ಇಂಡಿಯಾ ಹ್ಯಾಬಿಟೇಟ್ ಸೆಂಟರ್ ನಿರ್ಮಾಣ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ತಮಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗಾಗಿ ಈ ಯೋಜನೆ ಬಂತು. ನಂತರ ಇದೊಂದು ಸ್ವಯಂ ಸೇವಾ ಸಂಸ್ಥೆಯಾಗಿ, ಲಾಭದ ಆಸೆಗೆ ಒಳಗಾಗದೇ ಸೇವಾನಿರತವಾಗಿ ಮುಂದುವರಿಯಿತು. ಸರ್ಕಾರ ಮುಂದೆ ಇದರಲ್ಲಿ ಇನ್ನಷ್ಟು ಸ್ವಯಂ ಸೇವಾ ಸಂಸ್ಥೆಯವರಿಗೆ ಸದಸ್ಯತ್ವ ನೀಡಿತು. ಇದಲ್ಲದೇ ಈ ಯೋಜನೆ ಆರಂಭದ ಇನ್ನೊಂದು ಉದ್ದೇಶವೆಂದರೆ ಸಾಮಾನ್ಯರು ಹಾಗೂ ಸರ್ಕಾರದ ನಡುವಿನ ಸಮಾಗಮಕ್ಕೆ, ಸಮಾಲೋಚನೆಗೆ, ಚರ್ಚೆಗೆ ಹಾಗೂ ಗಣನೆಗೆ ಪಡೆಯಲು ಈ ಮಾರ್ಗ ಸುಗಮವಾಗಲಿ ಎನ್ನುವುದು. ಈ ಕೇಂದ್ರದ ಸೇವೆ ಮುಂದುವರಿದು ಇಂದು ಸಾಕಷ್ಟು ಪ್ರವಾಸಿಗರು ಹಾಗೂ ಭೇಟಿನೀಡುವವರಿಗೂ ಸೇವೆ ಸಲ್ಲಿಸುತ್ತಿದೆ.
ದಿ ಇಂಡಿಯನ್ ಹ್ಯಾಬಿಟೇಟ್ ಸೆಂಟರ್ (ಐಎಚ್ಸಿ) ನಿರ್ಮಾಣವಾಗಿದ್ದು 1993 ರಲ್ಲಿ. ಇದು ವ್ಯವಸ್ಥಿತವಾಗಿ, ವ್ಯಕ್ತಿಗಳು ಹಾಗೂ ಸಂಸ್ಥೆಗಳ ನಡುವೆ ಸದಾ ಸಂಪರ್ಕದಲ್ಲಿದ್ದು, ಇವರನ್ನು ಸೇರಿಸುವ ಕಾರ್ಯ ಮಾಡುತ್ತಿದೆ. ಇವರ ನಡುವಿನ ಸಂಬಂಧ ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿದೆ. ಈ ಸಂಸ್ಥೆಯ ಆವರಣದಲ್ಲಿ ವಸ್ತು ಸಂಗ್ರಹಾಲಯ, ಹೋಟೆಲ್, ರೆಸ್ಟೊರೆಂಟ್, ಬಹುವಿಧದ ಕೋರ್ಟ್ ಆವರಣ, ಗ್ರಂಥಾಲಯ ಇತ್ಯಾದಿಗಳಿವೆ.