ಡಾಲ್ಹೌಸಿಯಲ್ಲಿ ಗುರುತಾದ ನಿಸರ್ಗ ಸಂಚಾರ ತಾಣ ಗಂಜಿ ಪಹಾರಿ. ಇದರ ಅರ್ಥ ಬೋಳಾದ ಗುಡ್ಡ ಅಂತ. ಗುಡ್ಡದ ತುತ್ತತುದಿಯಲ್ಲಿ ಯಾವುದೇ ಮರ ಇಲ್ಲದ ಕಾರಣ ಈ ಹೆಸರನ್ನು ಇಡಲಾಗಿದೆ. ನಗರ ಕೇಂದ್ರದಿಂದ ಕನಿಷ್ಠ ಒಂದು ಗಂಟೆ ಕಾಲ್ನಡಿಗೆಯಲ್ಲಿ ಸಾಗಿದರೆ ಗುಡ್ಡದ ತಪ್ಪಲು ತಲುಪಬಹುದು. ಶುದ್ಧ ಗಾಳಿ ಹಾಗೂ ಗುಡ್ಡಗಳ ರಮಣೀಯ ನೋಟವನ್ನು ಇಲ್ಲಿ ಸವಿಯಬಹುದು.