ಮಿಲೇನಿಯಂ ಇಂದ್ರಪ್ರಸ್ಥ ಉದ್ಯಾನ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದ ಸದಸ್ಯರನ್ನು ಅತ್ಯಂತ ಖುಶಿಯಾಗಿಡುವ ಹಾಗೂ ಅತ್ಯಂತ ಮನೋಲ್ಲಾಸದಾಯಕ ತಾಣ. ಪೂರ್ವ ದಿಲ್ಲಿಯ ಹೊರ ವರ್ತುಲ ರಸ್ತೆಯಲ್ಲಿ ಇದಿದೆ. ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನಿರ್ವಹಣೆ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತು 2004 ರಲ್ಲಿ ಇದನ್ನು ಆರಂಭಿಸಿದೆ.
ಇಡೀ ಉದ್ಯಾನವು ನಾನಾ ವಿಭಾಗವಾಗಿ ವಿಂಗಡಣೆಯಾಗಿದೆ. ಇದನ್ನು ಸ್ಮೃತಿವನ, ಫ್ರಗ್ರಂಟ್ ಗಾರ್ಡನ್, ಬೋಗನ್‌ವಿಲ್ಲಾ ಉದ್ಯಾನ, ಟೋಪರಿ ಗಾರ್ಡನ್, ಫೋಲಿಂಗೇ ಗಾರ್ಡನ್ ಹೀಗೆ ಇತ್ಯಾದಿಗಳನ್ನು ಇಲ್ಲಿ ಹೆಸರಿಸಲಾಗಿದೆ. ಇಲ್ಲೊಂದು ವಿಶ್ವ ದರ್ಜೆಯ ಸ್ಥೂಪ ಒಂದಿದೆ. ಇದು 2007ರಲ್ಲಿ ಉದ್ಘಾಟನೆಯಾಗಿದೆ. ಈ ಸಂದರ್ಭದಲ್ಲಿ ಹಲವು ಸಾಧು ಸಂತರು, ಮೋಂಕ್, ನನ್‌ಗಳು, ದಲೈಲಾಮಾ, ದೇಶದ ಅಂದಿನ ರಾಷ್ಟ್ರಪತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇಂದ್ರಪ್ರಸ್ಥ ಉದ್ಯಾನವು ಹಸಿರಿಗೆ ಹೆಸರಾಗಿದೆ. ತಾಜಾ ಹಾಗೂ ಆಹ್ಲಾದಮಯ ವಾತಾವರಣ ಹೊಂದಿದೆ. ಇಲ್ಲಿ ಆಂಫಿಥಿಯೇಟರ್, ಫುಡ್ ಕೋರ್ಟ್, ವಾಟರ್ ಕ್ಯಾಸ್ಕೇಡ್ ಹಾಗೂ ಲ್ಯಾಂಡ್‌ಸ್ಕೇಪ್ ಮತ್ತಿತರ ಆಕರ್ಷಣೆಗಳು ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಆರಾಮದಾಯಕ ವಾತಾವರಣ ಸಂತಸದ ಮಹಾಪೂರವನ್ನೇ ಹರಿಸುತ್ತವೆ. ಇದಕ್ಕೆ ಸಮೀಪ ಇರುವ ಇನ್ನೊಂದು ಆಕರ್ಷಣೆ ಹುಮಾಯೂನ್ ಟೊಂಬ್. ಇದು ಪಾರ್ಕ್ ಎದುರಿನಿಂದ ಸುಲಭವಾಗಿ ಕಾಣುತ್ತದೆ.
ಈ ಉದ್ಯಾನಕ್ಕೆ ಪ್ರವೇಶ ರಾತ್ರಿ 8.30 ರವರೆಗೂ ಮುಕ್ತವಾಗಿರುತ್ತದೆ.