Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ತೀನ್ ಮೂರ್ತಿ ಭವನ್

ತೀನ್ ಮೂರ್ತಿ ಭವನ್, ದೆಹಲಿ

4

ತೀನ್ ಮೂರ್ತಿ ಭವನ್ ಅಥವಾ ತೀನ್ ಮೂರ್ತಿ ಹೌಸ್, ಎಂದು ಕರೆಯಲಾಗುವ ಈ ಭವನದಲ್ಲಿ ಮೊದಲಿಗೆ ಬ್ರಿಟೀಷ್ ಕಮಾಂಡರ್-ಇನ್-ಚೀಫ್ ವಾಸವಾಗಿದ್ದರು. ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ಅವರು ಕೂಡ ತಮ್ಮ ಅಧಿಕಾರದ ಕಾಲಾವಧಿಯಲ್ಲಿ ಸುಮಾರು 16 ವರ್ಷಗಳ ಕಾಲ ಇದೇ ಬಂಗಲೇಯಲ್ಲಿ ವಾಸವಾಗಿದ್ದರು.

ಇಂಪೇರಿಯಲ್ ಇಂಡಿಯಾದ ನ್ಯೂ ಕ್ಯಾಪಿಟಲಿನ ಒಂದು ಭಾಗವಾಗಿ 1930 ರಲ್ಲಿ ಈ ಮನೆಯನ್ನು ನಿರ್ಮಾಣ ಮಾಡಲಾಯಿತು. ನೆಹರು ಅವರ ಮರಣದ ನಂತರ ಇದನ್ನು ಸ್ಮಾರಕವನ್ನಾಗಿ ಮಾಡಲಾಯಿತು. ಬ್ರಿಟೀಷ್ ಶಿಲ್ಪಿ ಲಿಯೋನಾರ್ಡ್ ಜೆನ್ನಿಂಗ್, ಈ ಮನೆಯಲ್ಲಿ ನಿರ್ಮಿಸಿರುವ ಮೂರು ಮೂರ್ತಿಗಳಿಂದಾಗಿ ಇದಕ್ಕೆ ತೀನ್ ಮೂರ್ತಿ ಹೌಸ್ ಎಂಬ ಹೆಸರು ಬಂದಿದೆ.

ಬ್ರಿಟನ್ನಿನ ಹೆಸರಾಂತ ವಾಸ್ತು ಶಿಲ್ಪಗಾರ ರಾಬರ್ಟ್ ಟೋರ್ ರುಸೆಲ್ ಈ ಮನೆಯ ವಿನ್ಯಾಸಗಾರ. ಈಗ ಇದು ನೆಹರು ಸ್ಮಾರಕ ಗ್ರಂಥಾಲಯವಾಗಿದ್ದು ಭಾರತ ಇತಿಹಾಸದ ಸಂಶೋಧನಾ ಕೇಂದ್ರವಾಗಿ ಉಪಯೋಗಿಸಲ್ಪಡುತ್ತಿದೆ. ಅನೇಕ ಸಂಶೋಧಕರು ಬರೆದ ಚರಿತ್ರೆ ಹಾಗೂ ಸಂಗ್ರಹಿಸಿದ ಸಂಶೋಧನಾ ವಸ್ತುಗಳನ್ನು ಇಲ್ಲಿ ಇಡಲಾಗಿದೆ. ನೆಹರು ಕುಟುಂಬದವರ ಅಪರೂಪದ ಫೋಟೋಗಳನ್ನು ಸಹ ಇಲ್ಲಿ ಸಂಗ್ರಹಿಸಿ ಇಡಲಾಗಿದ್ದು, ಅವರ ವೈಯಕ್ತಿಕ ವಸ್ತುಗಳು ಹಾಗೂ ಪತ್ರಗಳೂ ಇಲ್ಲಿವೆ. ಇಲ್ಲಿ ಸಮಕಾಲೀನ ಶೈಕ್ಷಣಿಕ ಅಭ್ಯಾಸ ಕೇಂದ್ರ ಮತ್ತು ನೆಹರೂ ಪ್ಲಾನೆಟೋರಿಯಂ ಕೂಡ ಇದೆ.

1964 ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ರಾಧಾಕೃಷ್ಣರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ಜವಾಹರಲಾಲ್ ನೆಹರು ಮೆಮೋರಿಯಲ್ ಫಂಡ್ ಕೇಂದ್ರ ಕಛೇರಿಯೂ ಇದೇ ಕಟ್ಟಡದಲ್ಲಿದೆ.

ರಾಷ್ಟ್ರಪತಿ ಭವನಕ್ಕೆ ಸಮೀಪದಲ್ಲೇ ಈ ಕಟ್ಟಡವಿದೆ. ಸೋಮವಾರ ಹೊರತು ಪಡಿಸಿ ಪ್ರತಿನಿತ್ಯ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ತೆರೆದಿದ್ದು ಪ್ರವೇಶ ಶುಲ್ಕ ಇರುವುದಿಲ್ಲ. ರೇಸ್ ಕೋರ್ಸ್ ಮೆಟ್ರೋ ನಿಲ್ದಾಣ ಇದರ ಸಮೀಪದಲ್ಲೇ ಇದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun