ಡಾಲ್ಹೌಸಿಯಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಬಕ್ರೋಟಾ ಬೆಟ್ಟದಲ್ಲಿ ಟಿಬೇಟಿಯನ್ ಕರಕುಶಲ ಕೇಂದ್ರ ಇದೆ. ಗ್ರಾಹಕರು ಶಾಪಿಂಗ್ ಮಾಡಲು ಇದು ಪ್ರಶಸ್ತ ತಾಣ. ಕರಕುಶಲ ವಸ್ತುಗಳ ಆಯ್ಕೆಗೆ ಹೇರಳ ಅವಕಾಶ ಇಲ್ಲಿರುತ್ತದೆ. ಟಿಬೇಟಿಯನ್ ಕಲೆ ಹಾಗೂ ಸಂಸ್ಕೃತಿಯ ವಿಸ್ತ್ರತ ಪ್ರದರ್ಶನವೂ ಇಲ್ಲಾಗುತ್ತದೆ. ಸಾಕಷ್ಟು ವಿಭಿನ್ನ ಶೈಲಿಯ ಆಭರಣ, ದಿನಬಳಕೆ ವಸ್ತು, ಚೈನಾ ವಸ್ತುಗಳು ಇತ್ಯಾದಿ ವಸ್ತು ಲಭ್ಯವಿದೆ. ಇದಲ್ಲದೇ ಹೆಚ್ಚಿನದಾಗಿ ಟಿಬೇಟಿಯನ್ ಜವಳಿ ಬಟ್ಟೆ, ಮ್ಯಾಟ್, ಕಾರ್ಪೆಟ್ ಸಿಗುತ್ತವೆ. ಪ್ರವಾಸಿಗರು ಸರಿಸುಮಾರು ಇದಿರುವ ಪ್ರದೇಶವನ್ನು ಸರಿಯಾಗಿ ಸುತ್ತಿ ಬರಲು ಒಂದರಿಂದ ಎರಡು ಗಂಟೆ ಹಿಡಿಸುತ್ತದೆ. ಇಲ್ಲಿ ತಲುಪುವುದು ಕೂಡ ಸುಗಮ. ಸ್ವಂತ ವಾಹನ ಇದ್ದರೆ ತೊಂದರೆ ಇಲ್ಲಾ, ಇಲ್ಲವಾದರೆ ಟ್ಯಾಕ್ಸಿ, ಬಸ್ ಸೌಲಭ್ಯ ಇದೆ. ನಡೆದೇ ತೆರಳುವುದಾದರೂ ಹೆಚ್ಚು ದೂರ ಇಲ್ಲ.