ದಕ್ಷಿಣ ಮೂರ್ತಿ ಆವಿಷ್ಕರಿಸಿದ್ದು 1970 ರಲ್ಲಿ. ಡಾ. ಆರ್.ಪಿ. ಕೌಶಿಕ್ ಇದರ ಧಾರ್ಮಿಕ ಮುಖಂಡ. ಇವರು ಇದಕ್ಕೆ ಗ್ರಾಮ ಸಡಕ್ ಎಂದು ಹೆಸರಿಟ್ಟರು. ಡಾಲ್ಹೌಸಿಯ ಸುಭಾಷ್ ಚೌಕದಿಂದ ಇದು 200 ಕಿ.ಮೀ. ದೂರದಲ್ಲಿದೆ. ಇಲ್ಲಿ ಯೋಗ ಕಲಿಕೆಗೆ ಹೆಚ್ಚು ಪ್ರಾಧಾನ್ಯ ನೀಡಲಾಗಿದೆ. ಇದಲ್ಲದೇ ಇಲ್ಲಿ ಧಾರ್ಮಿಕತೆಯ ಪಾಠವೂ ಆಗುತ್ತದೆ. 1987ರಲ್ಲಿ ಕೌಶಿಕ್ ನಿಧನರಾದರು. ಆದರೂ ಇವರ ಅನುಯಾಯಿಗಳು ಎಂದಿನಂತೆ ಕಾರ್ಯಕ್ರಮವನ್ನು ನಡೆಸಿಕೊಂಡು ಸಾಗಿದ್ದಾರೆ. ಇದರಿಂದ ದಕ್ಷಿಣಾ ಮೂರ್ತಿಯಲ್ಲಿ ಸದಾ ಯೋಗ, ಸಭೆ, ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರುತ್ತದೆ.