ಶೆನ್ಬಗ(ಸಂಪಿಗೆ) ಮರಗಳ ನಡುವೆಯೆ ಹರಿಯುವ ಶೆನ್ಬಗ ದೇವಿ ಜಲಪಾತವು, ಅದೆ ಹೆಸರನ್ನು ಪಡೆದುಕೊಂಡಿದೆ. ಈ ಜಲಪಾತ 40 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ ಹಾಗು 'ಹನಿ ಜಲಪಾತ' ಕ್ಕೆ ಕೊಂಡೊಯ್ಯುವ ರಸ್ತೆಯ ಬದಿಯಲ್ಲಿದೆ. ಈ ಸ್ಥಳಕ್ಕೆ ಮುಖ್ಯ ಜಲಪಾತದಿಂದ ಚಾರಣ ಮಾರ್ಗದ ಮೂಲಕವೂ ತಲುಪಬಹುದು. ಜಲಪಾತದ ಹತ್ತಿರ, ದುರ್ಗಾದೇವಿಯ ಪುನರ್ಜನ್ಮವಾದ ಶೆನ್ಬಗ ದೇವಿಯನ್ನು ಪೂಜಿಸುವ ದೇವಾಲಯವನ್ನು ಕಾಣಬಹುದು. ಆದ್ದರಿಂದ ಈ ಜಲಪಾತವು ಗಮನಾರ್ಹ ಧಾರ್ಮಿಕ ನಂಬಿಕೆಯನ್ನೂ ಹೊಂದಿದೆ.