Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಖೂನೀ ದರ್ವಾಜಾ

ಖೂನೀ ದರ್ವಾಜಾ, ದೆಹಲಿ

3

ಖೂನೀ ದರ್ವಾಜಾ (ಕೊಲೆಗಡುಕ ಬಾಗಿಲು) - ಆಕರ್ಷಕ ಹೆಸರನ್ನು ಹೊಂದಿರುವುದರ ಜೊತೆಗೆ ಆಸಕ್ತಿದಾಯಕ ಪುರಾಣವನ್ನು/ದಂತಕಥೆಗಳನ್ನು ಹೊಂದಿದೆ. ಖೂನೀ ದರ್ವಾಜಾ ದೆಹಲಿಯ ಬಹದ್ದೂರ್ ಶಾ ಜಾಫರ್ ಮಾರ್ಗ್ ಗೇಟ್ ಬಳಿ ಇದೆ. ಫಿರೋಜಾಬಾದ್ ಎಂಬ ನಗರಕ್ಕೆ ಪ್ರಮುಖ ದ್ವಾರಗಳನ್ನು ನಿರ್ಮಿಸಿದ ಖ್ಯಾತಿಯ ಮುಸ್ಲಿಂ ಸುರ್ ಸಾಮ್ರಾಜ್ಯದ ಸ್ಥಾಪಕ, ಶೇರ್ ಶಾ ಸೂರಿಯಿಂದ ಖೂನೀ ದರ್ವಾಜಾ ನಿರ್ಮಿಸಲ್ಪಟ್ಟಿದೆ. ಫಿರೋಜಾಬಾದ್ ನಲ್ಲಿರುವ ದ್ವಾರ/ಗೇಟ್ ಕಜೂಲಿ ಬಜಾರ್ ಎಂದೂ ಹೆಸರಾಗಿದ್ದು ಅಫ್ಘಾನಿಸ್ತಾನದ ಜನರು ಈ ದ್ವಾರದ ಮೂಲಕವೇ ಹಾದು ಹೋಗಬೇಕಿತ್ತು. ಇದು 15.5 ಮೀ. ಎತ್ತರದ ಗೇಟ್ ಆಗಿದ್ದು, ದೆಹಲಿ ಕ್ವಾರ್ಟ್ಜೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಖೂನೀ ದರ್ವಾಜಾಕ್ಕೆ ಬೇರೆ ಬೇರೆ ಹಂತಗಳಲ್ಲಿ ಮೆಟ್ಟಿಲುಗಳ ಮೂಲಕ ಒಳಗೆ ಹೋಗಲು ಅವಕಾಶವಿದೆ. ಮೊಘಲ್ ರಾಜವಂಶದ ಮೂರು ದೊರೆಗಳಾದ ಬಹದ್ದೂರ್ ಷಾ ಜಾಫರ್ ನ ಮಕ್ಕಳಾದ ಮಿರ್ಜಾ ಮೋಘಲ್ ಮತ್ತು ಕಿಜರ್ ಸುಲ್ತಾನ್ ಹಾಗೂ ಬಹದ್ದೂರ್ ಷಾ ನ ಮೊಮ್ಮಗ ಮಿರ್ಜಾ ಅಬು ಬಕ್ರ್ ಇವರುಗಳು ಈ ಗೇಟ್ ನ ಬಳಿಯಲ್ಲಿಯೇ ಬ್ರಿಟಿಷ್ ನಾಯಕ ವಿಲಿಯಂ ಹಡ್ಸನ್ ನಿಂದ ರಾಜರ ಶರಣಾಗತಿಯ ನಂತರ ಸೆಪ್ಟಂಬರ್ 22, 1857 ರಂದು ಕೊಲ್ಲಲ್ಪಟ್ಟರು. ಇದೇ ಮುಂದೆ ಈ ದ್ವಾರವು ತನ್ನ ಹೆಸರನ್ನು ಪಡೆದುಕೊಳ್ಳಲು ಕಾರಣ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಈ ಖೂನೀ ದ್ವಾರವು ಈ ಹೆಸರನ್ನು ಯಾಕೆ ಪಡೆದುಕೊಂಡಿತು ಎನ್ನುವುದನ್ನು ವಿವರಿಸುವಂತಹ ಹಲವಾರು ದಂತಕಥೆಗಳಿವೆ.

ಇಲ್ಲಿ, ಕೆಲವು ಹೀಗಿವೆ :

ಒಂದು ನಂಬುಗೆಯೆಂದರೆ, ಅಕ್ಬರನ ಮಗ ಜಹಾಂಗೀರ್, ಅಬ್ದುಲ್ ರಹೀಮ್ ಖಾಮ್-ಐ-ಖನ್ಹಾ ನಿಂದ ಕೊಲ್ಲಲ್ಪಟ್ಟು ಇದೇ ದ್ವಾರಕ್ಕೆ ಅವನ ದೇಹವನ್ನು ನೇತುಹಾಕಲಾಗಿತ್ತು. ಸಿಂಹಾಸನದ ಗದ್ದುಗೆಗಾಗಿ ನಡೆದ ಹೋರಾಟ ಇದಾಗಿತ್ತು ಎನ್ನಲಾಗಿದೆ.

ಇನ್ನೊಂದು ಹೇಳಿಕೆಯ ಪ್ರಕಾರ, ಔರಂಗಾಜೇಬ್ ತನ್ನ ಸಹೋದರ ದಾರಾ ಶಿಕೊಹ್ ನನ್ನು ಸಿಂಹಾಸನದ ಹೋರಾಟದಲ್ಲಿ ಸೋಲಿಸಿದನು ಹಾಗೂ ಅವನ ಶಿರವನ್ನು ಇಲ್ಲಿನ ಗೇಟ್ ಗೆ ನೇತು ಹಾಕಿದ್ದನು ಎನ್ನಲಾಗಿದೆ.

ಇನ್ನೊಂದು ಹೆಳಿಕೆಯಂತೆ, 1739 ರಲ್ಲಿ ಪರ್ಶಿಯಾದ ನಾದಿರ್ ಷಾ ದೆಹಲಿಯನ್ನು ಸೂರೆಮಾಡುವಾಗ ಇಲ್ಲಿ ರಕ್ತಪಾತಗೈದನು ಎನ್ನಲಾಗುತ್ತದೆ. ಸ್ವಾತಂತ್ರ್ಯದ ಸಮಯದಲ್ಲಿ ಅಂದರೆ 1947ರ ಸಮಯದಲ್ಲಿ ಖೂನೀ ದರ್ವಾಜಾದಲ್ಲಿ ರಕ್ತಪಾತ ಸಂಭವಿಸಿತ್ತು ಎಂಬ ಪುರಾವೆಗಳಿವೆ. ಈ ಖೂನಿ ಗೇಟ್, ಎ ಎಸ್ ಐ ನಿಂದ ಸಂರಕ್ಷಿಸಲ್ಪಟ್ಟ ಐತಿಹಾಸಿಕ ತಾಣವೆನಿಸಿದೆ. ಆದಾಗ್ಯೂ 2002 ರಲ್ಲಿ ಈ ಸ್ಥಳದಲ್ಲಿ ನಡೆದ ಒಂದು ಘಟನೆಯಿಂದಾಗಿ ಈ ಗೇಟ್ ಮುಚ್ಚಲಾಗಿದ್ದು, ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu