Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಟ್ರಾಲಂ » ಹವಾಮಾನ

ಕುಟ್ರಾಲಂ ಹವಾಮಾನ

ಕುಟ್ರಾಲಂ ಪಟ್ಟಣಕ್ಕೆ ಭೇಟಿ ನೀಡಲು ವರ್ಷದ ಅತ್ಯುತ್ತಮ ಸಮಯವೆಂದರೆ ಮಳೆಗಾಲ ಮತ್ತು ಚಳಿಗಾಲ. ಅದ್ಭುತ ಜಲಪಾತಗಳು ಮತ್ತು ಆಹ್ಲಾದಕರ ಹವಾಮಾನ ಈ ಸ್ಥಳದ ಸೌಂದರ್ಯಕ್ಕೆ ಹೆಚ್ಚುವರಿ ಸೊಬಗನ್ನು ನೀಡುತ್ತ, ಪ್ರವಾಸಿಗರಿಗೆ ಅತ್ಯಂತ ಆಕರ್ಷಣೆಯನ್ನು ಉಂಟುಮಾಡುತ್ತವೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತಿಂಗಳಿನವರೆಗೆ ಕುಟ್ರಾಲಂ ನಲ್ಲಿ ಉರಿಯುವ ಬೇಸಿಗೆ! ಈ ಸಮಯದಲ್ಲಿ ಹವಾಮಾನ ಅತಿ ಶುಷ್ಕ ಮತ್ತು ಬಿಸಿಯಾಗಿರುತ್ತದೆ. ತಾಪಮಾನವೂ ಅಧಿಕವಾಗಿದ್ದು 23 ಡಿ.ಸೆ.ನಿಂದ 37 ಡಿ ಸೆ.ವರೆಗೂ ಮುಂದುವರಿಯುತ್ತದೆ. ಇಲ್ಲಿನ ಅತ್ಯಂತ ಆಕರ್ಷಣಿಯವಾದ ಜಲಪಾತಗಳು ಈ ಸಮಯದಲ್ಲಿ ಬತ್ತಿಹೋಗಿರುತ್ತವೆ. ಆದ್ದರಿಂದ ಬೇಸಿಗೆಯು ಕುಟ್ರಾಲಂ ಪ್ರವಾಸಕ್ಕೆ ಅಷ್ಟು ಯೋಗ್ಯವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟಂಬರ್ ತಿಂಗಳಿನವರೆಗೆ ಕುಟ್ರಾಲಂ ನಲ್ಲಿ ಉತ್ತಮ ಮಳೆಯಾಗುತ್ತದೆ. ಈ ಸಮಯದಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳು ನೋಡುಗರ ಮೈ-ಮನ ತಣಿಸುತ್ತವೆ. ತಣ್ಣನೆಯ ಗಾಳಿ ಈ ಆಕರ್ಷಣೆಗೆ ಇನ್ನಷ್ಟು ಪುಷ್ಠಿ ನೀಡುತ್ತದೆ. ಈ ಅವಧಿ ಕುಟ್ರಾಲಂಗೆ ಬರಲು ಅತ್ಯಂತ ಪ್ರಶಸ್ತವಾದ ಸಮಯ!

ಚಳಿಗಾಲ

ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಿನವರೆಗೆ ಇರುವ ಚಳಿಗಾಲ ಮಧ್ಯಮ ಮತ್ತು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶ 13 ಡಿ.ಸೆ ನಿಂದ 24 ಡಿ.ಸೆ ಗೆ ಏರುತ್ತದೆ.