Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಹವಾಮಾನ

ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಹವಾಮಾನ

ಪ್ರವಾಸಿಗರು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ನೈಜತೆಯನ್ನು ಕಣ್ತುಂಬಿಕೊಳ್ಳಬೇಕೆಂದರೆ ನವೆಂಬರ್ ನಿಂದ ಮೇವರೆಗಿನ ಅವಧಿಯಲ್ಲಿ (ಚಳಿಗಾಲ ಮತ್ತು ಬೇಸಿಗೆ ಕಾಲಗಳು) ಮಳೆಗಾಲದ ಪೂರ್ವ ಮತ್ತು ನಂತರದ ಕಾಲಗಳು ಸಹ ಇಲ್ಲಿಗೆ ಭೇಟಿಕೊಡಲು ಸೂಕ್ತ ಕಾಲವಾಗಿವೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆ ಕಾಲವು ಇಲ್ಲಿ ಮಾರ್ಚ್ ನಲ್ಲಿ ಪ್ರಾರಂಭವಾಗಿ ಮೇನಲ್ಲಿ ಅಂತ್ಯಗೊಳ್ಳುತ್ತದೆ. ಈ ಅವಧಿಯಲ್ಲಿ ಇಲ್ಲಿ ಗರಿಷ್ಟ 40° ಸೆಲ್ಶಿಯಸ್ ಮತ್ತು ಕನಿಷ್ಠ 30° ಸೆಲ್ಶಿಯಸ್ ಉಷ್ಣಾಂಶವು ದಾಖಲಾಗುತ್ತದೆ.

ಮಳೆಗಾಲ

(ಜೂನ್‍ನಿಂದ ಸೆಪ್ಟೆಂಬರ್): ಮಳೆಗಾಲವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಮಳೆಗಾಲದಲ್ಲಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಅತ್ಯಧಿಕ ಪ್ರಮಾಣದ ಮಳೆ ಬೀಳುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲವು ಇಲ್ಲಿ ಡಿಸೆಂಬರ್ ನಿಂದ ಶುರುವಾಗಿ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಕನಿಷ್ಠ  5° ಸೆಲ್ಶಿಯಸ್ ಮತ್ತು ಗರಿಷ್ಠ 30° ಸೆಲ್ಶಿಯಸ್ ಉಷ್ಣಾಂಶವು ಕಂಡು ಬರುತ್ತದೆ. ಚಳಿಗಾಲದಲ್ಲಿ ಮುಂಜಾನೆಗಳು ಸ್ವಲ್ಪ ಮಟ್ಟಿಗೆ ಹಿಮದಿಂದ ಕೂಡಿರುತ್ತದೆ.