ಕಲುಗುಮಲೈ, ಕೋವಿಲ್ ಪಟ್ಟಿ ಮತ್ತು ಕುಟ್ರಾಲಂ ಮಾರ್ಗದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಪಟ್ಟಣ ಪ್ರಮುಖ ಮೂರು ದೇವಾಲಯಗಳಾದ ಜೈನ ನೆಲೆ, ವೆಟ್ಟುವನ್ ಕೋಯಿಲ್ ಮತ್ತು ಕಲುಗಸಲಮೂರ್ತಿ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. ಜೈನ ನಿವಾಸ ವಾಸ್ತುಶಿಲ್ಪ ಮತ್ತು ಜೈನರ ಗುಹಾ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಬೆಟ್ಟದ ದೇವತೆಯನ್ನು ಅರೈಮಲೈ ಅಲ್ವಾರ್ ಎಂದು ಕರೆಯಲಾಗುತ್ತದೆ.
ಇಲ್ಲಿರುವ ವೆಟ್ಟುವನ್ ಕೋಯಿಲ್ ಒಂದು ಅಪೂರ್ಣ ಹಿಂದೂ ದೇವಾಲಯವಾಗಿದ್ದರೆ, ಕಲುಗಸಲಮೂರ್ತಿ, ಭಗವಾನ್ ಮುರುಗನ್ ಗೆ ಸಮರ್ಪಿಸಲಾದ ದೇವಾಲಯವಾಗಿದೆ. ಈ ಪಟ್ಟಣ ವಿನಾಯಕ ದೇವಸ್ಥಾನ ಮತ್ತು ಅಯ್ಯನರ್ ನಂತಹ ಇತರೆ ದೇವಾಲಯಗಳಿಗೂ ನೆಲೆಯಾಗಿದೆ.