Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಲೋದಿ ಗಾರ್ಡನ್ಸ್/ಉದ್ಯಾನವನ

ಲೋದಿ ಗಾರ್ಡನ್ಸ್/ಉದ್ಯಾನವನ, ದೆಹಲಿ

20

ಲೋದಿ ಗಾರ್ಡನ್ ಇದು ದೆಹಲಿಯಲ್ಲಿರುವ ಉದ್ಯಾನವನ. ಸುಮಾರು 90 ಎಕರೆ ವ್ಯಾಪ್ತಿಯ ಜಾಗದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ಪುರಾತತ್ವ ಇಲಾಖೆಯ ಸಂರಕ್ಷಿತ ಪ್ರದೇಶವಾಗಿದೆ ಹಾಗೂ ಲೋದಿ ಸಮಾಧಿ ಮತ್ತು ಮೊಹಮ್ಮದ್ ಷಾ ನ ಗೋರಿಗಳನ್ನು ಹೊಂದಿರುವ ಪ್ರಮುಖವಾದ ಸ್ಥಳವಾಗಿದೆ. ಈ ಗೋರಿಗಳನ್ನು ಹೊರತುಪಡಿಸಿ, ಬಾರ್ ಗುಂಬಜ್/ದ್ ಮತ್ತು ಶೀಶ್ ಗುಂಬಜ್/ದ್ ಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಎಲ್ಲಾ ರಚನೆಗಳು 15 ನೇ ಶತಮಾನದ ಸಮಯದಲ್ಲಿ ಉತ್ತರ ಭಾರತದ ಪ್ರಮುಖ ಭಾಗವನ್ನು ಆಳುತ್ತಿದ್ದ ಲೋದಿ ಮತ್ತು ಸಯ್ಯಿದ್ ಸಾಮ್ರಾಜ್ಯ ಆಡಳಿತಗಾರರ ಅವಧಿಯ ಅದ್ಬುತವಾದ ವಾಸ್ತು ಶಿಲ್ಪವನ್ನು ಹೊಂದಿವೆ.

ಲೋದಿ ಉದ್ಯಾನವನಗಳು, ಸಫ್ದರ್ಜಂಗ್ ಗೋರಿ ಮತ್ತು ಖಾನ್ ಮಾರುಕಟ್ಟೆ ನಡುವೆ ಇದೆ. ಆರೋಗ್ಯ ಪ್ರಜ್ಞೆ ಹೊಂದಿರುವ ದೆಹಲಿಗರಿಗೆ ಇದೊಂದು ಅಚ್ಚುಮೆಚ್ಚಿನ ತಾಣ. ಅಲ್ಲದೇ, ಬೆಳಿಗ್ಗೆ ಮತ್ತು ಸಂಜೆ ಕಾಲ್ನಡಿಗೆಯಲ್ಲಿ ಈ ಉದ್ಯಾನವನದಲ್ಲಿ ಸುತ್ತಬಹುದು.

ಸಮಾಧಿಗಳ ಕೆಲವು ವಿವರಗಳು

ಸಿಕಂದರ್ ಲೋದಿಯ ಸಮಾಧಿ : ಸಿಕಂದರ್ ನ ಈ ಸಮಾಧಿಯು 1517 ರಲ್ಲಿ ಅವನ ಮಗ ಇಬ್ರಾಹಿಂ ಲೋದಿಯಿಂದ ನಿರ್ಮಿಸಲ್ಪಟ್ಟಿತು. ಸರಳ ಆಯತಾಕಾರದ ಮಂದಿರವಾಗಿದ್ದು ಇದನ್ನು 1866 ರಲ್ಲಿ ಬ್ರಿಟಿಷರು ಪುನರುಜ್ಜೀವಿತಗೊಳಿಸಿದರು. ಬಾಬರ್ ಇಬ್ರಾಹಿಂ ಲೋದಿ ಸೋಲಿನ ವಿವರಗಳೊಂದಿಗಿನ ಒಂದು ಶಾಸನವನ್ನು ಇದರ ಮೇಲೆ ಬರೆಸಲಾಯಿತು. ಮೊಹಮ್ಮದ್ ಷಾನ ಗೋರಿ : ಲೋದಿ ಉದ್ಯಾನವನದಲ್ಲಿ ಬಹಳ ಹಿಂದೆಯೇ ನಿರ್ಮಿಸಲಾದ ಗೋರಿಯಾಗಿದೆ. ಈ ಗೋರಿಯನ್ನು ಸಯ್ಯದ್ ರಾಜವಂಶದ ಕೊನೆಯ ದೊರೆ ಮೊಹಮ್ಮದ್ ಷಾ ಅವರ ಗೌರವಾರ್ಥವಾಗಿ 1444 ರಲ್ಲಿ ಅಲಿ-ಅ-ಉದ್-ದ್ದಿನ್ ಆಲಂ ಷಾ ಎಂಬವನು ನಿರ್ಮಿಸಿದ್ದನು. ಬಾರಾ ಗುಂಬದ್/ಜ್ : ರಚನೆಯ ಹೆಸರಿನ ಅರ್ಥ ಒಂದು ದೊಡ್ಡ ಗುಮ್ಮಟ ಮತ್ತು ಪಕ್ಕದಲ್ಲಿ ಮೂರು ಗುಮ್ಮಟಾಕಾರದ ಮಸೀದಿಯ ಒಂದು ಪ್ರವೇಶ ಎಂದು ಅರ್ಥೈಸಲಾಗುತ್ತದೆ. ಇಲ್ಲಿನ ಗೊಮ್ಮಟ ಹಾಗೂ ಮಸೀದಿಗಳು ಸಿಕಂದರ್ ಲೋದಿ ಆಳ್ವಿಕೆಯಲ್ಲಿ 1494 ರಲ್ಲಿ ಕಟ್ಟಲಾಗಿತ್ತು. ಶೀಶ್ ಗುಂಬಜ್ : ಶೀಶ್ ಗುಂಬಜ್ ನ ಅರ್ಥ ಗಾಜಿನ ಮಸೀದಿ (ಮಹಲು) ಇದರ ನಿರ್ಮಾಣಕ್ಕೆ ಗಾಜಿನ ಅಂಚುಗಳನ್ನು ಬಳಸಲಾಗಿದ್ದರಿಂದ ಈ ಹೆಸರು ಬಂದಿದೆ. ಈ ಗುಮ್ಮಟವು ಒಂದು ಕುಟುಂಬದ ಅವಶೇಷಗಳನ್ನು ಹೊಂದಿದೆ ಆದರೆ ಅದು ಯಾರಿಗೆ ಸಂಬಂಧಿಸಿದ್ದು ಎನ್ನುವುದರ ಬಗ್ಗೆ ಗುರುತುಗಳಿಲ್ಲ. ಶೀಶ್ ಗುಂಬಜ್ ಅನ್ನೂ ಕೂಡ ಸಿಕಂದರ್ ಆಳ್ವಿಕೆಯಲ್ಲಿಯೇ ಕಟ್ಟಲಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri