Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಹುಮಾಯುನ್‌ ಟೊಂಬ್‌

ಹುಮಾಯುನ್‌ ಟೊಂಬ್‌, ದೆಹಲಿ

9

ಹೊಸದಿಲ್ಲಿಯಲ್ಲಿ ಹುಮಾಯುನ್‌ ಟೊಂಬ್‌ನ್ನು ಮುಘಲ್‌ ಅರಸರ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದು ಇಲ್ಲಿನ ಅತ್ಯಂತ ಜನಪ್ರಿಯ ತಾಣವಾದ ಓಲ್ಡ್‌ ಫೋರ್ರ್ಟ್ ಅಥವಾ ಪುರಾನಾ ಖಿಲಾ ಬಳಿ ಇದೆ. ಈ ಟೊಂಬ್‌ನ್ನು ಹುಮಾಯುನ್‌ನ ಪತ್ನಿ ಹಮಿದಾ ಭಾನು ಬೇಗಂ ನಿಯೋಜನೆಯಲ್ಲಿ 1562 ರಲ್ಲಿ ನಿರ್ಮಿಸಲಾಗಿದೆ. ಇದನ್ನು ಪರ್ಶಿಯನ್‌ ವಾಸ್ತುಶಿಲ್ಪಿ ಮಿರಕ್‌ ಮಿರ್ಜಾ ಗಿಯಾತ್‌ ಅವರು ವಿನ್ಯಾಸಪಡಿಸಿದ್ದಾರೆ. ಹುಮಾಯುನ್‌ನ ಸಾವಿನ ಒಂಬತ್ತು ವರ್ಷಗಳ ನಂತರ ಈ ಟೊಂಬ್‌ ಅನ್ನು ನಿರ್ಮಿಸಲಾಯಿತು. ದಿಲ್ಲಿಯ ಪ್ರಮುಖ ಆಕರ್ಷಣೀಯ ತಾಣಗಳಲ್ಲಿ, ಪ್ರವಾಸಿಗರನ್ನು ಸೆಳೆಯುವ ಪ್ರದೇಶಗಳಲ್ಲಿ ಹುಮಾಯುನ್‌ ಟೊಂಬ್‌ ಕೂಡ ಒಂದು. ನಿಜಾಮುದ್ದೀನ್‌ ನ ಪೂರ್ವ ದಿಕ್ಕಿನ ಪ್ರದೇಶದಲ್ಲಿದೆ. ಇದು ಲೋದಿ ರಸ್ತೆ ಹಾಗೂ ಮಾಥುರ್‌ ರಸ್ತೆ ನಡುವೆ ಇದೆ. ಇದು ಯುಎನ್‌ಇಎಸ್‌ಸಿಒ ಮೂಲಕ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ 1993 ರಲ್ಲಿಯೇ ಸೇರ್ಪಡೆ ಆಗಿದೆ. ಇದು ದೇಶದಲ್ಲಿರುವ ಆಕರ್ಷಕ ಮುಘಲ್‌ ವಾಸ್ತುಶಿಲ್ಪ ಎಂಬ ಹೆಗ್ಗಳಿಕೆಯನ್ನು ತನ್ನೊಡಲೊಳಗೆ ಸೇರಿಸಿಕೊಂಡಿದೆ.  

ಇದೊಂದು ಆಕರ್ಷಕ ಉದ್ಯಾನವನ್ನು ಒಳಗೊಂಡ ಟೊಂಬ್‌ ಆಗಿದೆ. ಗೋಡೆಯಿಂದ ಸುತ್ತುವರಿಯಲ್ಪಟ್ಟಿರುವ ಈ ತಾಣದ ಪ್ರವೇಶದ್ವಾರದಲ್ಲೇ ಆಕರ್ಷಕ ಉದ್ಯಾನ ಸ್ವಾಗತಿಸುತ್ತದೆ. ನೀರಿನ ಕಾಲುವೆ ಹಾಗೂ ಕಾರಂಜಿ, ವಾಕಿಂಗ್‌ ಮಾರ್ಗ ಸೇರಿದಂತೆ ಹಲವು ಆಕರ್ಷಣೆಗಳು ಇಲ್ಲಿವೆ. ಈ ಗೋಡೆಯ ಒಳಗೆ ಇನ್ನೂ ಅನೇಕ ಮುಘಲ್‌ ಅರಸರ ಟೊಂಬ್‌ಗಳೂ ಇವೆ.

ಇಲ್ಲಿರುವ ಇತರೆ ಅರಸರ ಟೊಂಬ್‌ಗಳನ್ನು ಈ ರೀತಿ ಪಟ್ಟಿ ಮಾಡಬಹುದು. ಇವು ನಿರ್ಮಾಣವಾದ ಸಂದರ್ಭವೂ ಇದೆ.ಚಾರ್‌ ಬಾಗ್‌ ಗಾರ್ಡನ್‌: ಇದು ಪರ್ಶಿಯನ್‌ ಶೈಲಿಯ ಉದ್ಯಾನವಾಗಿದೆ. ದಕ್ಷಿಣ ಏಷ್ಯಾದಲ್ಲಿಯೇ ಈ ಮಾದರಿಯ ನಿರ್ಮಾಣವಾಗಿರುವುದು ಇದೇ ಪ್ರಥಮ.

ಬಾರ್ಬರನ(ಕ್ಷೌರಿಕ) ಟೊಂಬ್‌: ಬಾರ್ಬರನ ಟಂಬ್‌ ನಯಿ-ಕಾ-ಗುಂಬದ್‌ ಎಂದು ಕರೆಸಿಕೊಳ್ಳುತ್ತದೆ. ಇದು ರಾಯಲ್ ಬಾರ್ಬರ್‌ಗೆ ಸೇರಿದ ಟೊಂಬ್‌ ಆಗಿದೆ. ಆದರೆ ಈ ಟೊಂಬ್‌ ಮೇಲೆ ಇದನ್ನು ಯಾರು ನಿರ್ಮಿಸಿದರು, ಯಾರ ಮಾರ್ಗದರ್ಶನದಲ್ಲಿ ನಡೆಯಿತು ಎಂಬ ಯಾವುದೇ ಮಾಹಿತಿ ಇದರ ಮೇಲೆ ಇಲ್ಲ. ಯಾರಿಗೆ ಸಂಬಂಧಿಸಿದ್ದು ಎಂಬುದು ಕೂಡ ಅರಿವಿಗೆ ಬಂದಿಲ್ಲ.

ಹುಮಾಯುನ್ ಟೊಂಬ್‌ನಲ್ಲಿರುವ ಇತರೆ ಸ್ಮಾರಕಗಳೆಂದರೆ ಬು ಹಲಿಮಾಸ್‌ ಟೊಂಬ್‌ ಹಾಗೂ ಉದ್ಯಾನ, ಇಸಾ ಖಾನ್‌ರ ಟೊಂಬ್‌ ಹಾಗೂ ಮಸೀದಿ, ನೀಲಾ ಗುಂಬದ್‌, ಅಪ್ಸರ್‌ವಾಲಾ ಟೊಂಬ್‌, ಚಿಲ್ಲಾಹ ನಿಜಾಮುದ್ದೀನ್‌ ಔಲಿಯಾ ಹಾಗೂ ಅರಬ್‌ ಸರಯ್‌ ಮತ್ತಿತರರ ಟೊಂಬ್‌ ಇಲ್ಲಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat