Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವ್ಲಾಂಗ್ ಬೀಚ್ » ಹವಾಮಾನ

ಕೊವ್ಲಾಂಗ್ ಬೀಚ್ ಹವಾಮಾನ

ಕೋವಲಮ್ಮಿಗೆ ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಆವಧಿಯಲ್ಲಿ ಚಳಿಗಾಲವಿರುವಾಗ ಪ್ರವಾಸ ಕೈಕೊಳ್ಳಲು ಬಹಳ ಉತ್ತಮವಾಗಿದೆ. ತಾಪಮಾನವು 10 ರಿಂದ 26 ಡಿಗ್ರಿ ಸೆಲ್ಸಿಯುಸ್ ವ್ಯಾಪ್ತಿಯಲ್ಲಿದ್ದು ಸಹನೀಯವಾಗಿರುತ್ತದೆ.  ವಿಂಡ್ ಸರ್ಫಿಂಗ್ (Windsurfing) ಸಾಹಸಮಾಡಲು ಇಚ್ಚೆ ಇರುವವರು ಫೆಬ್ರುವರಿ ತಿಂಗಳಲ್ಲಿ  ವಿಂಡ್ಸರ್ಫಿಂಗ್ ರೆಗಟ್ಟಾ (Windsurfing Regatta) ಜರಗುವ ಸಮಯದಲ್ಲಿ ಭೇಟಿ ನೀಡಬಹುದು.

ಬೇಸಿಗೆಗಾಲ

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬೇಸಗೆ ಕಾಲವು ಕೋವಲಮ್ಮಿನಲ್ಲಿರುತ್ತದೆ. ಈ ಸಮಯದಲ್ಲಿ ತಾಪಮಾನವು ಅತಿ ತೀವ್ರತೆಗೆ ಹೋಗುತ್ತದೆ. ಬೇಸಗೆಯಲ್ಲಿ ಕೋವಲಮ್ಮನ್ನು ಭೇಟಿಮಾಡುವ ಸಮಯವಂತೂ ಅಲ್ಲ. ಬೇಸಗೆಯಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್ ತನಕ ಏರುವುದು ಮತ್ತು 32 ಡಿಗ್ರಿ ಸೆಲ್ಸಿಯಸ್ ಕೆಳಗಿನ ಮಟ್ಟವಾಗಿರುತ್ತದೆ. 

ಮಳೆಗಾಲ

ಕೋವಲಮ್ಮಿನಲ್ಲಿ ಮಳೆಗಾಲವು ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳ ನಡುವಣ ಆವಧಿಯಲ್ಲಿರುತ್ತದೆ. ತಾಪಮಾನವು ಈ ಸಮಯದಲ್ಲಿ ಸೂಕ್ತಮಟ್ಟಕ್ಕೆ ಇಳಿಯುತ್ತದೆ. ಕೋವಲಮ್ಮಿನಲ್ಲಿ ಮಳೆಯು ಪದೇ ಪದೇ ಬೀಳುತ್ತಿದ್ದು ತಾಪಮಾನವು ಕನಿಷ್ಠಮಟ್ಟದಲ್ಲಿರುತ್ತದೆ.

ಚಳಿಗಾಲ

ಚಳಿಗಾಲವು ಅಕ್ಟೋಬರ್ ಮತ್ತು ಫೆಬ್ರುವರಿ ನಡುವೆ ಕೋವಲಮ್ಮಿನಲ್ಲಿರುತ್ತದೆ. ಚಳಿಗಾಲದಲ್ಲಿ ತಾಪಮಾನವು ಅತೀ ಕಡಿಮೆಯೆಂದರೆ 10 ಡಿಗ್ರಿ ಸೆಲ್ಸಿಯುಸ್ ಇಳಿದು ಅತೀ ಹೆಚ್ಚೆಂದರೆ 26 ಡಿಗ್ರಿ ಸೆಲ್ಸಿಯುಸ್ಗೆ ಹೋಗುತ್ತದೆ.  ಈ ಸಮಯವು ಕೋವಲಮ್ಮಿಗೆ ಭೇಟಿನೀಡಲು ಅತ್ಯುತ್ತಮವಾಗಿದೆ.