುವ ಬಗೆ

ಧಮತರಿ ರಾಜ್ಯದ ಇತರ ಮುಖ್ಯ ನಗರಗಳೊಂದಿಗೆ ಉತ್ತಮ ರೈಲು ಹಾಗೂ ರಸ್ತೆ ಸಂಪರ್ಕವನ್ನು ಹೊಂದಿದೆ. ಅಲ್ಲದೆ, ನಗರ ಕೂಡಾ ಉತ್ತಮ ರೈಲು ಹಾಗೂ ರಸ್ತೆ ಸೌಕರ್ಯಗಳನ್ನು ಹೊಂದಿವೆ.

ಧಮತರಿ ಪ್ರಸಿದ್ಧವಾಗಿದೆ

ಧಮತರಿ ಹವಾಮಾನ

ಉತ್ತಮ ಸಮಯ ಧಮತರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಧಮತರಿ

  • ರಸ್ತೆಯ ಮೂಲಕ
    ರಾಯ್ಪುರ್ ನಗರವು ಧಮತರಿಯಿಂದ 76 ಕಿಲೋಮೀಟರು ಉತ್ತರದಲ್ಲಿದ್ದು, ಈ ಮಾರ್ಗವಾಗಿ ಕಡಿಮೆ ವೆಚ್ಚದ ನಿಯಮಿತ ಬಸ್ ಗಳ ವ್ಯವಸ್ತೆಯಿದೆ. ನೀವು ನೇರವಾಗಿ ಧಮತರಿಗೆ ಭೇಟಿ ನೀಡಬಹುದು ಅಥವಾ ರಾಯ್ಪುರ್ ಮೂಲಕ ಧಮ್ತರಿಗೆ ತೆರಳಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಧಮತರಿಯಲ್ಲಿ ರೈಲ್ವೆ ಸ್ಟೇಷನ್ ಇರುವ ಕಾರಣ ಇಲ್ಲಿಗೆ ನೇರ ರೈಲು ವ್ಯವಸ್ಥೆಯಿದೆ. ಇಲ್ಲಿನ ಭಾರತದ ಇತರ ಭಾಗಗಳಿಗೆ ನಿಯಮಿತ ರೈಲು ವ್ಯವಸ್ಥೆ ಕೂಡಾ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    16 ಕಿ.ಮೀ ದೂರದಲ್ಲಿರುವ ರಾಯಪುರ್ ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat