ಬರಸೂರ್ ದಾಂತೇವಾಡಾದ ಹತ್ತಿರವಿರುವ ಒಂದು ನಿದ್ರಾವಸ್ತೆಯಲ್ಲಿರುವ ಹಳ್ಳಿಯೆಂದು ಹೇಳಬಹುದು. ಈ ಹಿಂದೆ ಇದನ್ನು ಒಂದು ದೇವಾಲಯಗಳ ಮತ್ತು ಕೊಳಗಳ ಊರೆಂದು ಕರೆಯುವ ಕಾರಣಗಳೆಂದರೆ ಇಲ್ಲಿ ಸುಮಾರು 147 ದೇವಾಲಯಗಳು ಮತ್ತು ಅದೇ ಸಂಖ್ಯೆಯ ಕೊಳಗಳು ಇತ್ತೆಂಬ ನಂಬಿಕೆ.
ಅನೇಕ ಶತಮಾನಗಳು ಕಳೆದನಂತರ ಈ ಸ್ಥಳವು ತನ್ನ ವೈಭವವನ್ನು ಕಳೆದುಕೊಂಡು ಒಂದು ಕಾಲದಲ್ಲಿ ವೈಭವಗಳಿಂದ ಮೆರೆಯುತ್ತಿದ್ದ ಸ್ಥಳವು ಇಂದು ಆ ದೇವಾಲಯಗಳ ಅವಶೇಷಗಳು ಇದ್ದು ಹಳೆಯ ವೈಭವದ ಸ್ಮರಣೆಗಳು ಮಾತ್ರವೇ ಉಳಿದುಕೊಂಡಿವೆ. ಉಳಿದಿರುವ ದೇವಾಲಯಗಳಪೈಕಿ ಹೆಸರಾಂತ ಮಾಮ-ಭಾನ್ಜಾ ದೇವಾಲಯ, ಚಂದ್ರಾದಿತ್ಯ ದೇವಾಲಯ ಮತ್ತು ಬತ್ತೀಸ ದೇವಾಲಾಯಗಳಿವೆ. ಗಣೇಶನ ಒಂದು ಬೃಹತ್ತಾದ ಕಲ್ಲಿನ ಪ್ರತಿಮೆಯೂ ಕೂಡ ಭೇಟಿಮಾಡಲು ಬಹಳ ಸೂಕ್ತವಾಗಿದೆ.