ಸಮುದ್ರ ಮಟ್ಟದಿಂದ 2085 ಮೀಟರ್ ಎತ್ತರದಲ್ಲಿರುವ ಸ್ಥಳ ಬಕ್ರೋಟಾ ಬೆಟ್ಟ. ಚಂಬಾ ಜಿಲ್ಲೆಯ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಬೆಟ್ಟದ ತಪ್ಪಲು ಸದಾ ಹಿಮದಿಂದ ಆವೃತ್ತವಾಗಿರುತ್ತದೆ. ಆಕರ್ಷಕ ಕಾಡು ಈ ಬೆಟ್ಟವನ್ನು ಇನ್ನಷ್ಟು ಸುಂದರವಾಗಿಸಿದೆ. ವನ್ಯ ಸಂಪತ್ತು ಪ್ರೇಮಿಗಳಿಗೆ ಇದು ಸ್ವರ್ಗ. ನಿಸರ್ಗ ಸೌಂದರ್ಯವನ್ನು ಮನಸೋ ಇಚ್ಛೆ ಅನುಭವಿಸುತ್ತಾರೆ.