Search
  • Follow NativePlanet
Share

ದಮನ್ - ಸಮುದ್ರ,ಮರಳು ಮತ್ತು ಸೂರ್ಯನ ಜೊತೆಗೆ ಅದ್ಬುತ ದಿನಗಳು

23

ಸುಮಾರು 450 ವರ್ಷಗಳ ಹಿಂದೆ ದಮನ್ ಪ್ರದೇಶವು, ಗೋವಾ, ದಾದ್ರಾ ಮತ್ತು ನಗರ್ ಹವೇಲಿಗಳಂತೆ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಡಿಸೆಂಬರ್ 19, 1961 ರಲ್ಲಿ ದಮನ್ ಮತ್ತು  ಅರಬ್ಬೀ ಸಮುದ್ರದ ಕೆಲವು ಕರಾವಳಿ ತೀರದ ಪದೇಶಗಳು ಗಣತಂತ್ರ ಹೊಂದಿದವು. ಆದಾಗ್ಯೂ, ಪೋರ್ಚುಗಲ್ ಸರ್ಕಾರವು 1974 ರ ತನಕ ದಮನ್ ಗಣತಂತ್ರವಾಗಿದ್ದನ್ನು ಸಮ್ಮತಿಸಿರಲಿಲ್ಲ.

1987 ರ ವರೆಗೆ ದೀವ್, ದಮನ್ ಮತ್ತು ಗೋವಾ ಒಂದೇ ಕೇಂದ್ರಾಡಳಿತ ಅಡಿಯಲ್ಲಿದ್ದವು. ಗೋವಾ ರಾಜ್ಯವಾದಾಗ ದೀವ್ ಮತ್ತು ದಮನ್ ಕೇಂದ್ರಾಡಳಿತ ಪ್ರದೇಶವಾಗಿ ಉಳಿದವು. ದೀವ್ ಮತ್ತು ದಮನ್ ಗಳು ಒಂದಕ್ಕೊಂದು 400 ಕಿ.ಮೀ ಗಳಷ್ಟು ಅಂತರದಲ್ಲಿವೆ.

ವರ್ಷಗಳು ಕಳೆದಂತೆ ದಮನ್, ವಿವಿಧ ಜನಾಂಗ ಮತ್ತು ಸಂಸ್ಕೃತಿಗಳ ಒಂದು ಸಮ್ಮಿಳನದ ಸ್ಥಾನವಾಗಿ ಮಾರ್ಪಟ್ಟಿದೆ.  ಈ ಕೇಂದ್ರಾಡಳಿತ ಪ್ರದೇಶ ಅರಬ್ಬೀ ಸಮುದ್ರದುದ್ದಕ್ಕೂ ಚಾಚಿಕೊಂಡಿರುವ ಕರಾವಳಿಯ ಒಂದು ಶಾಂತಿ ಸ್ವರ್ಗವಾಗಿದೆ. ದಮನ್ ನಿಸರ್ಗದೊಂದಿಗಿನ ನಿಕಟತೆ ಬಯಸುವ ಮತ್ತು ವಿಶ್ರಾಮ ಬಯಸುವ ಪರಿಸರ ಸ್ನೇಹಿಗಳನ್ನು ಆಕರ್ಷಿಸುತ್ತದೆ. ಈ ನಗರವು ದಮನ್ ಗಂಗಾ ನದಿಯಿಂದಾಗಿ ದೊಡ್ಡ ದಮನ್ ಮತ್ತು ಸಣ್ಣ ದಮನ್ ಎಂದು ವಿಂಗಡಣೆಗೊಂಡಿದೆ.

ದಮನ್ ನ ಪ್ರವಾಸಿ ಕೇಂದ್ರಗಳು

ಪ್ರಕೃತಿ ಉತ್ಸಾಹಿಗಳಿಗೆ ದಮನ್ ಸ್ವರ್ಗವಿದ್ದಂತೆ. ಅರಬ್ಬೀ ಸಮುದ್ರದ ತಪ್ಪಲಿನ ಕರಾವಳಿಯ ಬದಿಯಲ್ಲಿರುವ ಪ್ರಸಿದ್ಧ ಬೀಚ್ ಗಳನ್ನು ಹೊಂದಿದ ಪ್ರದೇಶ ಇದಾಗಿದೆ. ಗಾಳಿ, ಮರಗಳ ಅದ್ಭುತ ತೋಪುಗಳಿಂದ ಸುತ್ತುವರೆಯಲ್ಪಟ್ಟ ಜಂಪೋರ್  ಬೀಚ್, ಒತ್ತಡದ ವ್ಯಾಪಾರ ಜೀವನ ಮತ್ತು ಜನಸಂದಣಿಯಿಂದ ಮುಕ್ತಿ ಬಯಸುವ ಜನರಿಗೆ ಏಕಾಂತ ಒದಗಿಸುವ ಸ್ಥಳವಾಗಿದೆ. ಸಣ್ಣ ದಮನ್ ನಿಂದ 3  ಮೈಲಿ ದೂರದಲ್ಲಿರುವ ದೇವ್ಕಾ ಬೀಚ್ ಈಜಲು ಒಳ್ಳೆಯ ಬೀಚ್ ಆಗಿದೆ. ಅಲೆಗಳು ಕಡಿಮೆ ಇರುವಾಗ ಇಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಿಕೊಳ್ಳಬಹುದು. ದಮನ್ ನಲ್ಲಿ ಕೆಲವು ಆಸಕ್ತಿಕರ ಮೋಜು ಮತ್ತು ವಾಟರ್ ಪಾರ್ಕ್ ಗಳು ಇವೆ. ದೇವ್ಕಾ ಬೀಚ್ ನಲ್ಲಿರುವ ಮನರಂಜನಾ ಪಾರ್ಕ್ ಬೀಚ್ ಒಂದು ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತದೆ.

ದಮನ್ ನ ಕದೈಯಾ ಎಂಬ ಹಳ್ಳಿಯಲ್ಲಿ ಮಿರಸಲ್ ರೆಸಾರ್ಟ್ ಮತ್ತು ವಾಟರ್ ಪಾರ್ಕ್ ಇದೆ. ಸುಂದರವಾದ ಸರೋವರ ಮತ್ತು 2 ದ್ವೀಪ ಗಳು ಸೇತುವೆಗೆ ಸೇರಿಕೊಂಡಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಈ ಉದ್ಯಾನವನ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿದೆ. ಕಂಠ ಕಪಿ ರಸ್ತೆಯಲ್ಲಿ ಇನ್ನೊಂದು ವಾಟರ್ ಪಾರ್ಕ್ ವೈಭವ ಉದ್ಯಾನವನವಿದೆ, ಇದು ದಮನ್ ನಿಂದ ಅಂದಾಜು 7 ಕಿ ಮೀ ಅಂತರದಲ್ಲಿದೆ. ಇಲ್ಲಿ ತೆಂಗಿನಕಾಯಿ, ಸಪೋಟ ಮತ್ತು ಮಾವಿನ ಮರಗಳಿವೆ. ಎಲ್ಲ ವಯಸ್ಸಿನವರಿಗೂ ಹೊಂದಾಣಿಕೆಯಾಗುವ ಸುಮಾರು 36 ವಾಟರ್ ರೈಡ್ ಗಳು ಇಲ್ಲಿ ಲಭ್ಯವಿದೆ.

ಒಂದು ಕಾಲದಲ್ಲಿ ಪೋರ್ಚುಗೀಸರ ಕಾಲೊನಿಯಾಗಿದ್ದ ದಮನ್ ನಲ್ಲಿ ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ಚರ್ಚ್ಗಳನ್ನೂ ಕಾಣಬಹುದು. ಮೋಟಿ ದಮನ್ ನಲ್ಲಿರುವ ಬಾಮ್ ಜೀಸಸ್ ಚರ್ಚ್ ಆಗಿನ ಕಾಲದ ಪೊರ್ಚಗೀಸರ ಕಲೆ, ವಾಸ್ತುಶಿಲ್ಪಗಳಿಗೆ ಮಾದರಿ ಎನ್ನಬಹುದು. 17 ನೆ ಶತಮಾನದಲ್ಲಿ ಪೋರ್ಚುಗೀಸರು ಕಟ್ಟಿದ 'ಚಾಪೆಲ್ ಆಫ್ ಅವರ್ ಲೇಡಿ ಆಫ್ ರೋಸರಿ' ಎಂಬುದು ದಮನ್ ನ ಅತಿ ಹಳೆಯ ಧಾರ್ಮಿಕ ಸ್ಮಾರಕವಾಗಿದೆ.

ಪೋರ್ಚುಗೀಸರು ದಾಳಿಕೋರರಿಂದ ರಕ್ಷಿಸಿಕೊಳ್ಳಲು ಕೋಟೆಗಳನ್ನು ಕೂಡ ಕಟ್ಟಿದರು. ಅವುಗಳಲ್ಲಿ ಸಂತ ಜೆರೋಮ್ಸ್ ಮತ್ತು ದಮನ್ ಕೋಟೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಶಿಸುತ್ತವೆ. ದಮನ್ ನಲ್ಲಿ ಲೈಟ್ ಹೌಸ್ ಅನ್ನು ಕೂಡ ನೋಡಬಹುದು.

ದಮನ್ ಪ್ರಸಿದ್ಧವಾಗಿದೆ

ದಮನ್ ಹವಾಮಾನ

ಉತ್ತಮ ಸಮಯ ದಮನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದಮನ್

  • ರಸ್ತೆಯ ಮೂಲಕ
    ಮುಂಬೈ - ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ 8, ಇಲ್ಲಿನ ವಾಪಿ ಮೂಲಕ ಹಾದುಹೋಗುತ್ತದೆ. ಇದಲ್ಲದೆ ಇಲ್ಲಿ ಮುಂಬೈ, ಸುರತ್, ಅಹಮದಾಬಾದ್, ಉದಯಪುರ, ನಾಶಿಕ್ ಮತ್ತು ಶಿರಡಿ ಗಳಿಂದ ಪ್ರತಿದಿನ ಬಸ್ಸುಗಳು ಓಡಾಡುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದಮನ್ ನಿಂದ 12 ಕಿ ಮೀ ಅಂತರದಲ್ಲಿರುವ ಗುಜರಾತ್ ನ ವಾಪಿ ಹತ್ತಿರದ ಮುಖ್ಯ ರೈಲು ನಿಲ್ದಾಣ. ಇಲ್ಲಿನ ರೈಲು ಗುಜರಾತ್ ನ ಅಹಮದಾಬಾದ್ ಮತ್ತು ಮುಂಬೈ ನ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಸೂಪರ್ ಫಾಸ್ಟ್ ರೈಲುಗಳಾದ ಅಹಮದಾಬಾದ್ ಮತ್ತು ಮುಂಬೈ ನಡುವಿನ ಶತಾಬ್ದಿ ರೈಲು ಇಲ್ಲಿ ನಿಲ್ಲುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮುಂಬೈ ಹತ್ತಿರದ ವಿಮಾನ ನಿಲ್ದಾಣ. ದಮನ್ ನಿಂದ 170 ಕಿ.ಮೀ ಅಂತರದಲ್ಲಿದೆ. ಇಲ್ಲಿಂದ ನೀವು ಟ್ಯಾಕ್ಸಿ ಅಥವಾ ಬಸ್ ನ ಮೂಲಕ ದಮನ್ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat