ಜಂಪೋರ್ ಬೀಚ್ ಮೋಡಿ ಮಾಡುವ ಬೀಚುಗಳಲ್ಲಿ ಒಂದಾಗಿದೆ. ಬೀಚ್ ಪ್ರಿಯರಿಗೆ ಪ್ರಕೃತಿಯ ಶಾಂತಿಯುತ ಭವ್ಯ ಮತ್ತು ಹಿತವಾದ ವಾತಾವರಣದೊಂದಿಗೆ ಕಾಲ ಕಳೆಯಲು ಈ ಸುಂದರ ಬೀಚ್ ಒಳ್ಳೆಯ ಪ್ರದೇಶ.
ಇಲ್ಲಿರುವ ಬೀಸುವ ಗಾಳಿ ಮತ್ತು ಬೆಳೆದಿರುವ ಮರಗಳ ವಾತಾವರಣ, ಜನಸಂದಣಿಯಿಂದ ದೂರ ಇರಬಯಸುವ ಏಕಾಂತ ಬಯಸುವವರಿಗೆ ಉತ್ತಮ ಸಾಥ್ ನೀಡುತ್ತದೆ.
ಜಂಪೋರ್ ನ ಬೀಚ್ ನಲ್ಲಿ ಪ್ರವಾಸಿಗರಿಗೆ ಇಷ್ಟವಾಗುವುದು ಇದರ ಮರಳು ಮತ್ತು ಅಲೆಗಳು ಕಡಿಮೆ ಇದ್ದಾಗ. ಏಕೆಂದರೆ ಸಮುದ್ರವು ತೀರದ ಹೆಚ್ಚಿನ ಕೆಳ ಪ್ರಮಾಣದಲ್ಲಿ ಇಳಿಯುತ್ತದೆ. ಪ್ರವಾಸಿಗರು ಒದ್ದೆಯಾದ, ನುಣುಪಾದ ಮರಳಿನ ಮೇಲೆ ನಡೆದಾಡಬಹುದು ಮತ್ತು ಕಪ್ಪೆಚಿಪ್ಪು ಮತ್ತಿತರ ಸಾಗರ ಸ್ಮಾರಕಗಳನ್ನು ಸಂಗ್ರಹಿಸಿಡಬಹುದು.
ತೀರದ ಆಳ ಕಡಿಮೆಯಾದಾಗ, ಶಾಂತಗೊಂಡಾಗ ಇಲ್ಲಿ ಈಜಲು ಇಚ್ಚಿಸುವವರು ಈಜಬಹುದು. ಸೆಪ್ಟೆಂಬರ್ ನಿಂದ ಮೇ ಬೀಚ್ ಗೆ ಭೇಟಿ ನೀಡಲು ಉತ್ತಮ ಕಾಲ.