ನವಲಖಾ ದೇಗುಲವು ರಾಧಾಕೃಷ್ಣನ ದೇಗುಲ. ಇದನ್ನು ಬಾಲಾನಂದ ಬ್ರಹ್ಮಚಾರಿಯ ಅನುಯಾಯಿಯಾಗಿದ್ದ ರಾಣಿ ಚಾರುಶಿಲಾ ನಿರ್ಮಿಸಿದಳು. ಇದು ದಿಯೋಘರ್ನ ಹೊರಭಾಗದಲ್ಲಿದೆ. ಬೈದ್ಯನಾಥ ದೇಗುಲದಿಂದ 1.5 ಕಿಮೀ ದೂರದಲ್ಲಿದೆ. ಈ ದೇಗುಲದ ವಾಸ್ತುಶೈಲಿಯು ಬೇಲೂರಿನ ರಾಮಕೃಷ್ಣ ದೇಗುಲದ ಮಾದರಿಯಲ್ಲಿದೆ. ಈ ದೇಗುಲ ನಿರ್ಮಾಣಕ್ಕೆ 9 ಲಕ್ಷ ಖರ್ಚು ಮಾಡಿದ್ದರಿಂದ ಇದಕ್ಕೆ ನವಲಖಾ ಎಂದು ಹೆಸರು ಬಂದಿದೆ.