Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಅಗ್ರಸೇನ್‌ ಕಿ ಬಾವೋಲಿ

ಅಗ್ರಸೇನ್‌ ಕಿ ಬಾವೋಲಿ, ದೆಹಲಿ

9

ಅಗ್ರಸೇನ್‌ ಕಿ ಬಾವೋಲಿಯು ದಿಲ್ಲಿಯ ಒಂದು ಅಪರೂಪದ ಹಾಗೂ ಕುತೂಹಲಕಾರಿ ಸ್ಮಾರಕವಾಗಿದೆ. ರಾಷ್ಟ್ರದ ರಾಜಧಾನಿಯಾಗಿರುವ ದಿಲ್ಲಿಯು ಅತ್ಯಾಧುನಿಕ ಹಾಗೂ ಬೃಹತ್‌ ನಗರವಾಗಿದ್ದು, ಇಲ್ಲಿನ ಐತಿಹಾಸಿಕ ವೈಶಿಷ್ಟ್ಯತೆ ಹಾಗೂ ವಿಶೇಷತೆಯನ್ನು ಹೆಚ್ಚಿನವರು ತಿಳಿದಿಲ್ಲ. ನಗರವಾಗಿ ಕಾಣುವ ದಿಲ್ಲಿ, ಐತಿಹಾಸಕವಾಗಿಯೂ ಪ್ರಸಿದ್ಧಿ ಪಡೆದಿದೆ.

ಭಾರತೀಯ ಪ್ರಾಚ್ಯವಸ್ತು ಇಲಾಖೆಯು, ಅಗ್ರಸೇನ್‌ ಕಿ ಬಾವೋಲಿಯ ನಿರ್ವಹಣೆಯ ಹೊಣೆ ಹೊತ್ತಿದೆ. ಇದು ಇಲ್ಲಿನ ಹೈಲೆ ಮಾರ್ಗದಲ್ಲಿದ್ದು, ಕೊನ್ಗುಟ್‌ ಪ್ಯಾಲೇಸ್‌ಗೆ ಸಮೀಪದಲ್ಲಿದೆ. 15 ಮೀಟರ್‌ ಅಗಲ ಹಾಗೂ 60 ಮೀಟರ್‌ ಉದ್ದವಾದ ಕಲಾತ್ಮಕ ಮೆಟ್ಟಿಲುಗಳ ಮಾರ್ಗ ಒಳಗೊಂಡಿದೆ. ಇದರ ನಿರ್ಮಾಣವನ್ನು ಯಾರು ಮಾಡಿದರು, ಪೂರ್ಣಗೊಳಿಸಿದರು ಎನ್ನುವ ಬಗ್ಗೆ ಇದುವರೆಗೂ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಆದರೆ ಈ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಸ್ಮಾರಕವನ್ನು ಮಹಾರಾಷ್ಟ್ರದ ಅರಸು ಅಗ್ರಸೇನನ ಅವಧಿಯಲ್ಲಿ ನಿರ್ಮಿಸಿದ್ದು ಎಂದು ಹೇಳಲಾಗುತ್ತದೆ. ಇದನ್ನು ನಂತರ ಅಂದರೆ 14ನೇ ಶತಮಾನದಲ್ಲಿ ಅಗ್ರವಾಲ್‌ ಸಮುದಾಯದ ಸದಸ್ಯರು ನವೀಕರಿಸಿದರು.

ಇಲ್ಲಿರುವ ಮೆಟ್ಟಿಲುಬಾವಿಯು ಆಕರ್ಷಕವಾಗಿದ್ದು, ಒಟ್ಟು 103 ಮೆಟ್ಟಿಲುಗಳನ್ನು ಹೊಂದಿದೆ. ಬುಡದಲ್ಲಿ ನೀರಿನ ಕೊಳವಿದ್ದು, ಮೇಲೆ ಹತ್ತಲು ಆರಂಭಿಸಿದವರಿಗೆ ಆಯಾಸವಾಗದಿರಲಿ ಅಂತ ಇವನ್ನು ಐದು ವಿಭಾಗವಾಗಿ ವಿಂಗಡಿಸಲಾಗಿದೆ. ಇತರೆ ಮೆಟ್ಟಿಲುಗಳ ಮಾದರಿಯಲ್ಲಿ ಇದಿಲ್ಲ. ಬದಲಾಗಿ ವರ್ತುಲಾಕಾರದಲ್ಲಿ ಮೆಟ್ಟಿಲು ನಿರ್ಮಾಣವಾಗಿದೆ. ಒಂದರ ನಂತರದ ಒಂದು ಮೆಟ್ಟಿಲು ಏರುಮುಖವಾಗಿ ಸಮಾನ ಅಂತರದಲ್ಲಿ ನಿರ್ಮಾಣಗೊಂಡಿವೆ. ಮೇಲ್ಭಾಗದಲ್ಲಿ ತೆರಳಿದರೆ ಒಂದು ಕಡೆ ಛಾವಣಿಯ ನೆರಳಿರುವುದು ಗಮನಿಸಬಹುದು. ಇನ್ನೊಂದೆಡೆ ಛಾವಣಿ ಇಲ್ಲ ಆದರೆ ಬೇವಿನ ಮರವೊಂದಿದ್ದು ಅದರ ನೆರಳು ಆಪ್ಯಾಯಮಾನವಾಗಿ ಸಿಗುತ್ತದೆ. ಇಂದು, ಬಾವೋಲಿಯ ಕೊಳದಲ್ಲಿ ನೀರಿಲ್ಲ. ಆದರೂ ಪಾರಿವಾಳ ಹಾಗೂ ಬಾವಲಿ ಮತ್ತು ಇತರೆ ಪಕ್ಷಿಗಳ ಆವಾಸವಾಗಿ ಜನಪ್ರಿಯವಾಗಿದೆ. ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಅಡಿ ಸ್ಮಾರಕದ ರಕ್ಷಣೆ ಹಾಗೂ ನಿರ್ವಹಣೆ ಇದೆ. ಇದನ್ನು ಏನ್ಶಿಯಂಟ್‌ ಮಾನ್ಯುಮೆಂಟ್ಸ್‌ ಅಂಡ್‌ ಆರ್ಕಿಯಾಲಾಜಿಕಲ್‌ ಸೈಟ್ಸ್‌ ಅಂಡ್‌ ರಿಮೇನ್ಸ್‌  ಕಾಯ್ದೆ 1958 ರ ಅಡಿಯಲ್ಲಿ ಸಂರಕ್ಷಿಸಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri