ಬುಲ್ವಾನಿ ಮಾತಾ ಅಂತಲೇ ಬಾರಾ ಪಥೇರ್ ಜನಪ್ರಿಯವಾಗಿದೆ. ಅಲಿಹಾ ಹಳ್ಳಿ ಹಾಗೂ ಕಾಲಾತೋಪ್ನ ನಡುವೆ ಇದು ನೆಲೆಸಿದೆ. ಇದು ಧ್ಯಾನಕುಂಡ ಬೆಟ್ಟದದ ಬುಡದಲ್ಲಿದೆ. ವರ್ಷದ ಪ್ರತಿ ಜುಲೈ ತಿಂಗಳಲ್ಲಿ ಇಲ್ಲಿ ಅತಿದೊಡ್ಡ ಜಾತ್ರೆ ನಡೆಯುತ್ತದೆ. ಬುಲ್ವಾನಿ ಮಾತೆಯ ಆರಾಧಕರು ಇದನ್ನು ಆಯೋಜಿಸುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಜನ ಭಕ್ತರು ಇಲ್ಲಿ ಸೇರುತ್ತಾರೆ. ಸರಿಸುಮಾರು 150 ವರ್ಷ ಹಳೆಯದಾದ ಈ ಮಂದಿರ ಐತಿಹಾಸಿಕ ಹಿನ್ನಲೆ ಒಳಗೊಂಡಿದೆ. ಮಧ್ಯಕಾಲ ಯುಗದ ವಾಸ್ತುಶಿಲ್ಪ ಮಾದರಿಯನ್ನು ಇದು ಒಳಗೊಂಡಿದೆ.
ಪ್ರವಾಸಿಗರು ಇಲ್ಲಿಗೆ ಟ್ಯಾಕ್ಸಿ ಪಡೆದು ಬರಬಹುದು. ಡಾಲ್ಹೌಸಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಬಾರಾ ಪಥೇರ್ ಒಂದು ಧಾರ್ಮಿಕ ಹಾಗೂ ಪ್ರವಾಸಿ ತಾಣ ಎರಡೂ ಆಗಿ ಜನಪ್ರಿಯವಾಗಿದೆ. ಟ್ರೆಕ್ಕಿಂಗ್ ಪ್ರಿಯರಿಗೂ ಇದು ಸ್ವರ್ಗ. ದಟ್ಟ ಅರಣ್ಯದಲ್ಲಿ ಸಾಗುವ ಅನುಭವ ಪಡೆಯಬಹುದು.