Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ದೆಹಲಿ

7

ಜಾಮಾ ಮಸೀದಿಯು ಭಾರತದ ಅತ್ಯಂತ ಪುರಾತನ ಹಾಗೂ ದೊಡ್ಡ ಮಸೀದಿಯಾಗಿದೆ. ರಾಜಾ ಶಹಜಹಾನ್‌ನ ಕೊನೆಯ ವಾಸ್ತುಶಿಲ್ಪ ಕಾರ್ಯ ಇದಾಗಿದೆ. ಇದರ ನಿರ್ಮಾಣ ಕಾರ್ಯ 1650 ರಲ್ಲಿ ಆರಂಭವಾಗಿ 1656 ರಲ್ಲಿ ಪೂರ್ಣಗೊಂಡಿದೆ. ಇದು ದಿಲ್ಲಿಯ ಚೌರಿ ಬಜಾರ್‌ ರಸ್ತೆಯಲ್ಲಿದೆ. ಹಳೆ ದಿಲ್ಲಿಯ ಪ್ರಮುಖ ಆಕರ್ಷಣೆಯಲ್ಲಿ ಇದೂ ಒಂದೆನಿಸಿದೆ.

ಈ ಮಸೀದಿಯನ್ನು ಮೂಲತಃ 'ಮಸ್ಜಿದ್‌- ಐ- ಜಹಾನ್‌ ನುಂಬಾ' ಎಂದು ಹೇಳಲಾಗುತ್ತಿತ್ತು. ಅಂದರೆ 'ವಿಶ್ವವನ್ನು ಪ್ರತಿನಿಧಿಸುವ ಮಸೀದಿ' ಎಂದಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಜಾಮಾ ಮಸೀದಿ ಎಂದು ಹೆಸರು ಬದಲಿಸಿಕೊಂಡಿತು. ಈ ಶಬ್ಧ ಕೂಡ ಉರ್ದು ಭಾಷೆಯ ಜಮ್ಮಾಹ್‌ ನಿಂದ ಬಂದಿದೆ. ಮುಸ್ಲಿ ಸಮುದಾಯದವರಿಂದ ಪ್ರತಿ ಶುಕ್ರವಾರ ಮಧ್ಯಾಹ್ನ ವಿಶೇಷ ಪ್ರಾರ್ಥನೆ ನಡೆಯುತ್ತದೆ.

ಈ ಬೃಹತ್‌ ಮಸೀದಿ ಏಕಕಾಲಕ್ಕೆ 25,000 ಮಂದಿ ಭಕ್ತರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಮೂರು ಪ್ರಮುಖ ಪ್ರವೇಶ ದ್ವಾರ ಹೊಂದಿದೆ ಈ ಮಸೀದಿ. ಇದು ನಾಲ್ಕು ಖಂಬವನ್ನು ಹೊಂದಿದ್ದು, ಪ್ರತಿಯೊಂದೂ 40 ಮೀಟರ್‌ ಎತ್ತರವಾಗಿವೆ. ಇದನ್ನು ಕೆಂಪು ಕಲ್ಲು ಹಾಗೂ ಮಾರ್ಬಲ್‌ ಶಿಲೆಯಿಂದ ನಿರ್ಮಿಸಲಾಗಿದೆ. ಮಸೀದಿಯ ಒಳಗಡೆ ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟ 260 ಆಕರ್ಷಕ ಖಂಬಗಳಿವೆ. ಈ ಮಸೀದಿಯ ವಿಶೇಷವೆಂದರೆ ಇದನ್ನು ಹಿಂದು ಹಾಗೂ ಜೈನ್‌ ಸಮುದಾಯದ ವಾಸ್ತುಶಿಲ್ಪದ ಮಿಶ್ರಣವನ್ನು ಬಳಸಿ ನಿರ್ಮಿಸಲಾಗಿದೆ. ಒಳಗಿನ ನೆಲವನ್ನು ಬಿಳಿ ಹಾಗೂ ಕಪ್ಪು ಮಾರ್ಬಲ್‌ನಿಂದ ಅಲಂಕರಿಸಲಾಗಿದೆ. ಇದು ಮುಸ್ಲಿಮರು ಪ್ರಾರ್ಥನೆ ಸಂದರ್ಭದಲ್ಲಿ ನೆಲ ಹಾಸಿನ ರೂಪದಲ್ಲಿ ಬಳಕೆ ಆಗುತ್ತದೆ. ದೇಶದ ಅತಿ ದೊಡ್ಡ ಮಸೀದಿ ಎಂಬ ಹೆಗ್ಗಳಿಕೆ ಹೊಂದಿರುವ ಇದು ಐದು ಅಡಿ ಎತ್ತರದ ವೇದಿಕೆಯನ್ನು ಕೂಡ ಹೊಂದಿದೆ.

ಮಸೀದಿಯು ಸಾಕಷ್ಟು ಐತಿಹ್ಯವನ್ನು ಒಳಗೊಂಡಿದೆ. ಅವುಗಳಲ್ಲಿ ಒಂದು ಜಿಂಕೆ ಚರ್ಮದ ಮೇಲೆ ಖುರಾನ್‌ ಗ್ರಂಥವನ್ನು ಬರೆದಿರುವುದು. ಇದು ಮಸೀದಿಯ ಉತ್ತರ ಪ್ರವೇಶ ದ್ವಾರ ಬಳಿ ಕಾಣಸಿಗುತ್ತದೆ. ಇದು ದಿಲ್ಲಿಯ ಕೆಂಪುಕೋಟೆ ಎದುರು ಇರುವುದು ಇನ್ನೊಂದು ವಿಶೇಷ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed