Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಹೌಜ್ ಖಾಸ್‌ ಕಾಂಪ್ಲೆಕ್ಸ್‌

ಹೌಜ್ ಖಾಸ್‌ ಕಾಂಪ್ಲೆಕ್ಸ್‌, ದೆಹಲಿ

4

ಹೌಜ್ ಖಾಸ್‌ ಕಾಂಪ್ಲೆಕ್ಸ್‌ ಒಂದು ರೀತಿಯಲ್ಲಿ ನೆನಪುಗಳ ಸಂಗ್ರಹಾಲಯ. ದಕ್ಷಿಣ ದಿಲ್ಲಿಯಲ್ಲಿ ಇದು ನೆಲೆಗೊಂಡಿದೆ. ಐತಿಹಾಸಿಕ ಪ್ರಸಿದ್ಧವಾದ ಈ ಆವರಣದಲ್ಲಿ ಹಲವು ಆಕರ್ಷಣೆಗಳಿವೆ ಅದರಲ್ಲಿ ಟಂಬ್‌, ಇಸ್ಲಾಮಿಕ್‌ ಸಮಾಧಿ, ಮಸೀದಿ, ನೀರಿನ ಕೊಳ, ಕ್ರೀಡಾ ಮಂಟಪಗಳು ಹಾಗೂ ಸಾಕಷ್ಟು ಕೊಳಗಳು ಇವೆ.

ಹೌಜ್ ಖಾಸ್‌ ಎರಡನೇ ಮಧ್ಯಯುಗದ ನಗರವಾಗಿದ್ದು ಸಿರಿ ವ್ಯಾಪ್ತಿಗೆ ಅಂದರೆ ಅಲ್ಲಾವುದ್ದೀನ್‌ ಖಿಲ್ಜಿ ಆಡಳಿತ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿತ್ತು. ಇಂದು ಇದು ಜಿಂಕೆ ಉದ್ಯಾನಕ್ಕೆ ಅತ್ಯಂತ ಸಮೀಪದಲ್ಲಿದೆ. ಸಪ್ದರ್‌ಜಂಗ್‌ ಅಭಿವೃದ್ಧಿ ಪ್ರದೇಶದ ವ್ಯಾಪ್ತಿಯಲ್ಲಿದೆ. ರಸ್ತೆ ಹಾಗೂ ರೈಲು ಸಂಪರ್ಕ ಇಲ್ಲಿ ಉತ್ತಮವಾಗಿದೆ. ಅತ್ಯಾಕರ್ಷಕ ಪ್ರವಾಸಿ ತಾಣವಾಗಿ ಇದು ಜನಪ್ರಿಯವಾಗಿದೆ. ಅಲ್ಲದೇ ಇದು ಆಕರ್ಷಕ ಮಳಿಗೆಗಳನ್ನು ಒಳಗೊಂಡಿದ್ದು, ಜನಪ್ರಿಯ ಹಾಗೂ ಬಹು ಬೇಡಿಕೆಯ ಭಾರತೀಯ ಪಾರಂಪರಿಕ ಉಡುಗೆಗಳ ಮಾರಾಟದ ಪ್ರಮುಖ ತಾಣವಾಗಿ ಅಭಿವೃದ್ಧಿ ಹೊಂದಿದೆ.

ಘಟಿಸಿದ ಸಂದರ್ಭಗಳ ಜತೆ ಒಂದಿಷ್ಟು ಮೆಲುಕು

ಹೌಜ್ ಖಾಸ್‌ ಕಾಂಪ್ಲೆಕ್ಸ್‌ನಲ್ಲಿ ಕಳೆದ ಕೆಲ ಕ್ಷಣಗಳ ವಿವರ ಇಂತಿದೆ.

ಹೌಜ್ ಖಾಸ್‌ ಅಥವಾ ರಾಯಲ್‌ ಟ್ಯಾಂಕ್‌: ಹೌಜ್ ಖಾಸ್‌ ಅನ್ನುವ ಶಬ್ಧ ಅರ್ಥವೇ 'ರಾಯಲ್‌ ಟ್ಯಾಂಕ್‌ (ಶ್ರೀಮಂತ ಕೊಳ)' ಇಲ್ಲಿನ ಸಿರಿ ನಗರದಲ್ಲಿ ಅಲ್ಲಾವುದ್ದೀನ್‌ ಖಿಲ್ಜಿ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಈ ನೀರಿನ ಕೊಳವನ್ನು ಆವರಣದಲ್ಲಿ ತೆಗೆಸಲಾಯಿತು. ನಗರಕ್ಕೆ ಹಾಗೂ ಈ ಭಾಗದಲ್ಲಿ ನೀರು ಪೂರೈಕೆ ಮಾಡುವುದು ಇದನ್ನು ತೆಗೆಸುವ ಹಿಂದಿನ ಉದ್ದೇಶವಾಗಿತ್ತು. ಆದಾಗ್ಯೂ ಅದು ಅಂದು ನೀರು ಬರದೇ ಬಳಕೆಗೆ ಸಿಗದಂತಾಯಿತು. ಹಾಗೆಯೇ ಬಿಟ್ಟು ಬಿಡಲಾಯಿತು. ಇದನ್ನು ಇತ್ತೀಚೆಗಷ್ಟೆ ಪುನರುಜ್ಜೀವನಗೊಳಿಸಲಾಗಿದೆ. ಈ ಕೊಳದ ಸುತ್ತಲಿನ ಭಾಗವನ್ನು ಕೂಡ ಸುಂದರವಾಗಿಸಲಾಗಿದೆ. ಅತ್ಯಾಕರ್ಷಕ ಉದ್ಯಾನ ನಿರ್ಮಿಸಿ ಉತ್ತಮ ನಿರ್ವಹಣೆ ಕೂಡ ಮಾಡಲಾಗುತ್ತಿದೆ. ಜಾಗಿಂಗ್‌ ಹಾಗೂ ವಾಕಿಂಗ್‌ ಮಾಡುವವರಿಗೆ ಇದೊಂದು ಉತ್ತಮ ತಾಣವಾಗಿದೆ.

ಮದರಸಾ/ ಇಸ್ಲಾಮಿಕ್‌ ಸೆಮಿನರಿ: ಈ ಶಿಕ್ಷಣ ಸಂಸ್ಥೆಯು 1352 ರಲ್ಲಿ ಆರಂಭವಾಗಿಯಿತು. ದಿಲ್ಲಿ ಸುಲ್ತಾನರ ಕಾಲದಲ್ಲಿ ಆರಂಭವಾದ ಒಂದು ಜನಪ್ರಿಯ ಶಿಕ್ಷಣ ಸಂಸ್ಥೆ ಇದು. ಅಲ್ಲದೇ ಅತ್ಯುತ್ತಮ ಸೌಲಭ್ಯ ಹಾಗೂ ಅಗತ್ಯ ಸೌಕರ್ಯ ಒಳಗೊಂಡ ವಿಶ್ವದ ಅತ್ಯುತ್ತಮ ಮದರಸಾ ಎಂದು ಇದು ಜನಪ್ರಿಯವಾಗಿದೆ.

ಫಿರೋಜ್‌ ಶಾ ಅವರ ಟೊಂಬ್‌: ತುಘಲಕ್‌ ರಾಜ ಮನೆತದ ಆಡಳಿತದ ಮೂರನೇ ಚಕ್ರವರ್ತಿ ಫಿರೋಜ್‌ ಶಾ. ಇವರ ಟೊಂಬ್‌ ಇದೇ ಆವರಣದಲ್ಲಿದೆ. ಹೌಜ್ ಖಾಸ್‌ ಕಾಂಪ್ಲೆಕ್ಸ್‌ನ ಇನ್ನೊಂದು ಪ್ರಮುಖ ಆಕರ್ಷಣೆ ಈ ಟೊಂಬ್‌. ಇಂಡೋ-ಇಸ್ಲಾಮಿಕ್‌ ಶೈಲಿಯ ವಾಸ್ತುಶಿಲ್ಪ ಬಳಸಿ ಇದನ್ನು ಸಿದ್ಧಪಡಿಸಲಾಗಿದೆ. 1352 ಹಾಗೂ 1354 ರ ನಡುವಿನ ಅವಧಿಯಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿದೆ. ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಇದು ಶಾಶ್ವತ ಸ್ಮಾರಕವಾಗಿದೆ. ಪ್ರಸ್ತುತ ಈ ನಿರ್ಮಾಣದ ಅಡಿಯೇ ಫಿರೋಜ್‌ ಶಾನ ಪುತ್ರ ಹಾಗೂ ಮೊಮ್ಮಗನ ಟೊಂಬ್‌ ಕೂಡ ಇದೆ.

ಜಿಂಕೆ ಉದ್ಯಾನ: ಇದು ಇತ್ತೀಚೆಗೆ ಅಭಿವೃದ್ಧಿ ಹೊಂದಿದ ಉದ್ಯಾನವಾಗಿದೆ. ಸಂಕೀರ್ಣದ ಪ್ರವೇಶದ ಸಮೀಪವೇ ಇರುವ ಕೊಳದ ಬಳಿಯೇ ಈ ಉದ್ಯಾನ ಇದೆ. ಅತ್ಯುತ್ತಮವಾಗಿ ಉದ್ಯಾನವನ್ನು ನಿರ್ವಹಣೆ ಮಾಡಲಾಗಿದೆ. ಇಲ್ಲಿ ಸುಂದರ ಜಿಂಕೆಗಳು, ಗುನಿಯಾ ಮೊಲಗಳು, ಮೊಲಗಳು, ನವಿಲುಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತವೆ.

ಪ್ರತಿ ಸಾಯಂಕಾಲ ಇಲ್ಲಿ ಧ್ವನಿ, ಬೆಳಕು ಕಾರ್ಯಕ್ರಮವನ್ನು ಈ ಬೃಹತ್‌ ಹೌಜ್ ಖಾಸ ಒಳಗೆ ಪ್ರವಾಸೋದ್ಯಮ ಇಲಾಖೆಯು ಆಯೋಜಿಸುತ್ತದೆ. ಇನ್ನು ಇದರ ಪ್ರವೇಶ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಮಾತ್ರ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat