Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕಿರಣ್‌ ನಾದರ್ ಕಲಾ ಮ್ಯೂಸಿಯಂ

ಕಿರಣ್‌ ನಾದರ್ ಕಲಾ ಮ್ಯೂಸಿಯಂ, ದೆಹಲಿ

3

ಕಿರಣ್‌ ನಾದರ್ ಮ್ಯೂಸಿಯಂ ಆಫ್‌ ಆರ್ಟ್ (ಕೆಎನ್‌ಎಂಎ) ದೇಶದ ಹಾಗೂ ಸುತ್ತಲಿನ ರಾಷ್ಟ್ರಗಳಿಗೆ ಸಹ ಮೊದಲ ಕಲಾ ಗ್ಯಾಲರಿ ಎಂಬ ಹೆಗ್ಗಳಿಕೆ ಹೊಂದಿದೆ. ಪ್ರದರ್ಶನ ಕಲೆಯನ್ನು ಜನರಿಗೆ ಪರಿಚಯಿಸುವ ಕಲೆಯನ್ನು ಆರಂಭಿಸಿದ ಕೀತಿ ಇದಕ್ಕೆ ಸಲ್ಲುತ್ತದೆ. ಕಿರಣ್‌ ನಾದರ್ ಎಂಬ ಅಪರೂಪದ ಕಲಾ ವಸ್ತುಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯ ಹೆಸರನ್ನೇ ಈ ಗ್ಯಾಲರಿಗೂ ಇರಿಸಲಾಗಿದೆ. ಇದು ಭಾರತೀಯ ಕಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಪ್ರತಿನಿಧಿಸುವ ಕೇಂದ್ರವಾಗಿದೆ. ಇದನ್ನು ಚಿತ್ರ ಪ್ರದರ್ಶನ, ಪ್ರಸರಣ, ಜ್ಞಾನ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ರೂಪದಲ್ಲಿ ತೋರ್ಪಡಿಸುತ್ತಿದೆ.

20 ನೇ ಶತಮಾನದ ಕಲಾ ಪ್ರಕಾರಗಳನ್ನು ಈ ಮ್ಯೂಸಿಯಂ ಪ್ರಮುಖವಾಗಿ ಪ್ರದರ್ಶಿಸುತ್ತದೆ. ಅಪರೂಪದ ಹಾಗೂ ಆಕರ್ಷಕ ಸಂಗ್ರಹವನ್ನು ಕೂಡ ಇದು ಹೊಂದಿದೆ. ಸ್ವಾತಂತ್ರ್ಯ ಪೂರ್ವ ಕಾಲಾವಧಿಯ ಅತ್ಯಾಕರ್ಷಕ ಸಂಗ್ರಹ ಇಲ್ಲಿದೆ. ಅಂದಿನ ಯುವ ಕಲಾವಿದರು ಇದಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಕಲಾ ಮ್ಯೂಸಿಯಂ ಇನ್ನೊಂದು ಕಾರ್ಯದಲ್ಲಿಯೂ ತನ್ಮಯವಾಗಿದೆ. ಅದೇನೆಂದರೆ ಕಲೆಯನ್ನು ಇಷ್ಟಪಡುವ, ವೀಕ್ಷಿಸುವವರಿಗೆ ವೇದಿಕೆ ಕಲ್ಪಿಸಿದೆ. ಕಲೆಯನ್ನು ಕಲಿಯುವ ಹಾಗೂ ಚರ್ಚಿಸುವ ಅವಕಾಶ ಇಲ್ಲಿದೆ. ನಿತ್ಯ ಇಲ್ಲಿ ಸಾಕಷ್ಟು ಕಲಾ ಪ್ರದರ್ಶನಗಳು ನಡೆಯುತ್ತಿರುತ್ತವೆ.

'ಅಪಾರ ಸಂಖ್ಯೆಯ ಸಾರ್ವಜನಿಕರಿಗೆ ನನ್ನ ಕಲೆಯನ್ನು ಪರಿಚಯಿಸುವುದು ಉದ್ದೇಶವಾಗಿದೆ. ಇದಕ್ಕೆ ಮೂಲವಾಗಿ ಒಂದು ಕಲಾ ಗ್ಯಾಲರಿ ಅಗತ್ಯವಿತ್ತು. ಅದಕ್ಕಾಗಿ ಈ ಗ್ಯಾಲರಿ ತೆರೆಯುವ ನಿರ್ಧಾರ ಮಾಡಿದೆ. ದೇಶ ಹಾಗೂ ಸುತ್ತಲಿನ ರಾಷ್ಟ್ರಗಳ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸುವ, ಇಲ್ಲಿನ ಕಲಾ ವೈಭವವನ್ನು ಸಾರುವ ಕಾರ್ಯ ಇದರ ಮೂಲಕ ಆಗಲಿ ಎನ್ನುವುದು ಉದ್ದೇಶವಾಗಿದೆ' ಎಂಬ ಕಿರಣ್‌ ನಾದರ್ ಅವರ ಬರಹ ಇಲ್ಲಿ ಗಮನ ಸೆಳೆಯುತ್ತದೆ.

2010 ರ ಜನವರಿ ತಿಂಗಳಲ್ಲಿ ಕೆಎನ್‌ಎಂಎ ಈ ಗ್ಯಾಲರಿಯ ಕಾರ್ಯಾಚರಣೆ ಆರಂಭಿಸಿತು. ಇದಕ್ಕೆ ಶಿವ ನಾದರ್ ಫೌಂಡೇಶನ್‌ ಪ್ರಾಯೋಜಕತ್ವ ಲಭಿಸಿತು. ಸಮಕಾಲೀನ ಕಲಾ ಪ್ರಕಾರವನ್ನು ಸಾರ್ವಜನಿಕರು ಅರಿಯಲು ಈ ಗ್ಯಾಲರಿ ಸಹಾಯ ಮಾಡುತ್ತದೆ. ಇದನ್ನು ಇಲ್ಲಿನ ಪ್ರದರ್ಶನಗಳ ಮೂಲಕ ಶಾಲೆ, ಕಾಲೇಜು ಮತ್ತಿತರ ವಿಭಾಗದವರಿಗೆ ಅರಿವು ಮೂಡಿಸಲಾಗುತ್ತಿದೆ. ಇವರ ನಡುವೆ ಚರ್ಚೆ, ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಗ್ಯಾಲರಿ ಬಗ್ಗೆ ಕುತೂಹಲ ಮೂಡಿಸಲಾಗುತ್ತಿದೆ.

ಈ ಮ್ಯೂಸಿಯಂ ನೋಡುಗರ ಕಣ್ಣಿಗೆ ಹಬ್ಬ ನೀಡುತ್ತದೆ. ಇದು ಕಲಾ ಪ್ರಿಯರು ಹಾಗೂ ವಿಶ್ವ ಮಟ್ಟದ ಕಲಾ ಶ್ರೀಮಂತಿಕೆಯನ್ನು ಉಣಬಡಿಸುವ ಕಾರ್ಯ ಮಾಡುತ್ತಿದೆ. ಪ್ರತಿಯೊಬ್ಬರೂ ಇಲ್ಲಿನ ಎಗ್ಸಿಬಿಷನ್‌ನಲ್ಲಿ ಭಾಗವಹಿಸಬಹುದು. ನಿತ್ಯ ಒಂದಲ್ಲಾ ಒಂದು ಚಟುವಟಿಕೆಯಿಂದ ಇದು ಕೂಡಿರುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri