ಪಿಚವರಂ ಮ್ಯಾಂಗ್ರೋವ್ ಅರಣ್ಯ ಈ ಭಾಗದ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಈ ಅರಣ್ಯ ವಿಶ್ವದ ಅತಿ ದೊಡ್ಡ ಮತ್ತು ಆರೋಗ್ಯಕರ ಮ್ಯಾಂಗ್ರೋವ್ ಕಾಡಾಗಿದೆ. ಇದು ಚಿದಂಬರಂ ನಿಂದ 14 ಕಿ. ಮೀ ದೂರದಲ್ಲಿದೆ. ಇಲ್ಲಿನ ನೀರಿನಲ್ಲಿ ಅಲ್ಲಲ್ಲಿ ಕಂಡುಬರುವ ಹಲವಾರು ದ್ವೀಪಗಳಲ್ಲಿ ಸ್ಥಳೀಯ ಮತ್ತು ವಲಸೆ ಬಂದಿರುವನೂರಾರುಜಾತಿಯ ಹಕ್ಕಿಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ನೀರು ಹಕ್ಕಿ,ಹೆರಾನ್ಸ್, ಪೆಲಿಕನ್, ನೀರು ಕಾಗೆಗಳು ಮತ್ತು ಬೆಳ್ಳಕ್ಕಿಗಳು ಹಾಗೂ ಇನ್ನೂ ಅನೇಕ ಹಕ್ಕಿಗಳು ಕಂಡುಬರುತ್ತದೆ. ಈ ಕಾಡುಗಳು ವಿಶೇಷವಾಗಿ ಸೆಪ್ಟೆಂಬರ್ ನಿಂದ ಎಪ್ರೀಲ್ ತಿಂಗಳ ವರೆಗೆ ಮತ್ತು ನವೆಂಬರ್ ತಿಂಗಳಿನಿಂದ ಜನವರಿ ತಿಂಗಳ ನಡುವೆ ವಿಶ್ವದಾದ್ಯಂತ ಪಕ್ಷಿ ವೀಕ್ಷಕರನ್ನು ಆಕರ್ಷಿಸುತ್ತವೆ. ಈ ಸ್ಥಳದ ಆಕರ್ಷಣೆಯನ್ನು ಹೆಚ್ಚಿಸಲು ಈ ಕಾಡಿನಲ್ಲಿ ಲಘು ದೋಣಿ ವಿಹಾರಸೌಲಭ್ಯಗಳೂ ಲಭ್ಯ.